ENG vs NZ Test: ಹ್ಯಾರಿ ಬ್ರೂಕ್ ಶತಕ: ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಇತಿಹಾಸ ನಿರ್ಮಿಸುವ ಹೊಸ್ತಿಲಿನಿಂದ ಕೊಂಚದರಲ್ಲಿ ಮಿಸ್ ಆದರೂ ಸಹ ತಂಡಕ್ಕೆ ನೆರವಾಗಿದ್ದಾರೆ. ಕೈಸ್ಟ್ ಚರ್ಚ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಪಂದ್ಯದಲ್ಲಿ ಬ್ರೂಕ್ ಆಕರ್ಷಕ ಶತಕ ಬಾರಿಸಿ ತಂಡಕ್ಕೆ ನೆರವಾದರು. ಈ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದ ಏಳನೇ ಶತಕ ಬಾರಿಸಿ ಸಂಭ್ರಮಿಸಿದರು. ಅನುಭವಿ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರೂ ಸಹ ಭರವಸೆಯ ಆಟಗಾರ ಹ್ಯಾರಿ ಬ್ರೂಕ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು.
ಶುಕ್ರವಾರ ಎರಡನೇ ದಿನದಾಟವನ್ನು ನ್ಯೂಜಿಲೆಂಡ್ 8 ವಿಕೆಟ್‌ಗೆ 319 ರನ್‌ಗಳಿಂದ ಮುಂದುವರಿಸಿ 348 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 5 ವಿಕೆಟ್‌ಗೆ 319 ರನ್ ಸಿಡಿಸಿ, 29 ರನ್‌ಗಳ ಹಿನ್ನಡೆ ಅನುಭವಿಸುತ್ತಿದೆ. ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಇನಿಂಗ್ಸ್ ಮುನ್ನಡೆ ಸಾಧಿಸುವ ಕನಸು ಕಾಣುತ್ತಿದೆ. ಇದಕ್ಕೆ ಹ್ಯಾರಿ ಬ್ರೂಕ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅಡಿ ಪಾಯ ಹಾಕಬೇಕಿದೆ. ಈ ಇಬ್ಬರೂ ಆಟಗಾರರು ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಗಿತ್ತು. ಆರಂಭಿಕ ಜಾಕ್ ಕ್ರಾಲಿ ಹಾಗೂ ಆರ್‌ಸಿಬಿ ತಂಡ ಸೇರಿರುವ ಜಾಕೋಬ್ ಬೆಥೆಲ್ 10 ರನ್‌ಗಳಿಗೆ ಆಟ ಮುಗಿಸಿದರು. ಇನ್ನು ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೋ ರೂಟ್ ಸೊನ್ನೆ ಸುತಿದರು. ಆರಂಭಿಕ ಬೆನ್ ಡೆಕೆಟ್ 4 ರನ್‌ಗಳ ಅಂತರದಲ್ಲಿ ಅರ್ಧಶತಕ ವಂಚಿತರಾದರು.
5ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
71 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಒಲಿ ಪೋಪ್ ಹಾಗೂ ಹ್ಯಾರಿ ಬ್ರೂಕ್ ಆಧಾರವಾದರು. ಈ ಜೋಡಿ 188 ಎಸೆತಗಳಲ್ಲಿ 151 ರನ್ ಸಿಡಿಸಿ ಔಟ್ ಆದರು. ಪೋಪ್ 8 ಬೌಂಡರಿ ನೆರವಿನಿಂದ 77 ರನ್ ಸಿಡಿಸಿ ಔಟ್ ಆದರು. ಆದರೆ ಹ್ಯಾರಿ ಬ್ರೂಕ್ ತಮ್ಮ ಅಮೋಘ ಬ್ಯಾಟಿಂಗ್ ಮುಂದುವರೆಸಿದರು.

ಬ್ರೂಕ್ ಸಾಧನೆ
ಹ್ಯಾರಿ ಬ್ರೂಕ್ 123 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಶತಕವನ್ನು ಪೂರ್ಣಗೊಳಿಸಿದರು, ಇದು ಅವರ ಟೆಸ್ಟ್ ವೃತ್ತಿಜೀವನದ 7 ನೇ ಶತಕವಾಗಿದೆ. ಟೆಸ್ಟ್‌ನಲ್ಲಿ ಅತಿ ಕಡಿಮೆ ಎಸೆತಗಳನ್ನು ಎದುರಿಸಿ 2000 ರನ್ ಪೂರೈಸಿದ ವಿಶ್ವದ ಎರಡನೇ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಬ್ರೂಕ್ (2300 ಎಸೆತ) ಅವರದ್ದಾಯಿತು. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಬೆನ್ ಡಕೆಟ್ (2293 ಎಸೆತ) ಮೊದಲ ಸ್ಥಾನದಲ್ಲಿದ್ದಾರೆ. 22 ಟೆಸ್ಟ್ ಪಂದ್ಯಗಳಲ್ಲಿ 7ನೇ ಶತಕ ಸಿಡಿಸಿದ ಇಂಗ್ಲೆಂಡ್‌ನ ಐದನೇ ಆಟಗಾರ ಎಂಬ ಹೆಗ್ಗಳಿಕೆ ಸಹ ಬ್ರೂಕ್ ಅವರದ್ದಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications