ನನ್ನ ಜೀವನದ ಪ್ರತಿ ಕ್ಷಣವೂ ನಿನ್ನ ಅನುಪಸ್ಥಿತಿ ಕಾಡುತ್ತದೆ: ಸಹೋದರಿ ಕುರಿತು ಅಳಲು ತೋಡಿಕೊಂಡ ಹರ್ಷಲ್ ಪಟೇಲ್

ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ತಮ್ಮ ಸಹೋದರಿಯ ಅಗಲುವಿಕೆ ಕುರಿತು ಭಾವನಾತ್ಮಕ ಟಿಪ್ಪಣಿ ಬರೆದು ಸಾಮಾಜಿಕ ಜಾಲದಲ್ಲಿ ಪೋಸ್ಟ್ ಹಾಕುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
31ರ ಹರೆಯದ ವೇಗಿ ಐಪಿಎಲ್ ಆರಂಭಕ್ಕೂ ಮುನ್ನ ಸಹೋದರಿಯೊಂದಿಗೆ ಹಂಚಿಕೊಂಡ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ. ಸಹೋದರಿಯ ಅಗಲುವಿಕೆಯಿಂದ ಮನದಾಳದಲ್ಲಿ ಉಂಟಾದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಟಿಪ್ಪಣಿ ಮೂಲಕ ವ್ಯಕ್ತಪಡಿಸಿದ ಹರ್ಷಲ್ ಪಟೇಲ್ ಹೀಗೆ ಬರೆದಿದ್ದಾರೆ.
ಸಹೋದರಿ, "ನಮ್ಮ ಜೀವನದಲ್ಲಿ ಕರುಣಾಮಯಿ ಮತ್ತು ಅತ್ಯಂತ ಸಂತೋಷದಾಯಕ ವ್ಯಕ್ತಿಯಾಗಿದ್ದೀರಿ. ನಿಮ್ಮ ಕೊನೆಯ ಉಸಿರು ಇರುವವರೆಗೂ ನಿಮ್ಮ ಮುಖದಲ್ಲಿ ದೊಡ್ಡ ನಗುವಿನೊಂದಿಗೆ ನೀವು ಜೀವನದಲ್ಲಿ ನಂಬಲಾಗದ ಕಷ್ಟಗಳನ್ನು ಎದುರಿಸಿದ್ದೀರಿ. ನಾನು ಭಾರತಕ್ಕೆ ಹಿಂತಿರುಗುವ ಮೊದಲು ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಇದ್ದಾಗ ನೀವು ನನ್ನ ಆಟದ ಮೇಲೆ ಕೇಂದ್ರೀಕರಿಸಲು ಮತ್ತು ನಿಮ್ಮ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದೀರಿ. ಆ ಮಾತುಗಳೇ ನಾನು ನಿನ್ನೆ ರಾತ್ರಿ ಮರಳಿ ಬಂದು ತಂಡದಲ್ಲಿ ಸೇರಿಕೊಂಡು ಮೈದಾನಕ್ಕಿಳಿಯಲು ಕಾರಣ'' ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಪ್ರಸ್ತುತ "ನಿನ್ನನ್ನು ನೆನಪಿಸಿಕೊಳ್ಳುವುದನ್ನು ಮಾಡಬಲ್ಲೆ ಅಷ್ಟೆ. ನೀವು ನನ್ನ ಬಗ್ಗೆ ಹೆಮ್ಮೆಪಡುವ ಎಲ್ಲ ಕೆಲಸಗಳನ್ನು ನಾನು ಮುಂದುವರಿಸುತ್ತೇನೆ. ನನ್ನ ಜೀವನದ ಪ್ರತಿ ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯದಲ್ಲಿ ನಿಮ್ಮ ಅನುಪಸ್ಥಿತಿಯನ್ನು ಅನುಭವಿಸುತ್ತಿರುವೆ " ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿಮ್ಮ ಆತ್ಮಕ್ಕೆ ಚಿರ ಶಾಂತಿ ಸಿಗಲಿ'' ಎಂದು ದಿವಂಗತ ಸಹೋದರಿಗೆ ಹರ್ಷಲ್ ಸಂತಾಪ ಸೂಚಿಸಿದ್ದಾರೆ.
ಏಪ್ರಿಲ್ 12 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದರು. ನಂತರ ಅವರು ಏಪ್ರಿಲ್ 16 ರಂದು ಜರುಗಿದ ದೆಹಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಮರಳಿದರು. ಈವರೆಗೂ ಆರ್‌ಸಿಬಿ ಪರ ಹರ್ಷಲ್ ಪಟೇಲ್ ಆಡಿರುವ 5 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications