For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಗೆಲ್ಲುತ್ತಲೇ ಎಲೈಟ್‌ ಕ್ಲಬ್‌ಗೆ ಹರ್ಮನ್‌ ಎಂಟ್ರಿ

ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಇತಿಹಾಸ ಬರೆದಿದೆ. ಫೈನಲ್ ಪಂದ್ಯದಲ್ಲಿ ಭಾರತ 52 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಿದ ಅನುಭವಿ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್‌ ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆದಿದ್ದಾರೆ. ತಮ್ಮ ವೃತ್ತಿ ಜೀವನದ ಐದನೇ ಏಕದಿನ ವಿಶ್ವಕಪ್ ಆಡುತ್ತಿರುವ ಹರ್ಮನ್ ಅಬ್ಬರಿಸಿದ್ದಾರೆ. ಅಲ್ಲದೆ ದಾಖಲೆಯ ಪುಟಕ್ಕೆ ತಮ್ಮ ಹೆಸರನ್ನು ನಮೂದಿಸಿದ್ದಾರೆ.

ಹರ್ಮನ್ ಪ್ರೀತ್ ಕೌರ್ ಒಬ್ಬ ಪ್ರತಿಭಾನ್ವಿತ ಬ್ಯಾಟರ್. ಇವರ ಕ್ಷಮತೆಗೆ ಬಿಸಿಸಿಐ ಸಹ ಮನ್ನಣೆ ನೀಡಿ, ನಾಯಕಿಯ ಜವಾಬ್ದಾರಿಯನ್ನು ನೀಡಿತು. ಈ ವೇಳೆ ಇವರು ಈ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಂಡರು. ಅಂದಾಹಗೆ ಹರ್ಮನ್ ಪ್ರೀತ್‌ ಕೌರ್‌ರಲ್ಲೂ ಬಿಗ್ ಇನಿಂಗ್ಸ್ ಕಟ್ಟುವ ಕ್ಷಮತೆ ಇದೆ ಎಂಬುದು ತಿಳಿದಿದ್ದು, 2017ರಲ್ಲಿ. ಅಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ 171 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿ ತಂಡವನ್ನು ಫೈನಲ್‌ಗೆ ಏರಿಸುವಲ್ಲಿ ಶ್ರಮಿಸಿದ್ದರು. ಅಲ್ಲಿಂದ ಇವರು ಹಿಂತಿರುಗಿ ನೋಡಿದ್ದೇ ಇಲ್ಲ.

Harmanpreet Kaur Joins Elite Club of Indian World Cup Winning Captains

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ಇವರು ಸಹ ವಿಶ್ವಕಪ್‌ ಗೆದ್ದ ಭಾರತೀಯ ನಾಯಕರ ಗ್ರುಪ್‌ಗೆ ಎಂಟ್ರಿ ಪಡೆದರು. ಈ ಗ್ರುಪ್‌ನಲ್ಲಿ 1983ರ ಏಕದಿನ ವಿಶ್ವಕಪ್‌ ನಾಯಕ ಕಪಿಲ್‌ ದೇವ್ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಭಾರತದಲ್ಲಿ ನಡೆದ 2011 ಏಕದಿನ ವಿಶ್ವಕಪ್‌, ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಗೆದ್ದ ಧೋನಿ ಅವರಿಗೂ ಈ ತಂಡದಲ್ಲಿ ಸ್ಥಾನ ಇದೆ. ಇನ್ನು 2024ರಲ್ಲಿ ದಕ್ಷಿಣ ಆಫ್ರಿಕಾವನ್ನೇ ಫೈನಲ್‌ನಲ್ಲಿ ಮಣಿಸಿ ಟಿ20 ವಿಶ್ವಕಪ್‌ಗೆ ಮುತ್ತಿಟ್ಟ ರೋಹಿತ್ ಶರ್ಮಾ, ಕಳೆದ ವರ್ಷ ಲೇಟೆಸ್ಟ್ ಆಗಿ ಎಂಟ್ರಿ ಮಾಡಿದ್ದರು. ಈಗ ಈ ಎಲೈಟ್‌ ಕ್ಲಬ್‌ಗೆ ಹರ್ಮನ್ ಪ್ರೀತ್ ಕೌರ್ ಸ್ಥಾನ ಪಡೆದಿದ್ದಾರೆ.

ಎಲೈಟ್‌ ಕ್ಲಬ್‌ಗೆ ಎಂಟ್ರಿ

ಭಾರತ 2005 ಹಾಗೂ 2017ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ 2017ರಲ್ಲಂತೂ ಕೂದಲೆಳೆಯ ಅಂತರದಲ್ಲಿ ಕಪ್‌ ಕೈಯಿಂದ ಮಿಸ್ ಆಗಿತ್ತು. ಆದರೆ ಈ ಬಾರಿ ಹರ್ಮನ್ ಪ್ರೀತ್ ಕೌರ್ ಅಂತಹ ಯಾವುದೇ ತಪ್ಪನ್ನು ಮಾಡಲೇ ಇಲ್ಲ. ಸಿಕ್ಕ ಅವಕಾಶದಲ್ಲಿ ಸರಿಯಾಗಿ ಬೌಲಿಂಗ್ ಚೇಂಜ್ ಮಾಡುತ್ತಾ, ದಕ್ಷಿಣ ಆಫ್ರಿಕಾ ತಂಡದ ವಿಕೆಟ್‌ ಕೀಳುತ್ತಲೇ ಸಾಗಿದರು. ಒಂದು ಹಂತದಲ್ಲಂತೂ ತಮ್ಮ ಬತ್ತಳಿಕೆಯ ಎಲ್ಲ ಬೌಲರ್‌ಗಳಿಗೂ ಮಿನಿ ಸ್ಪೆಲ್‌ ನೀಡಿ ಯಶಸ್ಸು ಕಂಡರು.

ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಈ ಗೆಲುವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಂದಿನ ದಿನಗಳಲ್ಲೂ ಭಾರತ ಐಸಿಸಿ ಟೂರ್ನಿಗಳನ್ನು ಗೆಲ್ಲುವ ವಿಶ್ವಾಸವನ್ನು ಹರ್ಮನ್ ಹೊಂದಿದ್ದು, ಇದು ಆರಂಭ ಎಂದು ತಿಳಿಸಿದ್ದಾರೆ.

Story first published: Monday, November 3, 2025, 6:45 [IST]
Other articles published on Nov 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+