For Quick Alerts
ALLOW NOTIFICATIONS  
For Daily Alerts
 

ಮುಲ್ತಾನ್‌ನ ಸುಲ್ತಾನ್‌: ಸೆಹ್ವಾಗ್‌ ಆಟ ನೆನಪಿಸಿದ ಹ್ಯಾರಿ ಬ್ರೂಕ್‌

ಮುಲ್ತಾನ್‌: ಪಾಕಿಸ್ತಾನ ಹಾಗೂ ಇಂಗ್ಲೆಂಡ್‌ ತಂಡಗಳು ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್‌ ಬಾರಿಸಿ ಬೀಗಿದ್ದ ಪಾಕ್‌ನ ಗರ್ವಕ್ಕೆ, ಇಂಗ್ಲೆಂಡ್‌ ಬ್ರೇಕ್ ಹಾಕಿದೆ. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟರ್‌ಗಳು ಆರ್ಭಟಿಸಿದ್ದು, ಪಾಕ್‌ಗೆ ಮುಖಭಂಗವಾಗಿದೆ. ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 7 ವಿಕೆಟ್‌ಗೆ 823 ರನ್‌ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು.

ನಾಲ್ಕನೇ ದಿನಾದಾಟವನ್ನು 3 ವಿಕೆಟ್‌ಗೆ 492 ರನ್‌ಗಳಿಂದ ಮುಂದುವರೆಸಿ ಇಂಗ್ಲೆಂಡ್‌, 823 ರನ್‌ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್‌ ಪರ ಭರವಸೆಯ ಆಟಗಾರ ಜೋ ರೂಟ್ 262 ರನ್ ಬಾರಿಸಿದರೆ, ಹ್ಯಾರಿ ಬ್ರೂಕ್‌ ದಾಖಲೆ ಬರೆದರು. ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್‌ ಅವರ ಆಟವನ್ನು ಕಂಡು ಅಭಿಮಾನಿಗಳಿಗೆ ಮುಲ್ತಾನ್‌ ಅಂಗಳದಲ್ಲಿ ಟೀಮ್ ಇಂಡಿಯಾದ ವೀರೇಂದ್ರ ಸೆಹ್ವಾಗ್ ಆಡಿದ ಧಾಟಿ ನೆನಪಾಯಿತು.

Harry Brook s Fiery Triple Century in Multan Revives Memories of Sehwag s Iconic Knock

ಆರಂಭದಲ್ಲಿ ಕೊಂಚ ತಾಳ್ಮೆಯಿಂದ ಇನಿಂಗ್ಸ್ ಆರಂಭಿಸಿದ ಬ್ರೂಕ್‌, ಬಳಿಕ ತಮ್ಮ ರೌದ್ರ ರೂಪ ಪ್ರದರ್ಶಿಸಿದರು. ತಮ್ಮ ನೈಜ ಆಟವನ್ನು ಆಡಿದ ಬ್ರೂಕ್‌ ಮೈದಾನದಲ್ಲಿ ರನ್‌ ಚಿತ್ತಾರ ಬಿಡಿಸಿದರು. 35 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟ್ರಿಪಲ್‌ ಸೆಂಚೂರಿ ಬಾರಿಸಿದ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಬ್ರೂಕ್ ತಮ್ಮದಾಗಿಸಿಕೊಂಡರು.

ರೂಟ್ ಒಂದು ಬದಿಯಲ್ಲಿ ಶಾಂತ ಸ್ವಭಾವದಲ್ಲಿ ಬ್ಯಾಟ್ ಮಾಡಿದರೆ, ಇನ್ನೊಂದು ತುದಿಯಲ್ಲಿ ಹ್ಯಾರಿ ಬ್ರೂಕ್‌ ಬಿರುಸಿನ ರೀತಿಯಲ್ಲಿ ಬ್ಯಾಟ್ ಮಾಡಿ ಗಮನ ಸೆಳೆದರು. ಈ ಜೋಡಿ 67 ವರ್ಷಗಳ ಹಳೆಯ ಜೊತೆಯಾಟದ ದಾಖಲೆಯನ್ನು ಮುರಿಯಿತು. ಈ ಇಬ್ಬರೂ ಆಟಗಾರರು 454 ರನ್‌ಗಳ ಜೊತೆಯಾಟ ನೀಡಿದರು.

Harry Brook s Fiery Triple Century in Multan Revives Memories of Sehwag s Iconic Knock

ಹ್ಯಾರಿ ಬ್ರೂಕ್ ಕೇವಲ 310 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದಾರೆ. ಇದು ವೀರೇಂದ್ರ ಸೆಹ್ವಾಗ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ತ್ರಿಶತಕವಾಗಿದೆ. ಬ್ರೂಕ್ ಇಂಗ್ಲೆಂಡ್ ಪರ ತ್ರಿಶತಕ ಬಾರಿಸಿದ ವೇಗದ ಬ್ಯಾಟ್ಸ್‌ಮನ್ ಆಗಿದ್ದಾರೆ. ಇವರ ಅಮೋಘ ಇನಿಂಗ್ಸ್‌ನಲ್ಲಿ 29 ಬೌಂಡರಿ, 3 ಸಿಕ್ಸರ್ ಸೇರಿವೆ.

ಮುಲ್ತಾನ್‌ನಲ್ಲಿ ಅಬ್ಬರಿಸಿದ್ದ ವೀರೂ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವೀರೇಂದ್ರ ಸೆಹ್ವಾಗ್‌ ಮುಲ್ತಾನ್‌ನಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದರು. ಪಾಕ್‌ ವಿರುದ್ಧ 2003ರಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್‌ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್‌ಗೆ 675 ರನ್‌ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ವೇಳೆ ಟೀಮ್ ಇಂಡಿಯಾದ ಪರ ಆರಂಭಿಕರಾದ ವೀರೇಂದ್ರ ಸೆಹ್ವಾಗ್‌ ಆರ್ಭಟ ಜೋರಾಗಿತ್ತು. ಇವರು ಮೊದಲ ಇನಿಂಗ್ಸ್‌ನಲ್ಲಿ 375 ಎಸೆತಗಳನ್ನು ಎದುರಿಸಿ 39 ಬೌಂಡರಿ, 6 ಸಿಕ್ಸರ್‌ ಸೇರಿದಂತೆ 309 ರನ್‌ ಸಿಡಿಸಿ ಅಬ್ಬರಿಸಿದ್ದರು.

Harry Brook s Fiery Triple Century in Multan Revives Memories of Sehwag s Iconic Knock

ಮುಲ್ತಾನ್‌ನಲ್ಲಿ ಹ್ಯಾರಿ ಬ್ರೂಕ್‌ ಅವರ ಇನಿಂಗ್ಸ್‌ ನೋಡಿದ ಮೇಲೆ ಎಲ್ಲರಿಗೂ ವೀರೇಂದ್ರ ಸೆಹ್ವಾಗ್‌ ಅವರ ಬ್ಯಾಟಿಂಗ್ ನೆನಪು ಆಗದೆ ಇರದು.

Story first published: Thursday, October 10, 2024, 18:05 [IST]
Other articles published on Oct 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+