For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!

Hardik Pandya Buys New Wrist Watch Worth Rs 5 Cr Before IPL 2021
Hardik Pandya ಕೈನಲ್ಲಿರೋ ವಾಚ್ ಬೆಲೆ ಕೇಳಿದ್ರೆ ನಿಮಗೆ ಸುಸ್ತಾಗೋದು ಗ್ಯಾರೆಂಟಿ | Oneindia Kannada

ನವದೆಹಲಿ: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಸಿದ್ಧವಾಗಿದ್ದಾರೆ. ಶ್ರೀಲಂಕಾ ಪ್ರವಾಸದ ಬಳಿಕ ಐಪಿಎಲ್ ಮೂಲಕ ಕ್ರಿಕೆಟ್‌ ಅಂಗಳಕ್ಕೆ ಕಾಲಿಡಲು ಹಾರ್ದಿಕ್ ಎದುರು ನೋಡುತ್ತಿದ್ದಾರೆ. ಸೆಪ್ಟೆಂಬರ್‌ 19ರಿಂದ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ಹಾರ್ದಿಕ್ ಬೇರೊಂದು ವಿಚಾರಕ್ಕೆ ದೊಡ್ಡ ಸುದ್ದಿಯಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ ಮತ್ತು ಟಿ20 ವಿಶ್ವಕಪ್‌ನಲ್ಲಿ ಮಿಂಚಲು ಸಜ್ಜಾಗಿರುವ ಹಾರ್ದಿಕ್ ಪಾಂಡ್ಯ ರಿಸ್ಟ್ ವಾಚ್ ಕೊಂಡು ಬಹಳ ಸುದ್ದಿಯಾಗಿದ್ದಾರೆ. ವಾಚ್ ಎಂದರೆ ಇದು ಅಂತಿಂಥ ವಾಚ್ ಅಲ್ಲ, ಬಲು ದುಬಾರಿ ವಾಚ್. ಇದರ ಬೆಲೆ ಕೇಳಿದರೇನೆ ನೀವು ಉಬ್ಬೇರಿಸಬಹುದು. ಅಷ್ಟು ಬೆಲೆ ಬಾಳುವ ವಾಚ್ ಇದು.

'ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711' ಕೈ ಗಡಿಯಾರ

'ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711' ಕೈ ಗಡಿಯಾರ

ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಕೆಲವು ಫೋಟೋಗಳಲ್ಲಿ ಹಾರ್ದಿಕ್ ವಾಚ್ ಧರಿಸಿರುವ ಚಿತ್ರಗಳಿವೆ. ಇದು ಯಾವ ವಾಚ್ ಅಂದರೆ 'ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711' ಎಂಬ ಖ್ಯಾತ ಕಂಪನಿಯ ವಾಚ್. ಮುಂಬೈ ಇಂಡಿಯನ್ಸ್ ಆಟಗಾರ ಹಾರ್ದಿಕ್ ಧರಿಸಿರುವ ಈ 'ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711' ವಾಚ್‌ನ ಬೆಲೆಯೆಷ್ಟು ಗೊತ್ತಾ? ಬರೋಬ್ಬರಿ 5 ಕೋಟಿ ರೂ. ಹಾರ್ದಿಕ್‌ಗೆ ಇಂಥದ್ದೇ ದುಬಾರಿ ವಸ್ತುಗಳನ್ನು ಖರೀದಿಸುವ ಹವ್ಯಾಸವಿದೆ. ಅಷ್ಟೇ ಅಲ್ಲ, ಅತೀ ದುಬಾರಿ ಕಾರುಗಳೂ ಹಾರ್ದಿಕ್ ಅವರಲ್ಲಿವೆ. ಮುಂಬೈಯವರಾದ ಹಾರ್ದಿಕ್ ಪಾಂಡ್ಯ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ ಮುಂಬೈಯಲ್ಲಿ ಒಂದು 8 BKH ಫ್ಲ್ಯಾಟ್ ಕೊಂಡುಕೊಂಡಿದ್ದಾರೆ. ಇದೂ ದುಬಾರಿ ಬೆಲೆಯದ್ದು.

ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ಐಪಿಎಲ್ ಹಬ್ಬ

ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ಐಪಿಎಲ್ ಹಬ್ಬ

ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್‌ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಭಾರತದಲ್ಲಿ ನಡೆದಿದ್ದ ಆರಂಭಿಕ ಹಂತದ ಐಪಿಎಲ್ ವೇಳೆ ಕೋವಿಡ್ ಭೀತಿ ಹೆಚ್ಚಿದ್ದರಿಂದ ಅಭಿಮಾನಿಗಳಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡಿರಲಿಲ್ಲ. ಆದರೆ ಯುಎಇ ಟೂರ್ನಿ ವೇಳೆ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.

ಯುಎಇ ತಲುಪಿದ ಮುಂಬೈ, ಚೆನ್ನೈ ತಂಡಗಳು

ಯುಎಇ ತಲುಪಿದ ಮುಂಬೈ, ಚೆನ್ನೈ ತಂಡಗಳು

ಮುಂಬರುವ ಐಪಿಎಲ್‌ಗಾಗಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡೂ ತಂಡಗಳೂ ಯುಎಇ ತಲುಪಿವೆ. ಅದ್ಯ ಎರಡೂ ತಂಡಗಳೂ ಅಭ್ಯಾಸ ನಡೆಸುತ್ತಿವೆ. ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲೂ ತಂಡ ಯುಎಇಗೆ ತಲುಪಿರುವ ಬಗ್ಗೆ ಫೋಟೋಗಳನ್ನು ಹಾಕಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಾಕಿಕೊಳ್ಳಲಾಗಿದ್ದು, ಇದರಲ್ಲಿ, 'ಮುಂಬೈ ತಂಡ ಯುಎಇಗೆ ತಲುಪಿದೆ' ಎಂದು ಬರೆದುಕೊಳ್ಳಾಗಿದೆ. ಐಪಿಎಲ್ 2ನೇ ಹಂತದ ಪಂದ್ಯಗಳ ವೇಳೆ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿರುವುದರಿಂದ ಸದ್ಯ ಎರಡೂ ತಂಡಗಳು ಯುಎಇಗೆ ತಲುಪಿದೆ. ಸಿಎಸ್‌ಕೆ ಕೂಡ ತಂಡ ಯುಎಇ ತಲುಪಿರುವುದಕ್ಕೆ ಪೋಸ್ಟ್‌ಗಳನ್ನು ಹಾಕಿಕೊಂಡಿದೆ. ತಂಡದ ಪ್ರಮುಖ ಆಲ್ ರೌಂಡರ್ ಸುರೇಶ್ ರೈನಾ ದುಬೈಯಲ್ಲಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ಸೆಣಸಾಡಲಿವೆ. ಐಪಿಎಲ್‌ನಲ್ಲಿ ಅತೀ ಯಶಸ್ವಿ ತಂಡಗಳೆಂದರೆ ಇವು ಎರಡನೇ. ಚೆನ್ನೈ ಮೂರು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದರೆ, ಮುಂಬೈ ಐದು ಬಾರಿ ಚಾಂಪಿಯನ್ಸ್ ಎನಿಸಿದೆ.

Story first published: Wednesday, August 25, 2021, 10:35 [IST]
Other articles published on Aug 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+