Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Harshit Rana: ಆಸ್ಟ್ರೇಲಿಯಾದಲ್ಲಿ ಧೂಳೆಬ್ಬಿಸಿದ ಭಾರತದ ವೇಗಿ ಹರ್ಷಿತ್ ರಾಣಾ

ಅಡಿಲೇಡ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಕ್ಯಾನ್​​ಬೆರಾ ಮನುಕಾ ಓವಲ್​ ಮೈದಾನದಲ್ಲಿ ನಡೆದ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ಮತ್ತು ಟೀಮ್ ಇಂಡಿಯಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು.

ಹೀಗಾಗಿ ಎರಡನೇ ದಿನದಂದು ಉಭಯ ತಂಡಗಳ ನಡುವೆ ತಲಾ 46 ಓವರ್‌ಗಳಿಗೆ ನಡೆದ ಅಭ್ಯಾಸ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಪಿಂಕ್ ಬಾಲ್ ಟೆಸ್ಟ್ ಆಡಲು ರೆಡಿಯಾಗಿದೆ. ಟೀಮ್ ಇಂಡಿಯಾ ಪರ ಯುವ ಆಟಗಾರರು ಸಂಘಟಿತ ಪ್ರದರ್ಶನ ನೀಡಿದ್ದಾರೆ. ಅದರಲ್ಲಿ ವೇಗಿ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

Harshit Rana Takes 4 Wickets in 6 Balls Against Prime Minister s XI

ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ಬ್ಯಾಟರ್‌ಗಳಿಗೆ ಕಾಡಿದ ಹರ್ಷಿತ್ ರಾಣಾ ಮಿಂಚಿನ ಬೌಲಿಂಗ್ ದಾಳಿ ನಡೆಸಿದರು. ಈ ಪಂದ್ಯದಲ್ಲಿ ಮೊದಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ರೋಹಿತ್ ಶರ್ಮಾ ಲೆಕ್ಕಚಾರಕ್ಕೆ ಬದ್ದವಾಗಿ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ವೇಗಿಗಳು ಪ್ರೈಮ್ ಮಿನಿಸ್ಟರ್ಸ್ ಇಲೆವೆನ್‌ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು. ಆದರೆ, ಹರ್ಷಿತ್ ರಾಣಾ ಮಾತ್ರ ತನ್ನ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಸಂಚಲನ ಮೂಡಿಸಿದರು.

ಪ್ರೈಮ್ ಮಿನಿಸ್ಟರ್ಸ್ ಇಲೆವೆನ್‌ ತಂಡ ಆರಂಭದಲ್ಲಿ 22 ರನ್‌​​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಒಂದಾದ ಸ್ಯಾಮ್ ಕಾನ್ಟಾಸ್ ಹಾಗೂ ಜಾಕ್ ಕ್ಲೇಟನ್ ತಂಡಕ್ಕೆ ಆಸರೆಯಾದರು. ಈ ಜೋಡಿಯು 2ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.

ಈ ಸಂದರ್ಭದಲ್ಲಿ ಉರಿ ಬೌಲಿಂಗ್ ದಾಳಿಗಿಳಿದ ಹರ್ಷಿತ್ ರಾಣಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದರು. 23ನೇ ಓವರ್‌​​ನ 4ನೇ ಎಸೆತದಲ್ಲಿ ಕ್ಲೇಟನ್ (40) ವಿಕೆಟ್ ಪಡೆದ ರಾಣಾ, 6ನೇ ಎಸೆತದಲ್ಲಿ ಆಲಿವರ್ ಡೇವಿಸ್ (0) ರನ್ನು ಬಲಿ ತೆಗೆದುಕೊಂಡರು.

ಇದಾದ ಬಳಿಕ ಪುನಃ 25ನೇ ಓವರ್‌​​ನಲ್ಲಿ ದಾಳಿ ಶುರು ಮಾಡಿದ ಹರ್ಷಿತ್ ರಾಣಾ, ಮೊದಲ ಎಸೆತದಲ್ಲಿ ನಾಯಕ ಜ್ಯಾಕ್ ಎಡ್ವರ್ಡ್ಸ್ (1) ಔಟಾದರು. ಹಾಗೇಯೇ ಅದೇ ಓವರ್‌ನ ಮೂರನೇ ಎಸೆತದಲ್ಲಿ ಸ್ಯಾಮ್ ಹಾರ್ಪರ್ (0) ವಿಕೆಟ್ ಪಡೆದು ದಾಖಲೆ ಮಾಡಿದರು. ಈ ಮೂಲಕ ಕೇವಲ 6 ಎಸೆತಗಳಲ್ಲಿ ಯಾವುದೇ ರನ್ ಬಿಟ್ಟು ಕೊಡದೇ 4 ವಿಕೆಟ್ ಕಬಳಿಸಿ ಹರ್ಷಿತ್ ರಾಣಾ ಮಿಂಚಿದರು. ಪರಿಣಾಮ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡ 40 ಓವರ್​​ಗಳ ಮುಕ್ತಾಯದ ವೇಳೆಗೆ 210 ರನ್‌ಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Story first published: Sunday, December 1, 2024, 22:05 [IST]
Other articles published on Dec 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+