Harris Rauff: ಅಭಿಮಾನಿಯೊಂದಿಗೆ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್ ಫೈಟ್; ವಿಡಿಯೋ ವೈರಲ್!
ಜೂನ್ 18 ಮಂಗಳವಾರ, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಪಾಕಿಸ್ತಾನ ತಂಡದ ಆಟಗಾರರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ.
ಪಾಕಿಸ್ತಾನ ತಂಡದ ಹೊಸ ಕೋಚ್ ಗ್ಯಾರಿ ಕರ್ಸ್ಟನ್ ಕೂಡ ಇದರಲ್ಲಿ ಹಿಂದೆ ಸರಿದಿಲ್ಲ. ತಂಡದಲ್ಲಿ ಶಿಸ್ತಿನ ಕೊರತೆ ಇದ್ದು, ಆಟಗಾರರು ಪರಸ್ಪರ ಬೆಂಬಲಿಸುತ್ತಿಲ್ಲ ಪ್ರತ್ಯೇಕ್ಷವಾಗಿಯೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸತತ ಸೋಲಿಗೆ ಕಾರಣ ತಿಳಿಸಿದ್ದಾರೆ.

ಇದರ ಮಧ್ಯೆ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೈದಾನದಲ್ಲಿ ವಿಕೆಟ್‌ಗಳನ್ನು ಪಡೆಯುತ್ತಿದ್ದ ರೌಫ್ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ರನ್‌ಗಳನ್ನು ನಿಲ್ಲಿಸುವಲ್ಲಿ ವಿಫಲರಾಗಿದ್ದು, ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯವಾಗಿಲ್ಲ.
ಇದೀಗ ರೌಫ್ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅಭಿಮಾನಿಯೊಂದಿಗೆ ರೌಪ್ ಫೈಟ್ ಮಾಡಲು ಮುಂದಾಗಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಹ್ಯಾರಿಸ್ ರೌಫ್ ತುಂಬಾ ಕೋಪಗೊಂಡಿದ್ದಾರೆ.
ಅಮೆರಿಕದ ಪ್ಲೋರಿಡಾದಲ್ಲಿ ಹ್ಯಾರಿಸ್ ರೌಫ್ ಅವರು ಅಭಿಮಾನಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ತಮ್ಮ ಪತ್ನಿ ಮುಜ್ನಾ ಮಸೂದ್ ಮಲಿಕ್ ಅವರೊಂದಿಗೆ ಫುಟ್‌ಬಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಭಿಮಾಗಳ ಗುಂಪೊಂದು ರೌಫ್ ಅವರ ಬಗ್ಗೆ ಮಾತನಾಡಿದ್ದಾರೆ.
ಇದರಿಂದ ರೊಚ್ಚಿಗೆದ್ದ ರೌಫ್, ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯ ಮೇಲೆ ಫುಟ್‌ಬಾತ್‌ನಲ್ಲೇ ಹೊಡಿಯಲು ಮುಂದಾಗಿದ್ದಾರೆ. ಸದ್ಯ ಅಲ್ಲೇ ಇದ್ದವರು ರೌಫ್ ಅವರನ್ನು ತೆಡೆ ಹಿಡಿದ್ದಾರೆ. ಈ ಸಂದರ್ಭದಲ್ಲಿ ಈ ವೇಳೆ ನೀವು ಭಾರತದವರಾ? ಎಂದು ರೌಫ್ ಕೇಳಿದ್ದಾರೆ. ಇದಕ್ಕೆ ವ್ಯಕ್ತಿ, 'ಅಲ್ಲ ನಾನು ಪಾಕಿಸ್ತಾನದವರು ಎಂದು ಹೇಳಿರುವುದು ವೈರಲ್ ಆಗಿದೆ.
2024ರ ಟಿ20 ವಿಶ್ವಕಪ್‌ನ 4 ಪಂದ್ಯಗಳಲ್ಲಿ ಹ್ಯಾರಿಸ್ ಕೇವಲ 6 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದು, ಒಟ್ಟು 101 ರನ್ ಬಿಟ್ಟು ಕೊಟ್ಟಿದ್ದರು.
ಅಮೆರಿಕ ಮತ್ತು ಭಾರತ ವಿರುದ್ಧ ಪಾಕಿಸ್ತಾನಕ್ಕೆ ಸೋಲು
ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಪಾಕಿಸ್ತಾನ ಸೋಲನುಭವಿಸಿತ್ತು. ಆ ನಂತರ ಭಾರತ ತಂಡವೂ ಪಾಕಿಸ್ತಾನವನ್ನು ನ್ಯೂಯಾರ್ಕ್‌ನಲ್ಲಿ ಸೋಲಿಸಿತು.
ಇದಾದ ಬಳಿಕ ಪಾಕಿಸ್ತಾನ ತಂಡ ಕೆನಡಾ ನಂತರ ಐರ್ಲೆಂಡ್ ಎದುರು ಗೆಲುವು ಸಾಧಿಸಿತು. ಆದಾಗ್ಯೂ, ಸೂಪರ್-8 ಸುತ್ತಿಗೆ ಅನ್ನು ತಲುಪಲು ಈ ಎರಡು ಗೆಲುವು ಸಾಕಾಗಲಿಲ್ಲ. ಭಾರತ 4 ಪಂದ್ಯಗಳಿಂದ 7 ಅಂಕಗಳೊಂದಿಗೆ ಎ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿತು.
ಇತ್ತ ಮಳೆಯಿಂದಾಗಿ ರದ್ದಾದ ಐರ್ಲೆಂಡ್ ವಿರುದ್ಧದ ಪಂದ್ಯದ ಲಾಭ ಅಮೆರಿಕಕ್ಕೆ ಸಿಕ್ಕಿತು.ಆಡದೇ ಒಂದು ಪಾಯಿಂಟ್ ಯುಎಸ್‌ಎ ಖಾತೆಗೆ ಸೇರ್ಪಡೆಯಾಯಿತು.
ಹೀಗಾಗಿ 4 ಪಂದ್ಯಗಳಲ್ಲಿ 5 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದ ಯುಎಸ್‌ಎ ಸೂಪರ್-8 ಕ್ಕೆ ಆರ್ಹತೆ ಪಡೆದಿದೆ. ಸದ್ಯ ಪಾಕಿಸ್ತಾನದೊಂದಿಗೆ ಕೆನಡಾ ಮತ್ತು ಐರ್ಲೆಂಡ್ ತಂಡಗಳು ಹೊರಬಿದ್ದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications