ಐಸಿಸಿ ಪ್ರಶಸ್ತಿ ಬರವನ್ನು ನೀಗಿಸುವ ವಿಸ್ವಾಸ ವ್ಯಕ್ತಪಡಿಸಿದ ಟೀಮ್ ಇಂಡಿಯಾ ನಾಯಕಿ
ಮಹಿಳಾ ಏಕದಿನ ವಿಶ್ವಕಪ್‌ಗೆ ಕೌಟ್ ಡೌನ್ ಆರಂಭಿವಾಗಿದೆ. ಈ ಬಾರಿಯ ಮಹಿಳಾ ವಿಶ್ವಕಪ್ ಭಾರತ ಆಯೋಜಿಸಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ಆಗಸ್ಟ್ 11 ರಂದು ಮುಂಬೈನಲ್ಲಿ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಐಸಿಸಿ ಅಧ್ಯಕ್ಷ ಜಯ್ ಶಾ ಉಪಸ್ಥಿತರಿದ್ದರು. ಅಲ್ಲದೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್, ನಾಯಕಿ ಹರ್ಮನ್ ಪ್ರೀತ್ ಕೌರ್ ಸಹ ಈ ವೇಳೆ ವೇದಿಕೆಯ ಮೇಲೆ ಕಾಣಿಸಿಕೊಂಡರು. ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಸೆ.30 ರಿಂದ ಆರಂಭವಾಗಲಿದ್ದು, ನ.2ರ ವರೆಗೆ ನಡೆಯಿದೆ.
ಈ ವೇಳೆ ಟೀಮ್ ಇಂಡಿಯಾದ ನಾಯಕ ಹರ್ಮನ್ ಪ್ರೀತ್ ಕೌರ್ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನಿಜಕ್ಕೂ ಅಭಿಮಾನಿಗಳ ಮನಸ್ಸಿಗೆ ಖುಷಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಹರ್ಮನ್ ಪ್ರಿತ್ ಏಕದಿನ ವಿಶ್ವಕಪ್ ಬರಗಾಲವನ್ನು ಕೊನೆಗೊಳಿಸಲು ಸಂಪೂರ್ಣವಾಗಿ ಸಿದ್ಧವಿದೆ. ಹೀಗಾಗಿ ಟೂರ್ನಗೆ ತಂಡ ಶ್ರಮಿಸುತ್ತಿದೆ. ಈ ಬಾರಿ ಟ್ರೋಫಿ ಎತ್ತುವ ಕನಸನ್ನು ತಂಡ ಕಾಣುತ್ತಿದೆ. ವಿಶ್ವಕಪ್ ವಿಶೇಷವಾಗಿದ್ದು, ಇದನ್ನು ಇನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ತಂಡ ಬೆವರು ಹರಿಸುತ್ತಿದೆ ಎಂದು ಹರ್ಮನ್ ತಿಳಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಹರ್ಮನ್ ಪ್ರೀತ್ ಕೌರ್ ತಮ್ಮ ಒಂದು ಸ್ಮರಣೀಯ ಇನಿಂಗ್ಸ್ ನೆನಪಿಸಿಕೊಂಡರು. 2017ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ 171 ರನ್‌ಗಳ ಇನಿಂಗ್ಸ್ ನೆನಪಿಸಿಕೊಂಡರು. ಈ ಇನಿಂಗ್ಸ್ ಬಳಿಕ ಅಭಿಮಾನಿಗಳು ಅವರನ್ನು ಸ್ವಾಗತಿಸಿದ ರೀತಿ ಇನ್ನು ತಮ್ಮ ಮನಸ್ಸಿನಲ್ಲಿ ಹಾಗೇ ಇದೆ. ಆ ಇನ್ನಿಂಗ್ಸ್ ನನಗೆ ಮತ್ತು ಇಡೀ ಮಹಿಳಾ ಕ್ರಿಕೆಟ್‌ಗೆ ವಿಶೇಷವಾಗಿತ್ತು ಎಂದು ಹರ್ಮನ್‌ಪ್ರೀತ್ ಹೇಳಿದರು.
ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಸಾಧನೆ
ಭಾರತ ಮಹಿಳಾ ತಂಡ ಎರಡು ವೇಳೆ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದೆ. ಫೈನಲ್ ಪಂದ್ಯದಲ್ಲಿ ತಂಡ ಸೋತ ಬಳಿಕ ತಂಡ ಪಂದ್ಯವಳಿಯಿಂದ ಹೊರಗುಳಿಯಬೇಕಾಯಿತು. 2005ರಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 98 ರನ್‌ಗಳ ಸೋಲು ಕಂಡು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇನ್ನು 2017ರ ಭಾರತ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications