Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುವ ಆಟಗಾರ್ತಿ ಶೆಫಾಲಿ ವರ್ಮರನ್ನು ಸೆಹ್ವಾಗ್‌ಗೆ ಹೋಲಿಸಿದ ಹರ್ಷ ಬೋಗ್ಲೆ

Harsha Bhogle Compares Shafali Verma With Virender Sehwag

ಮಹಿಳಾ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದೆ. ಬ್ಯಾಟಿಂಗ್‌ನಿಂದ ಇನ್ನಷ್ಟೇ ಹೇಳಿಕೊಳ್ಳುವ ಪ್ರದರ್ಶನ ಬರಬೇಕಾಗಿದೆ. ಆದರೆ ಮೊನಚು ಬೌಲಿಂಗ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಆದರೆ ಟೀಮ್ ಇಂಡಿಯಾದ ಓರ್ವ ಯುವ ಆಟಗಾರ್ತಿ ಮಾತ್ರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಎಲ್ಲರ ಚಿತ್ತ ತಮ್ಮತ್ತ ನೆಡುವಂತೆ ಮಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ ಶೆಫಾಲಿ ವರ್ಮ. ಕೇವಲ 16 ವರ್ಷದ ಬಲಗೈ ಆಟಗಾರ್ತಿ ಸ್ಪೋಟಕ ಆಟದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಇದೇ ಕಾರಣಕ್ಕೆ ಶೆಪಾಲಿಯನ್ನು ಈಗ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಖ್ಯಾತ ವೀಕ್ಷಕ ವಿವರಣೆಕಾರ ಹರ್ಷಭೋಗ್ಲೆ ಶೆಫಾಲಿ ಸ್ಪೋಟಕ ಆಟವನ್ನು ನೋಡಿ ಈ ರೀತಿ ಬಣ್ಣಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ವೀರೇಂದ್ರ ಸೆಹ್ವಾಗ್ ದಶಕಗಳಿಗೂ ಹೆಚ್ಚು ಕಾಲ ಮಿಂಚಿದ ಆಟಗಾರ. ಆರಂಭಿಕನಾಗಿ ಕಣಕ್ಕಿಳಿದು ವೇಗವಾಗಿ ರನ್ ಕಲೆಹಾಕುವುದನ್ನು ಸೆಹ್ವಾಗ್ ಅಭ್ಯಾಸ ಮಾಡಿಕೊಂಡಿದ್ದರು. ಸೆಹ್ವಾಗ್ ಅವರ ರೀತಿಯಲ್ಲೇ ಶೆಫಾಲಿ ವರ್ಮ ಕೂಡ ಆರಂಭಕರಾಗಿ ಕಣಕ್ಕಿಳಿದು ವೇಗವಾಗಿ ರನ್ ಕಲೆಹಾಕುವುದನ್ನು ಕತಗತಮಾಡಿಕೊಂಡಿದ್ದಾರೆ.

ಮಹಿಳಾ ವಿಶ್ವಕಪ್‌ನಲ್ಲಿ ಶೆಫಾಲಿ ವರ್ಮ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 15 ಎಸೆತಗಳಲ್ಲಿ 29 ರನ್ ಕಲೆಹಾಕಿದ್ದರೆ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 17 ಎಸೆತಗಳಲ್ಲಿ 39 ರನ್ ಚಚ್ಚಿ ಮಿಂಚಿದ್ದರು. ಈ ಸ್ಪೋಟಕ ಆಟದ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ

Story first published: Tuesday, February 25, 2020, 16:44 [IST]
Other articles published on Feb 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+