For Quick Alerts
ALLOW NOTIFICATIONS  
For Daily Alerts
 

Harmanpreet Kaur: ವೇಗದ ಶತಕ ಬಾರಿಸಿ ಆರ್ಭಟಿಸಿದ ಹರ್ಮನ್ ಪ್ರೀತ್‌

ಭಾರತ ಹಾಗೂ ಇಂಗ್ಲೆಂಡ್‌ ವನಿತೆಯರ ನಡುವಣ ಮೂರನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಟೀಮ್ ಇಂಡಿಯಾದ ನಾಯಕಿ ಹರ್ಮನ್‌ ಪ್ರಿತ್‌ ಕೌರ್‌ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಹರ್ಮನ್‌ ಪ್ರೀತ್‌ ಕೌರ್ ಸಿಡಿಸಿದ ಏಳನೇ ಶತಕ. ಈ ಮೂಲಕ ಹರ್ಮನ್‌ ಪ್ರೀತ್‌ ಕೌರ್‌ ದಾಖಲೆಯನ್ನು ಬರೆದರು.

ಚೆಸ್ಟರ್ ಲೀ ಸ್ಟ್ರೀಟ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಆರಂಭಿಕರು ಸಮರ್ಥಿಸಿಕೊಂಡರು. ಆರಂಭಿಕ ಆಟಗಾರ್ತಿಯರಾದ ಪ್ರತಿಕಾ ರಾವಲ್‌ (26) ಹಾಗೂ ಸ್ಮೃತಿ ಮಂಧನಾ (45) ಮೊದಲ ವಿಕೆಟ್‌ಗೆ 64 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಮೂರನೇ ವಿಕೆಟ್‌ಗೆ ಹರ್ಲಿನ್ ಡಯೋಲ್‌ (45) ಹಾಗೂ ಹರ್ಮನ್‌ ಪ್ರೀತ್‌ ಕೌರ್‌ ಸೊಗಸಾದ ಆಟದ ಪ್ರದರ್ಶನ ನೀಡಿದರು. ಈ ಜೋಡಿ 95 ಎಸೆತಗಳಲ್ಲಿ 81 ರನ್‌ ಸಿಡಿಸಿತು.

Harmanpreet Kaur s Record-Breaking Century Powers India to Big Total

ನಾಲ್ಕನೇ ವಿಕೆಟ್‌ಗೆ ಹರ್ಮನ್‌ ಪ್ರೀತ್ ಕೌರ್‌ ಹಾಗೂ ಜೆಮಿಮಾ ರೊಡ್ರಿಗಸ್‌ ಜೋಡಿ ಸಹ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಿತು. ಈ ಜೋಡಿ ವೇಗವಾಗಿ ರನ್‌ ಕಲೆ ಹಾಕಿತು. ಈ ಜೋಡಿ 77 ಎಸೆತಗಳಲ್ಲಿ 110 ರನ್‌ ಸಿಡಿಸಿತು. ಈ ವೇಳೆ ಜೆಮಿಮಾ 7 ಬೌಂಡರಿ ನೆರವಿನಿಂದ ಅರ್ಧಶತಕ ಬಾರಿಸಿದರು. ಅಂತಿಮವಾಗಿ ಭಾರತ ವನಿತೆಯರು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 318 ರನ್‌ ಸಿಡಿಸಿತು.

ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್‌ ಅಮೋಘ ಬ್ಯಾಟಿಂಗ್ ನಡೆಸಿತು. ಈ ಜೋಡಿ 84 ಎಸೆತಗಳಲ್ಲಿ 14 ಬೌಂಡರಿ ಸಹಾಯದಿಂದ 102 ರನ್‌ ಸಿಡಿಸಿದರು. ಈ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ನೆರವಾದರು. ಈ ಮೂಲಕ ಹರ್ಮನ್‌ ಪ್ರೀತ್‌ ಕರ್ ಹೊಸ ದಾಖಲೆ ನಿರ್ಮಿಸಿದರು. ಹರ್ಮನ್‌ ಏಕದಿನ ಕ್ರಿಕೆಟ್‌ನಲ್ಲಿ 7ನೇ ಶತಕ ಬಾರಿಸಿದರು. ಈ ಮೂಲಕ ಹರ್ಮನ್ ಪ್ರೀತ್‌ ಕೌರ್‌ ಹಾಗೂ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ 7 ಶತಕ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಹರ್ಮನ್‌ಪ್ರೀತ್ 129 ಇನ್ನಿಂಗ್ಸ್‌ಗಳಲ್ಲಿ 7 ಶತಕಗಳನ್ನು ಗಳಿಸಿದ್ದಾರೆ. ಮಿಥಾಲಿ ರಾಜ್ 211 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Harmanpreet Kaur s Record-Breaking Century Powers India to Big Total

ವೇಗದ ಶತಕ

ಹರ್ಮನ್‌ ಪ್ರೀತ್ ಕೌರ್‌ ಇಂಗ್ಲೆಂಡ್‌ ವಿರುದ್ಧ 82 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಭಾರತದ ಪರ ವೇಗವಾಗಿ ಶತಕ ಬಾರಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಪರ ವೇಗವಾಗಿ ಶತಕ ಸಿಡಿಸಿದ ದಾಖಲೆ ಸ್ಮೃತಿ ಮಂಧನಾ ಹೆಸರಿನಲ್ಲಿದೆ. ಇವರು 70 ಎಸೆಯತಗಳಲ್ಲಿ ಶತಕ ಬಾರಿಸಿದ್ದರು. ಹರ್ಮನ್ ಪ್ರೀತ್‌ ಏಕದಿನ ಪಂದ್ಯಗಳಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 17ನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

Story first published: Tuesday, July 22, 2025, 21:48 [IST]
Other articles published on Jul 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+