Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಚಕ ಪಂದ್ಯದಲ್ಲಿ ಸಿಕ್ಸ್‌ ಚಚ್ಚಿ ಭಾರತ ಗೆಲ್ಲಿಸಿದ ಹರ್ಮನ್‌ಪ್ರೀತ್‌: ವೀಡಿಯೋ

Harmanpreet’s six in last over leads India women to 5-wicket victory over England

ಕ್ಯಾನ್ಬೆರಾ, ಜನವರಿ 31: ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿನ ಮನುಕಾ ಓವಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 31) ನಡೆದ ಮಹಿಳಾ ಟಿ20 ತ್ರಿಕೋನ ಸರಣಿಯಲ್ಲಿ ಭಾರತದ ವನಿತೆಯರು ಇಂಗ್ಲೆಂಡ್‌ ಅನ್ನು 5 ವಿಕೆಟ್‌ಗಳಿಂದ ಸೋಲಿಸಿದ್ದಾರೆ. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ಸಿಕ್ಸ್‌ ಬಾರಿಸಿ ನಾಯಕಿ ಹರ್ಮನ್‌ಪ್ರೀತ್‌ ಕೌರ್ ದೇಸಿ ತಂಡ ಗೆಲ್ಲಿಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ ತಂಡ, ನಟಾಲಿಯಾ ಸೈವರ್ 20, ನಾಯಕಿ ಹೀದರ್ ನೈಟ್ 67, ಟಮ್ಮಿ ಬ್ಯೂಮಾಂಟ್ ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 147 ರನ್ ಮಾಡಿತು. ಭಾರತದ ರಾಜೇಶ್ವರಿ ಗಾಯಕ್ವಾಡ್ 2, ಶಿಖಾ ಪಾಂಡೆ 2, ದೀಪ್ತಿ ಶರ್ಮಾ 2, ರಾಧಾ ಯಾದವ್ 1 ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಭಾರತ, ಶೆಫಾಲಿ ವರ್ಮಾ 30, ಸ್ಮೃತಿ ಮಂಧಾನ 15, ಜಮಿಮಾ ರೋಡ್ರಿಗಸ್ 26, ತಾನಿಯಾ ಭಾಟಿಯಾ 11, ಹರ್ಮನ್‌ಪ್ರೀತ್‌ ಕೌರ್ 42 ರನ್‌ ಕೊಡುಗೆಯೊಂದಿಗೆ 19.3ನೇ ಓವರ್‌ಗೆ 5 ವಿಕೆಟ್‌ ನಷ್ಟದಲ್ಲಿ 150 ರನ್ ಕಲೆ ಹಾಕಿ ಗೆಲುವಿನ ನಗೆ ಬೀರಿತು.

ಅಂತಿಮ ಓವರ್‌ಗೆ ಭಾರತಕ್ಕೆ 6 ರನ್‌ಗಳ ಅಗತ್ಯವಿತ್ತು. ಮೊದಲೆರಡು ಎಸೆತಗಳಲ್ಲಿ ಭಾರತ ಕೇವಲ 2 ರನ್ ಗಳಿಸಿತ್ತು. ಮೂರನೇ ಎಸೆತಕ್ಕೆ ಹರ್ಮನ್‌ಪ್ರೀತ್‌ ಸಿಕ್ಸ್ ಬಾರಿಸಿ ತಂಡದ ಗೆಲುವನ್ನು ಸಾರಿದರು. ಪಂದ್ಯಶ್ರೇಷ್ಠೆಯಾಗಿ ಇಂಗ್ಲೆಂಡ್‌ನ ಹೀದರ್ ನೈಟ್ ಗುರುತಿಸಿಕೊಂಡರು.

Story first published: Friday, January 31, 2020, 15:55 [IST]
Other articles published on Jan 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+