For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ: ಇಬ್ಬರು ಯುವತಿಯರಿಗೆ ಅವಕಾಶ

ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ ಬಳಿಕ ಹರ್ಮನ್ ಪ್ರೀತ್‌ ಪಡೆ ವಿಶ್ರಾಂತಿಯ ಬಳಿಕ, ಈಗ ಮತ್ತೊಂದು ಸರಣಿಗೆ ಸಿದ್ಧತೆ ನಡೆಸಿದೆ. ತವರಿನಲ್ಲಿ ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಮಂಗಳವಾರ ತಂಡವನ್ನು ಪ್ರಕಟಿಸಲಾಗಿದೆ. ಭಾರತದ ಯಶಸ್ವಿ ನಾಯಕಿ ಹರ್ಮನ್ ಪ್ರೀತ್‌ ಕೌರ್‌ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ತಂಡದಲ್ಲಿ ಇಬ್ಬರು ಯುವ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರಿಗೆ ಉಪನಾಯಕ ಪಟ್ಟವನ್ನು ನೀಡಲಾಗಿದೆ.

ಭಾರತ ತಂಡ ನವೆಂಬರ್‌ 2 ರಂದು ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಹರ್ಮನ್ ಪ್ರೀತ್‌ ಪಡೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದಾದ ಬಳಿಕ ಹಲವು ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡುತ್ತಿದ್ದರು. ಈಗ ಎಲ್ಲ ಆಟಗಾರರು ಶ್ರೀಲಂಕಾ ವಿರುದ್ಧದ ಸರಣಿಗಾಗಿ ತಯಾರಿಯನ್ನು ನಡೆಸಬೇಕಿದೆ. ಇದೇ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ವಿಡಿಯೋ ಸಖತ್ ವೈರಲ್ ಆಗಿತ್ತು.

Harmanpreet Kaur to Lead India Women in 5-Match T20I Series Against Sri Lanka Two Debutants Included

ಭಾರತ ತಂಡದಲ್ಲಿ ಸ್ಥಾನ ಪಡೆದ ಕಮಲಿನಿ ಹಾಗೂ ವೈಷ್ಣವಿ ಶರ್ಮಾ ಅವರು ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯರಾಗಿದ್ದಾರೆ. ಇವರಿಬ್ಬರನ್ನು 15 ಆಟಗಾರರ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಆಟಗಾರ್ತಿಯರಿಗೆ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ. ಉಳಿದಂತೆ ಜೆಮಿಮಾ ರೋಡ್ರಿಗಾಸ್‌, ಶೆಫಾಲಿ ವರ್ಮಾ, ಹರ್ಲಿನ್ ಡಿಯೋಲ್, ಅಮನ್‌ಜೋತ್‌ ಕೌರ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾ ತಂಡದ ಟಿ20 ಸರಣಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಹರ್ಲೀನ್ ಡಿಯೋಲ್, ಅಮನ್‌ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್ (ವಿಕೆಟ್‌ಕೀಪರ್), ಜಿ. ಕಮಲಿನಿ (ವಿಕೆಟ್‌ಕೀಪರ್), ಶ್ರೀ ಚರಣಿ, ವೈಷ್ಣವಿ ಶರ್ಮಾ.


ಟಿ20 ಸರಣಿಯ ವೇಳಾ ಪಟ್ಟಿ

ಮೊದಲ ಟಿ20: 21 ಡಿಸೆಂಬರ್‌, ವಿಶಾಖಪಟ್ಟಣಂ
ಎರಡನೇ ಟಿ20: 23 ಡಿಸೆಂಬರ್‌, ವಿಶಾಖಪಟ್ಟಣಂ
ಮೂರನೇ ಟಿ20: 26 ಡಿಸೆಂಬರ್‌, ತಿರುವನಂತರಪುರಂ
ನಾಲ್ಕನೇ ಟಿ20: 28 ಡಿಸೆಂಬರ್‌, ತಿರುವನಂತರಪುರಂ
ಐದನೇ ಟಿ20: 30 ಡಿಸೆಂಬರ್‌, ತಿರುವನಂತರಪುರಂ

Story first published: Tuesday, December 9, 2025, 20:56 [IST]
Other articles published on Dec 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+