ಆಸ್ಟ್ರೇಲಿಯಾ ವಿರುದ್ಧದ ಏಕದಿನಕ್ಕೆ ತಂಡ ಪ್ರಕಟಿಸಿದ ಹರ್ಷ ಭೋಗ್ಲೆ

ಸಿಡ್ನಿ: ಕ್ರಿಕೆಟ್ ಪ್ರೇಮಿಗಳು ಕಾಯುತ್ತಿರುವ ಭಾರತ-ಆಸ್ಟ್ರೇಲಿಯಾ ಸರಣಿ ನವೆಂಬರ್ 27ರಿಂದ ನಡೆಯಲಿದೆ. ಸರಣಿಗಾಗಿ ಈಗಾಗಲೇ ಆಸ್ಟ್ರೇಲಿಯಾದಲ್ಲಿರುವ ವಿರಾಟ್ ಕೊಹ್ಲಿ ಪಡೆ ತಯಾರಿ ನಡೆಸುತ್ತಿದೆ. ಪ್ರವಾಸವು 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದ್ದು, ಏಕದಿನದೊಂದಿಗೆ ಸರಣಿ ಆರಂಭಗೊಳ್ಳಲಿದೆ.
ಬಹು ನಿರೀಕ್ಷಿತ ಸರಣಿ ಆರಂಭಗೊಳ್ಳುವುಕ್ಕೂ ಮುನ್ನ ಕ್ರಿಕೆಟ್ ವಿಶ್ಲೇಷಕ, ಕಾಮೆಂಟೇಟರ್, ಪತ್ರಕರ್ತ ಹರ್ಷಭೋಗ್ಲೆ ಭಾರತ ಏಕದಿನ ತಂಡ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ಏಕದಿನದಲ್ಲಿ ರೋಹಿತ್ ಹೆಸರಿಸಲ್ಪಟ್ಟಿಲ್ಲವಾದ್ದರಿಂದ ಬೋಗ್ಲೆ ನೆಚ್ಚಿನ ತಂಡದಲ್ಲೂ ರೋಹಿತ್ ಕಾಣಿಸಿಕೊಂಡಿಲ್ಲ.
ರೋಹಿತ್ ಶರ್ಮಾ ಬದಲಿಗೆ ಶಿಖರ್ ಧವನ್‌ಗೆ ಆರಂಭಿಕ ಜೊತೆಗಾರನಾಗಿ ಮಯಾಂಕ್ ಅಗರ್ವಾಲ್ ಹೆಸರಿಸಲ್ಪಟ್ಟಿದ್ದಾರೆ. ಇನ್ನು, ಶ್ರೇಯಸ್ ಐಯ್ಯರ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಮೊದಲಾದ ಆಟಗಾರರು ಭೋಗ್ಲೆ ಒಡಿಐ ಪಟ್ಟಿಯಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭೋಗ್ಲೆ ನೆಚ್ಚಿನ ಒಡಿಐ XI
ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯೂಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಯುಜುವೇಂದ್ರ ಚಾಹಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications