Harshit Rana: ಹರ್ಷಿತ್ ರಾಣಾ ತಂಡ ಸೇರಿದ್ದು ಹೇಗೆ? ಐಸಿಸಿಯ ಯಾವ ನಿಯಮದ ಲಾಭ ಪಡೆಯಿತು ಭಾರತ
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20 ಪಂದ್ಯ ಪುಣೆಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಟಾಸ್ ಸೋತ ಬಳಿಕ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ ಇಲೆವೆನ್ ಘೋಷಿಸಿದಾಗ, ಆ ತಂಡದಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದಿರಲಿಲ್ಲ. ಆದರೆ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದಾಗ 12ನೇ ಓವರ್ ಮಾಡಲು ಹರ್ಷಿತ್ ರಾಣಾ ಬಂದರು. ಆಗಲೇ ಅಭಿಮಾನಿಗಳಿಗೆ ಕನ್‌ಫ್ಯೂಸ್ ಆರಂಭವಾಯಿತು.
ಹರ್ಷಿತ್ ರಾಣಾ ಬದಲಿ ಆಟಗಾರನಾಗಿ ತಂಡವನ್ನು ಸೇರಿದರು. ಅಲ್ಲದೆ ಅವರು ಬದಲಿ ಆಟಗಾರನಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲದೆ ತಮ್ಮ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಆರ್‌ಸಿಬಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗೆ ಖೆಡ್ಡಾ ತೋಡಿದರು. ಹರ್ಷಿತ್ ರಾಣಾ ಅವರನ್ನು ತಪ್ಪಾಗಿ ಅರ್ಥಹಿಸಿ ಕೊಂಡ ಲಿಯಾಮ್ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಇವರು ಈಗಾಗಲೇ ಭಾರತದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರೆ. ಪುಣೆಯಲ್ಲಿ ಇವರು ಟಿ20 ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು. ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 119ನೇ ಆಟಗಾರ ಎಂಬ ಹೆಗ್ಗಳಿಕೆಗೆ ಹರ್ಷಿತ್ ಪಾತ್ರರಾದರು.

ಬದಲಿ ಆಟಗಾರನಾಗಿ ತಂಡ ಪ್ರವೇಶ
ಶಿವಂ ದುಬೆ ಅವರ ಬದಲಿಗೆ ಹರ್ಷಿತ್ ರಾಣಾ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇವರು ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರ ಅರ್ಧಶತಕದ ಆಟದ ಬಲದಿಂದ ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಇದೇ ವೇಳೆ ಬ್ಯಾಟಿಂಗ್ ಮಾಡುವಾಗ ಚೆಂಡು ಶಿವಂ ದುಬೆ ಅವರ ಹೆಲ್ಮೆಟ್‌ಗೆ ಬಡಿಯತು. ಹೆಲ್ಮೆಟ್ ಧರಿಸಿದ್ದರು ಆದರೆ ಚೆಂಡು ತಗುಲಿ ಗಾಯಗೊಂಡರು. ಅದಾದ ನಂತರ ಅವರು ಬ್ಯಾಟಿಂಗ್ ಮಾಡಿದರು ಆದರೆ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಇಳಿಯಲಿಲ್ಲ. ಅವರ ಸ್ಥಾನದಲ್ಲಿ, ಹರ್ಷಿತ್ ರಾಣಾ ಕನ್ಕ್ಯುಶನ್ ಬದಲಿ ಆಟಗಾರನಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು.

ಹರ್ಷಿತ್ ರಾಣಾ ಭಾರತದ ಪರ ಚೊಚ್ಚಲ ಟಿ20 ಪಂದ್ಯದಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸುತ್ತಾರೆ. ಇವರು ಹಾಕಿದ 4 ಓವರ್‌ಗಳಲ್ಲ 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಹರ್ಷಿತ್ ರಾಣಾಗೂ ಅರಿವು ಇಲ್ಲದ ಹಾಗೆ ಅವರ ಟಿ20 ಡೆಬ್ಯೂ ಆಗಿ ಹೋಗಿದೆ. ಇದರೊಂದಿಗೆ ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು ಕನ್ಕ್ಯುಶನ್ ಬದಲಿ ಆಟಗಾರನಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications