Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup 2026: ಹರ್ಮನ್‌ಗೆ ಪಟ್ಟ: ಕನ್ನಡತಿಗೆ ಸ್ಥಾನ

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ಈ ಮೊದಲೇ ತಿಳಿಸಿದಂತೆ ಶನಿವಾರ (ಮೇ 2) ತಂಡವನ್ನು ಪ್ರಕಟಿಸಿದೆ. ಭಾರತದ ತಂಡವನ್ನು ಅನುಭವಿ ಹರ್ಮನ್ ಪ್ರೀತ್‌ ಕೌರ್‌ ಮುನ್ನಡೆಸಲಿದ್ದಾರೆ. ತಂಡದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಸ್ಥಾನ ಪಡೆದಿದ್ದಾರೆ.

ಭಾರತ ತಂಡ ಕಳೆದ ವರ್ಷದ ಅಂತ್ಯದಲ್ಲಿ ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಇನ್ನು ಟಿ20 ವಿಶ್ವಕಪ್‌ಗೆ ಮುತ್ತಿಡುವ ಕನಸು ಹರ್ಮನ್‌ ಪ್ರೀತ್‌ ಪಡೆಯದ್ದಾಗಿದೆ. ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಆಯ್ಕೆ ಸಮಿತಿಯು ಈ ಪಂದ್ಯಾವಳಿಗಾಗಿ 15 ಭಾರತೀಯ ಆಟಗಾರ್ತಿಯರನ್ನು ಆಯ್ಕೆ ಮಾಡಿಲಾಗಿದೆ. ಅನುಭವಿ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡದ ಉಪನಾಯಕತ್ವದ ಜವಾಬ್ದಾರಿಯನ್ನು ಸ್ಮೃತಿ ಮಂಧಾನ ಅವರ ಹಣೆಗೆ ಕಟ್ಟಲಾಗಿದೆ.

Harmanpreet Kaur

ನಂದಿನಿ ಶರ್ಮಾ ಅವರು ಇದೇ ಮೊದಲ ಬಾರಿಗೆ ತಂಡಕ್ಕೆ ಆಯ್ಕೆ ಆಗಿದ್ದಾರೆ. ಚಂಡೀಗಢದ 24 ವರ್ಷದ ವೇಗಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಅಮೋಘ ಪ್ರದರ್ಶನ ನೀಡಿ 17 ವಿಕೆಟ್‌ ಕಬಳಿಸಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಯಸ್ತಿಕಾ ಭಾಟಿಯಾ ಮತ್ತು ಆಲ್‌ರೌಂಡರ್ ರಾಧಾ ಯಾದವ್ ಕೂಡ ತಂಡಕ್ಕೆ ಮರಳಿದ್ದಾರೆ, ಆದರೆ ಅನುಷ್ಕಾ ಶರ್ಮಾ, ಉಮಾ ಛೆಟ್ರಿ ಮತ್ತು ಕಾಶ್ವಿ ಗೌತಮ್ ಅವರನ್ನು ಕೈಬಿಡಲಾಗಿದೆ.

ಎಷ್ಟು ತಂಡಗಳು ಭಾಗವಹಿಸುತ್ತಿವೆ?

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಜೂನ್ 12 ರಂದು ಆರಂಭವಾಗಲಿದ್ದು, ಜುಲೈ 5 ರಂದು ಕೊನೆಗೊಳ್ಳಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಇವುಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್‌ಲ್ಯಾಂಡ್ಸ್ ಸ್ಥಾನ ಪಡೆದಿದೆ.

ಟಿ20 ವಿಶ್ವಕಪ್‌ಗೆ ಪ್ರಕಟಿತ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ ಕೀಪರ್‌), ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ, ಶ್ರೀ ಚರಣಿ, ಶ್ರೇಯಾಂಕಾ ಪಾಟೀಲ್, ಭಾರತಿ ಫುಲ್ಮಾಲಿ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಂದಿನಿ ಶರ್ಮಾ ಹಾಗೂ ರಾಧಾ ಯಾದವ್


2026 ರ ಟಿ20 ವಿಶ್ವಕಪ್‌ಗಾಗಿ ಭಾರತ ಮಹಿಳಾ ಕ್ರಿಕೆಟ್ ತಂಡದ ವೇಳಾಪಟ್ಟಿ

ಜೂನ್ 14, ಪಾಕಿಸ್ತಾನ ವಿರುದ್ಧ, ಬರ್ಮಿಂಗ್ಹ್ಯಾಮ್
ಜೂನ್ 17, ನೆದರ್ಲ್ಯಾಂಡ್ಸ್ ವಿರುದ್ಧ, ಲೀಡ್ಸ್
ಜೂನ್ 21, ದಕ್ಷಿಣ ಆಫ್ರಿಕಾ ವಿರುದ್ಧ, ಮ್ಯಾಂಚೆಸ್ಟರ್
ಜೂನ್ 25, ಬಾಂಗ್ಲಾದೇಶ ವಿರುದ್ಧ, ಮ್ಯಾಂಚೆಸ್ಟರ್
ಜೂನ್ 28, ಆಸ್ಟ್ರೇಲಿಯಾ ವಿರುದ್ಧ, ಲಂಡನ್ (ಲಾರ್ಡ್ಸ್)

Story first published: Saturday, May 2, 2026, 18:51 [IST]
Other articles published on May 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+