ಟೀಮ್ ಇಂಡಿಯಾ ಬಲಿಷ್ಠವಾಗಿದ್ದು, ಯಾವುದೇ ತಂಡವನ್ನು ಮಣಿಸಬಲ್ಲದು: ಹರ್ಮನ್ ಪ್ರೀತ್
ಇನ್ನೇನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದೇ ಟೀಮ್ ಇಂಡಿಯಾದ ಗುರಿಯಾಗಿದೆ. ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಮಹಿಳೆಯರ ಟಿ20 ವಿಶ್ವಕಪ್ ಈಗ ಯುಎಇನಲ್ಲಿ ನಡೆಯಲಿದೆ. ಈ ಬಾರಿ ಭಾರತ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣುತ್ತಿದೆ.
ಭಾರತ ತಂಡ 2020ರ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆಸೀಸ್ ಮಹಿಳಾ ತಂಡ ಈ ವರೆಗೆ ಒಟ್ಟು 6 ಪ್ರಶಸ್ತಿಗಳನ್ನು ಗೆದ್ದಿದೆ. ಈ ಬಾರಿ ಟಿ20 ವಿಶ್ವಕಪ್‌ಗೆ ಮುನ್ನ ಟೀಮ್ ಇಂಡಿಯಾ ನಾಯಕ ಹರ್ಮನ್ ಪ್ರೀತ್ ಕೌರ್ ಪ್ರತಿಕಾಗೋಷ್ಠಿ ನಡೆಸಿದರು. ಈ ವೇಳೆ ಅವರು ಆಸ್ಟ್ರೇಲಿಯಾವನ್ನು ಗುರಿಯಾಗಿಸಿ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ನಮ್ಮ ತಂಡ ಬಲಿಷ್ಢವಾಗಿದೆ
ಟಿ20 ವಿಶ್ವಕಪ್‌ಗೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಮಾತನಾಡಿದ್ದಾರೆ. ಈ ವೇಳೆ ನಮ್ಮ ತಂಡ ಸಹ ಬಲಿಷ್ಠವಾಗಿದೆ. ಟೂರ್ನಿಯಲ್ಲಿ ಯಾವುದೇ ತಂಡಕ್ಕಾದ್ರೂ ಪೆಟ್ಟನ್ನು ನೀಡಬಹುದು. ಭಾರತ ಆಸ್ಟ್ರೇಲಿಯಾವನ್ನು ಸೋಲಿಸಬಹುದಾದ ತಂಡಗಳಲ್ಲಿ ಒಂದಾಗಿದೆ. ಇದು ನಿಜಕ್ಕೂ ತಂಡದ ಬೂಸ್ಟ್ ಹೆಚ್ಚಿಸಲಿದೆ. ನಾವು ಆಸೀಸ್ ತಂಡವನ್ನು ಸೋಲಿಸುವ ಕ್ಷಮತೆ ಇದೆ ಎಂಬುದು ನಮಗೆ ತಿಳಿದಿದೆ ಎಂದಿದ್ದಾರೆ.
ನಮ್ಮ ತಂಡ ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿದೆ. ನಮ್ಮ ತಂಡದಲ್ಲಿರುವ ಆಟಗಾರರು ಬಹಳ ದಿನಗಳಿಂದ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ನಮ್ಮ ತಂಡ ಈ ಬಾರಿ ಟೂರ್ನಿಯಲ್ಲಿ ಭಾಗವಹಿಸುವ ಉತ್ತಮ ತಂಡಗಳಲ್ಲಿ ಒಂದಾಗಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಹರ್ಮನ್ ತಿಳಿಸಿದ್ದಾರೆ. ಏಷ್ಯಾ ಕಪ್‌ನಲ್ಲೂ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಉತ್ತಮ ಕ್ರಿಕೆಟ್ ಆಡಿದ್ದೇವೆ. ಆದರೆ ನಾವು ಬಯಸಿದಂತೆ ಕಾರ್ಯವಾಗಲಿಲ್ಲ ಎಂದು ಹರ್ಮನ್ ಹೇಳಿದ್ದಾರೆ.
10 ತಂಡಗಳು, 2 ಗುಂಪು
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಅಲ್ಲದೆ ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಳಿದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ಇದೇ ಗುಂಪಿನಲ್ಲಿ ಕಾಣಿಸಿಕೊಳ್ಳಲಿವೆ. ಇನ್ನು ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಸ್ಕಾಟ್ಲೆಂಡ್ ತಂಡಗಳು ಫೈಟ್ ನಡೆಸಲಿವೆ.
ಟಿ20 ವಿಶ್ವಕಪ್‌ಗಾಗಿ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರಾಡ್ರಿಗಸ್, ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಶ್ರೇಯಾಂಕಾ ಪಾಟೀಲ್, ಸಜ್ನಾ ಸಜೀವನ್, ಆಶಾ ಶೋಭನಾ, ರಾಧಾ ಯಾದವ್,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications