Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 9000 ರನ್‌ಗಳ ಮೈಲಿಗಲ್ಲು ತಲುಪಿದ ಹರ್ಮನ್‌ಪ್ರೀತ್‌ ಕೌರ್

ಭಾರತ ಮಹಿಳಾ ತಂಡ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಏಕೈಕ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಐಕಾನಿಕ್ ಲಾರ್ಡ್ಸ್‌ ಮೈದಾನದಲ್ಲಿ ಇದೆ ಮೊದಲ ಬಾರಿಗೆ ಟೆಸ್ಟ್‌ ನಡೆಯುತ್ತಿದ್ದರಿಂದ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 285 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್ ಅವರು ದೊಡ್ಡ ಸಾಧನೆ ಮಾಡಿದ್ದಾರೆ.

ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇದೇ ವೇಳೆ ಇವರು ದೊಡ್ಡ ಮೈಲಿಗಲ್ಲು ತಲುಪಿದ್ದಾರೆ. ಇವರು ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ದೊಡ್ಡ ಸಾಧನೆ ಮಾಡಿದರು.

Harmanpreet Kaur

ಹರ್ಮನ್‌ಪ್ರೀತ್ ಕೌರ್‌ ಈ ಪಂದ್ಯದಲ್ಲಿ 121 ಎಸೆತಗಳಲ್ಲಿ 7 ಬೌಂಡರಿ ಸಹಿತ 58 ರನ್‌ ಬಾರಿಸಿದರು. ಈ ಇನಿಂಗ್ಸ್‌ ಮೂಲಕ ಹರ್ಮನ್‌ಪ್ರೀತ್ ಕೌರ್‌ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 9000 ರನ್‌ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಲು ಇವರಿಗೆ ಈ ಪಂದ್ಯದಲ್ಲಿ 13 ರನ್‌ಗಳ ಅವಶ್ಯಕತೆ ಇತ್ತು. ಇವರು ಇನಿಂಗ್ಸ್‌ನ 24ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಮಿಥಾಲಿ ರಾಜ್‌ ಹಾಗೂ ಸ್ಮೃತಿ ಮಂಧಾನ ಮಾತ್ರ ಈ ಸಾಧನೆ ಮಾಡಿದ್ದರು.

ಸ್ಟ್ರೆಸ್‌ ನಿರ್ವಹಣೆಗೆ ಕ್ರಿಕೆಟರ್ ಸ್ಮೃತಿ ಮಂಧಾನ ಈ ಧಾರಾವಾಹಿ ನೋಡ್ತಾರಂತೆ!

ಸ್ಟ್ರೆಸ್‌ ನಿರ್ವಹಣೆಗೆ ಕ್ರಿಕೆಟರ್ ಸ್ಮೃತಿ ಮಂಧಾನ ಈ ಧಾರಾವಾಹಿ ನೋಡ್ತಾರಂತೆ!

ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಮಿಥಾಲಿ ರಾಜ್ ಅವರಿಗೆ ಸಲ್ಲುತ್ತದೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,868 ರನ್‌ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಸ್ಮೃತಿ ಮಂಧಾನ ಇದ್ದು ಇವರು 10,667 ರನ್‌ ಕಲೆ ಹಾಕಿದ್ದಾರೆ. ಹರ್ಮನ್‌ ಪ್ರೀತ್‌ ಕೌರ್‌ 9000 ಅಂತಾರಾಷ್ಟ್ರೀಯ ರನ್‌ಗಳ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

 ಮೈದಾನಕ್ಕೆ ಇಳಿಯುತ್ತಲೇ ರೋಹಿತ್ ಶರ್ಮಾ ದಾಖಲೆ ಅಳಿಸಿ ಹಾಕಿದ ಹರ್ಮನ್‌ಪ್ರೀತ್‌ ಕೌರ್

ಮೈದಾನಕ್ಕೆ ಇಳಿಯುತ್ತಲೇ ರೋಹಿತ್ ಶರ್ಮಾ ದಾಖಲೆ ಅಳಿಸಿ ಹಾಕಿದ ಹರ್ಮನ್‌ಪ್ರೀತ್‌ ಕೌರ್

ಪಂದ್ಯದ ಚಿತ್ರಣ

ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 285 ರನ್‌ಗಳಿಗೆ ಆಲೌಟ್ ಆಗಿದೆ. ಈ ವೇಳೆ ಭಾರತ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 83 ರನ್‌ ಸಿಡಿಸಿದ್ದಾರೆ. ಇನ್ನು ಜೆಮಿಮಾ ರೊಡ್ರಿಗಸ್‌ 35 ರನ್‌ ಬಾರಿಸಿದರು. ಹರ್ಮನ್‌ಪ್ರೀತ್ ಕೌರ್‌ (58), ದೀಪ್ತಿ ಶರ್ಮಾ (57) ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ದಿನದಾಟದಂತ್ಯಕ್ಕೆ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗೆ 21 ರನ್‌ ಕಲೆ ಹಾಕಿದೆ.

Story first published: Saturday, July 11, 2026, 12:50 [IST]
Other articles published on Jul 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+