Duleep Trophy 2024: ಶಿಕ್ಷೆಗೊಳಗಾದರೂ ನಿಲ್ಲದ ಕೆಕೆಆರ್ ಬೌಲರ್ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆ
ಕ್ರಿಕೆಟ್ ಮೈದಾನದಲ್ಲಿ ಆಟಗಾರರ ಆಕ್ರಮಣಶೀಲತೆಯನ್ನು ಸಮರ್ಥನೆ ಮಾಡಿಕೊಳ್ಳಲಾಗುತ್ತದೆ. ಆದರೆ ಕೆಲವೊಮ್ಮೆ ಆಟಗಾರರು ಆಕ್ರಮಣಶೀಲತೆಯನ್ನು ತೋರಿಸಲು ತಮ್ಮ ವೃತ್ತಿಜೀವನವನ್ನು ಪಣಕ್ಕಿಡುತ್ತಾರೆ. ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವೇಗದ ಬೌಲರ್ ಕೂಡ ಇದೇ ರೀತಿ ಮಾಡುತ್ತಿರುವುದು ಕಂಡು ಬಂದಿದೆ.
ಐಪಿಎಲ್‌ನಲ್ಲಿ ಫ್ಲೈಯಿಂಗ್ ಕಿಸ್ ವಿವಾದದಿಂದ ಸುದ್ದಿಯಾಗಿದ್ದ ಹರ್ಷಿತ್ ರಾಣಾ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈ ಹಿಂದೆ ಬಿಸಿಸಿಐ ಐಪಿಎಲ್‌ನಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡರೂ ರಾಣಾ ಮೇಲೆ ಪರಿಣಾಮ ಬೀರಲಿಲ್ಲ. ಅವರು ಮತ್ತೆ ದುಲೀಪ್ ಟ್ರೋಫಿಯ ಮೊದಲ ದಿನದ ಪಂದ್ಯದಲ್ಲಿ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.

ಭಾರತ ಡಿ ತಂಡದ ಪರ ಆಡುತ್ತಿರುವ ಹರ್ಷಿತ್ ರಾಣಾ, ಭಾರತ ಸಿ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ಗಾಯಕ್ವಾಡ್ 19 ಎಸೆತಗಳಲ್ಲಿ 5 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ವೇಳೆ ವಿಕೆಟ್ ಪಡೆದ ಖುಷಿಯಲ್ಲಿ ಹರ್ಷಿತ್ ಫ್ಲೈಯಿಂಗ್ ಕಿಸ್ ನೀಡಿದರು. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಐಪಿಎಲ್ ಶಿಕ್ಷೆ
2024ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆ ಮಾಡಿದ್ದರು. ಎಸ್‌ಆರ್‌ಹೆಚ್ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದು ಫ್ಲೈಯಿಂಗ್ ಕಿಸ್ ನೀಡಿದ್ದರು. ಇದಾದ ನಂತರ ಬಿಸಿಸಿಐ ಅಶಿಸ್ತಿನ ಕಾರಣದಿಂದಾಗಿ ಹರ್ಷಿತ್ ರಾಣಾಗೆ ಒಂದು ಪಂದ್ಯಕ್ಕೆ ನಿಷೇಧಿಸಿತ್ತು. ಆದರೆ ಈ ಬಾರಿಯೂ ಹರ್ಷಿತ್ ಅದೇ ಕೆಲಸ ಮಾಡಿರುವುದು ಕ್ರಿಕೆಟ್ ಗಲ್ಲಿಯಲ್ಲಿ ಚರ್ಚೆಗಳು ಆರಂಭವಾಗಿವೆ.
ಕ್ರಿಕೆಟ್ ಅಭಿಮಾನಿಗಳು ಹೇಳಿದ್ದೇನು?
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಅತ್ಯಂತ ಆಕ್ರಮಣಕಾರಿ ಆಟಗಾರ. ಮೈದಾನದಲ್ಲಿ ಕೊಹ್ಲಿ ಆಕ್ರಮಶೀಲತೆಗೆ ಸರಿಸಾಟಿಯೇ ಇಲ್ಲ. ಅವರನ್ನು ಮೈದಾನದಲ್ಲಿ ಕೆಣಕಿ ಉಳಿದವರು ಇಲ್ಲ. ಅಷ್ಟರ ಮಟ್ಟಿಗೆ ಅವರು ತಮ್ಮ ಸೇಡನ್ನು ತಿರಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುತ್ತಾರೆ.
ಈಗ ಹರ್ಷಿತ್ ರಾಣಾ ಆಕ್ಷನ್ ಬಗ್ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದು,
'ವಿರಾಟ್ ಕೊಹ್ಲಿ ಮುಂದೆ ಇದನ್ನು ಮಾಡಲು ಹರ್ಷಿತ್‌ಗೆ ಹೇಳಿ' ಎಂದು ಸವಾಲು ಹಾಕಿದ್ದಾರೆ. ಮತ್ತೊಬ್ಬರು ಈ ರೀತಿ ವರ್ತನೆ ಉದ್ದೇಶಪೂರ್ವಕವಾಗಿ ಮಾಡುತ್ತಾರೆ. ಅವರು ಅದನ್ನು ಬದಲಾಯಿಸಬೇಕು ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications