For Quick Alerts
ALLOW NOTIFICATIONS  
For Daily Alerts
 

ಮಹಿಳಾ ಕ್ರಿಕೆಟರ್ ಹರ್ಮನ್ ಪ್ರೀತ್ ಗೆ ಗಾಯ, ಇಂಗ್ಲೆಂಡ್ ಸರಣಿಯಿಂದ ಔಟ್

ನವದೆಹಲಿ, ಆಗಸ್ಟ್ 01 : ಭಾರತದ ಮಹಿಳಾ ಕ್ರಿಕೆಟ್ ಆಲ್ ರೌಂಡರ್ ಹರ್ಮನ್ ಪ್ರೀತ್ ಕೌರ್ ಅವರು ಗಾಯಗೊಂಡಿದ್ದರಿಂದ ಇಂಗ್ಲೆಂಡ್ ವಿರುದ್ಧದ ಸೂಪರ್ ಸಿರೀಸ್ ನಿಂದ ಹೊರ ಬಿದ್ದಿದ್ದಾರೆ.

ಬಲ ಬುಜ ಗಾಯದ ಸಮಸ್ಯೆಯಿಂದ ಬಳಲುತ್ತಿರುವ 28 ವರ್ಷದ ಹರ್ಮನ್ ಪ್ರೀತ್, ಆಗಸ್ಟ್ 10 ರಿಂದ ಸೆಪ್ಟೆಂಬರ್ 01ರ ವರೆಗೆ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟಿ-20 ಸರಣಿಗೆ ಅಲಭ್ಯರಾಗಲಿದ್ದಾರೆ.

Harmanpreet Kaur to miss Women's Super League due to shoulder injury

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಗೂ ಮುನ್ನವೇ ಅವರು ಬಲ ಬುಜಕ್ಕೆ ಗಾಯವಾಗಿತ್ತು. ಆದರೂ ಗಾಯವನ್ನು ಲೆಕ್ಕಿಸದೇ ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ ಆಡಿದ್ದರು.

ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ ಅಜೇಯ 171 ರನ್‌ ಗಳಿಸಿದ ಕೌರ್, ಭಾರತ ತಂಡವನ್ನು ಫೈನಲ್ ಗೆ ಕೊಂಡೊಯ್ದಿದ್ದರು.

ಆದರೆ, ಇದೀಗ ಗಾಯ ಸಮಸ್ಯೆಯಿಂದ ಬಳಲುತ್ತಿರುವ ಹರ್ಮನ್ ಪ್ರೀತ್ ಕೌರ್ ಅವರ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡಲಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+