ಟೀಮ್ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಯಾರು? ಕಾರಣ ಸಹಿತ ಹೇಳಿದ ಹರ್ಷ ಭೋಗ್ಲೆ

ಕ್ರಿಕೆಟ್ ಲೋಕಕ್ಕೆ ಭಾರತ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಅನೇಕ ದಿಗ್ಗಜ ಕ್ರಿಕೆಟಿಗರನ್ನು ವಿಶ್ವಕ್ಕೆ ನೀಡಿದ ದೇಶ ಭಾರತ. ಅದೆಷ್ಟೋ ದಾಖಲೆಗಳು ಭಾರತೀಯರ ಹೆಸರಿನಲ್ಲಿದೆ. ಸಾಕಷ್ಟು ಎಳು ಬೀಳುಗಳನ್ನು ಕೂಡ ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಕಂಡಿದೆ.
ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಭಾರತ ಕ್ರಿಕೆಟ್ ತಂಡವನ್ನು ಅನೇಕ ನಾಯಕರು ಮುನ್ನಡೆಸಿದ್ದಾರೆ. ಇಂತಾ ನಾಯಕರ ಪೈಕಿ ಯಾರು ಶ್ರೇಷ್ಠ ಎಂಬ ಚರ್ಚೆ ಶುರುವಾಗಿದೆ. ಬೇರೆ ಬೇರೆ ಕಾರಣಗಳನ್ನು ನೀಡಿ ಅವರದ್ದೇ ಆಯ್ಕೆಯನ್ನು ನೀಡುತ್ತಿದ್ದಾರೆ ಹಾಲಿ ಮಾಜಿ ಆಟಗಾರರು.
ಕ್ರಿಕೆಟ್ ವಿಶ್ಲೇಷಕ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಕಳೆದ ಎರಡು ದಶಕದಲ್ಲಿ ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ ಯಾರು ಎಂದು ಹೇಳಿದ್ದಾರೆ. ಅದಕ್ಕೆ ಬಲವಾದ ಕಾರಣವನ್ನು ಕೂಡ ನೀಡಿದ್ದಾರೆ ಹರ್ಷ ಭೋಗ್ಲೆ.

ಸಂವಾದದಲ್ಲಿ ಭಾಗಿಯಾದ ಹರ್ಷ ಭೋಗ್ಲೆ
ಇನ್ಸ್ಟಾಗ್ರಾಮ್ ನೇರ ಸಂವಾದದಲ್ಲಿ ಹರ್ಷ ಭೋಗ್ಲೆ ಭಾಗಿಯಾಗಿದ್ದರು. ಐಸಿಸಿಯಿಂದ ನಡೆಸಲ್ಪಟ್ಟ ಈ ನೇರ ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಶಾನ್ ಪೊಲಕ್ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಉತ್ತಮ ನಾಯಕ ಯಾರು ಎಂಬ ಪ್ರಶ್ನೆಯನ್ನು ಕೇಳಲಾಯಿತು.

ಭೋಗ್ಲೆ ಉತ್ತರದ ಮೇಲೆ ಕುತೂಹಲ
ಎರಡು ದಶಕಕ್ಕೂ ಅಧಿಕ ಕಾಲ ವೀಕ್ಷಕವಿವರಣೆಕಾರನಾಗಿ ಹರ್ಷ ಭೋಗ್ಲೆ ಭಾರತ ತಂಡವನ್ನು ಅತ್ಯಂತ ಸಮೀಪದಿಂದ ಕಂಡಿದ್ದಾರೆ. ತಂಡದ ಬೆಳವಣಿಗೆಯ ಪ್ರತೀ ಸಂದರ್ಭವನ್ನೂ ವಿಶ್ಲೇಷಿಸಿದ್ದಾರೆ. ಈ ಸಚಿನ್ ತೆಂಡೂಲ್ಕರ್, ಗಂಗೂಲಿ, ದ್ರಾವಿಡ್, ಕುಂಬ್ಳೆ, ಧೋನಿ ಹಾಗೂ ಕೊಹ್ಲಿ ಈ ಎಲ್ಲಾ ನಾಯಕರ ಸಂದರ್ಭದ ಏರಿಳಿತವನ್ನು ಹತ್ತಿರದಿಂದ ಕಂಡವರು ಹರ್ಷ ಭೋಗ್ಲೆ. ಹೀಗಾಗಿ ಬೋಗ್ಲೆ ನೀಡುವ ಉತ್ತರದ ಮೇಲೆ ಸಾಕಷ್ಟು ಕುತೂಹಲವಿತ್ತು

ಹರ್ಷ ಭೋಗ್ಲೆ ತೆಗೆದುಕೊಂಡ ಹೆಸರು
ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಗೆ ಹರ್ಷ ಭೋಗ್ಲೆ ತೆಗದುಕೊಂಡ ಹೆಸರು ಬೇರೆ ಯಾರದ್ದೂ ಅಲ್ಲ ಮಾಜಿ ನಾಯಕ ಸೌರವ್ ಗಂಗೂಲಿ ಅವರದ್ದು. ಇದಕ್ಕೆ ಹರ್ಷ ಭೋಗ್ಲೆ ಸೂಕ್ತ ಕಾರಣವನ್ನೂ ನೀಡಿದ್ದಾರೆ. ಧೋನಿಯಂತಾ ನಾಯಕರು ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರೂ ಗಂಗೂಲಿ ಯಾಕೆ ಅತ್ಯುತ್ತಮ ನಾಯಕ ಎಂದಿದ್ದಾರೆ ಭೋಗ್ಲೆ.

ಹೊಸ ತಂಡವನ್ನೇ ಕಟ್ಟಿದರು
ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಮತ್ತು ಸಚಿನ್ ತೆಂಡೂಲ್ಕರ್ ನಾಯಕತ್ವವನ್ನು ವಹಿಸಿಕೊಂಡಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿತ್ತು. ಸಂಕಷ್ಟದ ಸಂರ್ಭದಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದು ಸೌರವ್ ಗಂಗೂಲಿ. ಬಳಿಕ ಹೊಸ ರೀತಿಯನ್ನು ತಂಡವನ್ನು ಕಟ್ಟುವ ಜವಾಬ್ದಾರಿಯನ್ನು ವಹಿಸಿಕೊಂಡು ಅದರಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿಕೊಂಡರು ಸೌರವ್, ಆ ಕಾರಣಕ್ಕೆ ಗಂಗೂಲಿ ಬೆಸ್ಟ್ ನಾಯಕ ಎಂದರು ಭೋಗ್ಲೆ.

ತಂಡದಲ್ಲಿ ಭಾರೀ ಬದಲಾವಣೆ
ಗಂಗೂಲಿ ನಾಯಕನಾದ ಬಳಿಕ ಹೊಸಬರಿಗೆ ತಂಡದಲ್ಲಿ ಅವಕಾಶಗಳನ್ನು ನೀಡಿದರು. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್‌ರಂತಾ ಆಟಗಾರರನ್ನು ತಂಡಕ್ಕೆ ಕರೆತಂದರು. ಇದು ತಂಡದ ಫಲಿತಾಂಶದ ಮೇಲೆ ತಕ್ಷಣಕ್ಕೇ ಪರಿಣಾಮವನ್ನು ನೀಡಿದಂತಾ ಬದಲಾವಣೆಯಾಗಿತ್ತು ಎಂದಿದ್ದಾರೆ ಹರ್ಷ ಭೋಗ್ಲೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications