ರೋಹಿತ್, ಧೋನಿ ಮೀರಿಸಿ ಟಿ20ಐ ವಿಶೇಷ ದಾಖಲೆ ಬರೆದ ಹರ್ಮನ್‌ಪ್ರೀತ್!

ಸೂರತ್, ಅಕ್ಟೋಬರ್ 5: ಭಾರತದ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಂತಾರಾಷ್ಟ್ರೀಯ ಟಿ20 ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಗುಜರಾತ್‌ನ ಸೂರತ್‌ನಲ್ಲಿ ಶನಿವಾರ (ಅಕ್ಟೋಬರ್ 4) ನಡೆದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಕೌರ್ ಈ ದಾಖಲೆ ನಿರ್ಮಿಸಿದ್ದಾರೆ.
ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಎದುರಿನ 6 ಪಂದ್ಯಗಳ ಟಿ20ಐ ಸರಣಿಯ ಕೊನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತದ ಪರ ಅಪರೂಪದ ದಾಖಲೆ ಬರೆದರು.
ಅಂದ್ಹಾಗೆ ಕೌರ್ ಮಾಡಿರುವ ಈ ಸಾಧನೆ, ಭಾರತದ ಪುರುಷರ ತಂಡದ ಶ್ರೇಷ್ಠ ಕ್ರಿಕೆಟರ್‌ಗಳಾದ ರೋಹಿತ್ ಶರ್ಮಾ, ಎಂಎಸ್ ಧೋನಿ ದಾಖಲೆಯನ್ನೂ ಮೀರಿಸಿದೆ.

ಮೊದಲ ಭಾರತೀಯ ಸಾಧಕಿ ಕೌರ್
ಸೂರತ್‌ನ ಲಾಲಭಾಯ್ ಕಾಂಟ್ರ್ಯಾಂಕ್ಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೌರ್ ಮೈದಾನಕ್ಕಿಳಿಯುತ್ತಲೇ ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿದೆ. ಯಾಕೆಂದರೆ ಅದು ಕೌರ್ ಅವರ 100ನೇ ಟಿ20ಐ ಪಂದ್ಯ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಭಾರತೀಯ ದಾಖಲೆಯಲ್ಲಿ ಕೌರ್ ಹೆಸರು ಅಚ್ಚಾಗಿದೆ.

ರೋಹಿತ್, ಧೋನಿ ದಾಖಲೆ ಬದಿಗೆ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಹೆಸರಿನಲ್ಲಿತ್ತು. ಇಬ್ಬರೂ 98 ಪಂದ್ಯಗಳನ್ನು ಆಡಿ, ದಾಖಲೆ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಈಗ ಕೌರ್ 100 ಟಿ20ಐ ಪಂದ್ಯಗಳ ಮೂಲಕ ಇಬ್ಬರ ದಾಖಲೆಯನ್ನೂ ಮೀರಿಸಿದ್ದಾರೆ.

ಭಾರತ ದುರ್ಬಲ ಬ್ಯಾಟಿಂಗ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ, ಲಿಜೆಲ್ ಲೀ 84, ಸುನೆ ಲೂಸ್ 62 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 175 ರನ್ ಬಾರಿಸಿತ್ತು. ಭಾರತದ ಮಹಿಳಾ ತಂಡ 17.3ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 70 ರನ್ ಸೇರಿಸಿ ದುರ್ಬಲ ಬ್ಯಾಟಿಂಗ್‌ಗೆ ಸಾಕ್ಷಿಯಾಯ್ತು. ಕೌರ್ ಕೂಡ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರು.

ವಿಶ್ವದ 10 ಆಟಗಾರ್ತಿಯರಲ್ಲಿ ಕೌರ್
ಅಂತಾರಾಷ್ಟ್ರೀಯ ಟಿ20ಯಲ್ಲಿ 100 ಪಂದ್ಯಗಳನ್ನಾಡಿದ ವಿಶ್ವದ 10 ಆಟಗಾರ್ತಿಯರಲ್ಲಿ ಕೌರ್ ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಸೂಸಿ ಬೇಟ್ಸ್ ಮತ್ತು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ 111 ಪಂದ್ಯಗಳೊಂದಿಗೆ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊನೆಯ ಪಂದ್ಯದಲ್ಲಿ 105 ರನ್‌ಗಳ ಹೀನಾಯ ಸೋಲು ಕಂಡರೂ ಭಾರತದ ಮಹಿಳಾ ತಂಡ, ಟಿ20 ಸರಣಿಯನ್ನು 3-2ರಿಂದ ಜಯಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications