ಮಹಿಳಾ ಟಿ20 ವಿಶ್ವಕಪ್: ನಾಯಕಿಯಾಗಿ ಹರ್ಮನ್ ದಾಖಲೆ ಅಮೋಘ, ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿ ಭಾರತ
ಟೀಮ್ ಇಂಡಿಯಾ ಪ್ರಸಕ್ತ ವರ್ಷವನ್ನು ಸ್ಮರಣೀಯವಾಗಿಸುವ ನಿಟ್ಟಿನತ್ತ ಹೆಜ್ಜೆ ಇಟ್ಟಿದೆ. ಭಾರತದಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್ ಮೊದಲ ಬಾರಿಗೆ ಹರ್ಮನ್ ಪ್ರೀತ್ ಪಡೆ ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಭಾರತ ಮಹಿಳಾ ತಂಡ ಮತ್ತೊಂದು ಸವಾಲಿಗೆ ಸಿದ್ಧವಾಗುತ್ತಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡದ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳು ಹೆಚ್ಚಿವೆ. ಟೀಮ್ ಇಂಡಿಯಾ ಈ ವರೆಗೆ ಇನ್ನೂ ಒಂದೇ ಒಂದು ಟಿ20 ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಈ ಬಾರಿಯ ಟೀಮ್ ಇಂಡಿಯಾಕ್ಕೆ ಸುವರ್ಣವಕಾಶ ಒದಗಿ ಬಂದಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಆಡಲಿದೆ.
ಪ್ರಸಕ್ತ ಸಾಲಿನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಹರ್ಮನ್ ಪ್ರೀತ್ ಕೌರ್ ಪಡೆ ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ. ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರ ದಂಡೇ ಇದೆ. ಟೀಮ್ ಇಂಡಿಯಾದ ನಾಯಕಿಯಾಗಿ ಹರ್ಮನ್ ಪ್ರೀತ್ ಕೌರ್ ಅವರು ಟಿ20 ವಿಶ್ವಕಪ್‌ನಲ್ಲಿ 19 ಪಂದ್ಯಗಳನ್ನು ಆಡಿದ್ದು, 13 ಗೆಲುವು ಮತ್ತು 6 ಸೋಲು ಕಂಡಿದೆ. ಹರ್ಮನ್ ಪ್ರೀತ್ ಕೌರ್ ಚುಟುಕು ಫಾರ್ಮೆಟ್‌ನಲ್ಲಿ ಅಮೋಘ ದಾಖಲೆಯನ್ನು ಹೊಂದಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ನ ಕೊನೆಯ ಆವೃತ್ತಿಯನ್ನು 2024 ಆಡಲಾಗಿತ್ತು. ಕಳೆದ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಗುಂಪು ಹಂತದಲ್ಲೇ ಹೊರ ನಡೆದಿತ್ತು. ಟೀಮ್ ಇಂಡಿಯಾ 2024ರಲ್ಲಿ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿತ್ತು. ಈ ವೇಳೆ 4 ಪಂದ್ಯಗಳಲ್ಲಿ ಕಣಕ್ಕೆ ಇಳಿದಿತ್ತು. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ 58 ರನ್‌ಗಳಿಂದ ಸೋತಿತ್ತು. ಪಾಕಿಸ್ತಾನ ವಿರುದ್ಧ ಎರಡನೇ ಪಂದ್ಯವನ್ನು 6 ವಿಕೆಟ್‌ಗಳಿಂದ ಮತ್ತು ಶ್ರೀಲಂಕಾ ವಿರುದ್ಧ ಮೂರನೇ ಪಂದ್ಯವನ್ನು 82 ರನ್‌ಗಳಿಂದ ಟೀಮ್ ಇಂಡಿಯಾ ಗೆದ್ದಿತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಹರ್ಮನ್ ಪ್ರೀತ್ ಪಡೆ ಆಸ್ಟ್ರೇಲಿಯಾ ವಿರುದ್ಧ 9 ರನ್ ಸೋಲು ಕಂಡು ನಿರಾಸೆ ಅನುಭವಿಸಿತ್ತು.
ಎ ಗುಂಪಿನಲ್ಲಿ ಸ್ಥಾನ ಪಡೆದ ಭಾರತ
ಈ ಬಾರಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಜೂನ್ 12 ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಜೂನ್ 14 ರಿಂದ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಭಾರತ ತನ್ನ ಸಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಆಡಲಿದೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸ್ಥಾನ ಪಡೆದಿವೆ.

ಭಾರತ ಮಹಿಳಾ ತಂಡದ ವೇಳಾಪಟ್ಟಿ
ಜೂ.14, ಪಾಕಿಸ್ತಾನ ವಿರುದ್ಧ, ಸಂಜೆ 7ಕ್ಕೆ
ಜೂ.17, ನೆದರ್ಲೆಂಡ್ಸ್ ವಿರುದ್ಧ, ಸಂಜೆ 7ಕ್ಕೆ
ಜೂ.21, ದಕ್ಷಿಣ ಆಫ್ರಿಕಾ ವಿರುದ್ಧ, ಸಂಜೆ 7ಕ್ಕೆ
ಜೂ.25, ಬಾಂಗ್ಲಾದೇಶ ವಿರುದ್ಧ ಸಂಜೆ 7ಕ್ಕೆ
ಜೂ.28, ಆಸ್ಟ್ರೇಲಿಯಾ ವಿರುದ್ಧ. ಸಂಜೆ 7ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications