Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಳೆಯುವ ಮುನ್ನವೇ ಸೊಕ್ಕು ತೋರಿಸಿದ್ರಾ ವೈಭವ್ ಸೂರ್ಯವಂಶಿ: ವಿರಾಟ್‌ ಹೇಳಿಕೆಯ ಬಗ್ಗೆ ಹರ್ಷ ಬೋಗ್ಲೆ ಸ್ಪಷ್ಟನೆ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಮುಕ್ತಾಯವಾಗಿದೆ. ಈ ಲೀಗ್‌ನ ಚಾಂಪಿಯನ್ ಪಟ್ಟವನ್ನು ಆರ್‌ಸಿಬಿ ತನ್ನದಾಗಿಸಿಕೊಂಡಿದೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಸದ್ದು ಮಾಡಿರುವ ವೈಭವ್ ಸೂರ್ಯವಂಶಿ, ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿ ಇಡೀ ವಿಶ್ವದ ಗಮನ ಸೆಳೆದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಟೀಮ್ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಹೇಳಿಕೆ ಬಗ್ಗೆ ನಿರೂಪಕ ಹರ್ಷ ಭೋಗ್ಲೆ ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ನಕಲಿ ಮತ್ತು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ ಎಂದು ಹರ್ಷ ಬಹಿರಂಗ ಪಡಿಸಿದ್ದಾರೆ.

Harsha Bhogle

ವಿಡಿಯೋ ವೈರಲ್ ಆದ ನಂತರ ಹರ್ಷ ಭೋಗ್ಲೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಸಿಸಿಐ ಪ್ರಶಸ್ತಿ ಸಮಾರಂಭದಲ್ಲಿ ತಾನು ವೈಭವ್ ಸೂರ್ಯವಂಶಿ ಅವರಿಗೆ ಅಂತಹ ಪ್ರಶ್ನೆಯನ್ನೇ ಕೇಳಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ನನ್ನ ಮತ್ತು ವೈಭವ್ ಸೂರ್ಯವಂಶಿ ಅವರ ನಕಲಿ ಡಬ್ ಮಾಡಿದ ಕ್ಲಿಪ್ ಹರಿದಾಡುತ್ತಿದೆ. ಇದು ವೈಭವ್ ಅವರನ್ನು ಅಸಭ್ಯ ಮತ್ತು ದುರಹಂಕಾರಿ ಎಂದು ತೋರಿಸುವ ರೀತಿಯಲ್ಲಿ ಬಿಂಬಿತವಾಗುತ್ತಿದೆ. ಆ ಪ್ರಶ್ನೆಯನ್ನು ತಾನು ಕೇಳಿಲ್ಲ ಎಂದು ಹರ್ಷ ಸ್ಪಷ್ಟ ಪಡಿಸಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಹರ್ಷ ಭೋಗ್ಲೆ ಅವರು ವೈಭವ್‌ಗೆ "ನೀವು ವಿರಾಟ್‌ ಕೊಹ್ಲಿ ಅವರಂತೆ ಕ್ರಿಕೆಟ್‌ ಮೈದಾನದಲ್ಲಿ ಕಿಂಗ್ ಆಗಿ ಮೆರೆಯಲು ಬಯಸುತ್ತೀರಾ? ಎಂದು ಕೇಳಿದಂತೆ ಬಿಂಬಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ವೈಭವ್ ಸೂರ್ಯವಂಶಿ ನನಗೆ ವಿರಾಟ್‌ ಕೊಹ್ಲಿ ಇಷ್ಟ. ಆದರೆ ಅವರ ದಾಖಲೆಗಳು ನನಗೆ ಇಷ್ಟವಾಗುವುದಿಲ್ಲ. ಕೊಹ್ಲಿ ನಿಧಾನಗತಿಯಲ್ಲಿ ಅರ್ಧಶತಕ, ಶತಕ ಬಾರಿಸುತ್ತಾರೆ ಎಂದು ಉದ್ಧಟತನದಲ್ಲಿ ಉತ್ತರಿಸುವಂತೆ ಕಾಣುವ ಆಡಿಯೋ ಡಬ್‌ ಮಾಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿ 776 ರನ್ ಗಳಿಸುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ ಫೈನಲ್ ಮುಗಿದ ಬಳಿಕ ಸ್ವತಃ ವಿರಾಟ್ ಕೊಹ್ಲಿ ಅವರೇ ವೈಭವ್‌ರನ್ನು ಭೇಟಿಯಾಗಿ, ಬೆನ್ನುತಟ್ಟಿದ್ದರು.

Story first published: Wednesday, June 3, 2026, 13:59 [IST]
Other articles published on Jun 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+