Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ranji Trophy: ಕರ್ನಾಟಕ ನಾಕೌಟ್‌ ಕನಸು ದೂರ: ಹರಿಯಾಣಕ್ಕೆ ದಿನದ ಗೌರವ

ಕರ್ನಾಟಕ ಹಾಗೂ ಹರಿಯಾಣ ನಡುವಣ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಕೊಂಚ ಹಿನ್ನಡೆ ಸಾಧಿಸಿದೆ. ಎರಡನೇ ದಿನದಾಟದಲ್ಲಿ ಹರಿಯಾಣ ದಿನದಾಟದ ಗೌರವ ತನ್ನದಾಗಿಸಿಕೊಂಡಿದೆ. ಹರಿಯಾಣ ಇನ್ನು 72 ರನ್‌ ಬಾರಿಸಿದಲ್ಲಿ ಇನಿಂಗ್ಸ್‌ ಮುನ್ನಡೆಯ ಕನಸು ನನಸಾಗುತ್ತದೆ. ಈ ಮೂಲಕ ಕರ್ನಾಟಕ ಬೋನಸ್ ಅಂಕವನ್ನು ಕಲೆ ಹಾಕುವ ಕನಸಿಗೆ ಸದ್ಯಕ್ಕಂತೂ ಪೆಟ್ಟು ಬಿದ್ದಿದೆ.

ಕರ್ನಾಟಕ ಈ ಪಂದ್ಯವನ್ನು ಬೋನಸ್‌ ಅಂಕದಿಂದ ಗೆಲ್ಲುವುದು ಅನಿರ್ವಾಯವಾಗಿತ್ತು. ಹೀಗಾಗು ಮೊದಲು ಬ್ಯಾಟ್ ಮಾಡಿದಾಗ ದೊಡ್ಡ ಮೊತ್ತವನ್ನು ಕಲೆ ಹಾಕುವತ್ತ ದೃಷ್ಟಿ ನೆಟ್ಟು 304 ರನ್‌ಗಳಿಗೆ ಆಲೌಟ್ ಆಯಿತು. ಶುಕ್ರವಾರ ಎರಡನೇ ದಿನದಾಟವನ್ನು 5 ವಿಕೆಟ್‌ಗೆ 267 ರನ್‌ಗಳಿಂದ ಆಟ ಮುಂದುವರಿಸಿದ ಕರ್ನಾಟಕ, ಐದು ವಿಕೆಟ್‌ಗಳನ್ನು ಪಟಪಟನೇ ಕಳೆದುಕೊಂಡಿತು. ಹರಿಯಾಣ ತನ್ನ ಮೊದಲ ಇನಿಂಗ್ಸ್‌ ಆರಂಭಿಸಿದ್ದು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಮೊದಲ ಇನಿಂಗ್ಸ್‌ನಲ್ಲಿ ಹರಿಯಾಣ ದಿನದಾಟದಂತ್ಯಕ್ಕೆ 5 ವಿಕೆಟ್‌ಗೆ 232 ರನ್‌ ಕಲೆ ಹಾಕಿದೆ.

Haryana Dominates Day 2 Against Karnataka in Ranji Trophy Group C Clash

ಎರಡನೇ ದಿನದಾಟದಟಕ್ಕೆ ಕೆಎಲ್ ಶ್ರೀಜೇತ್ ಹಾಗೂ ಯಶೋವರ್ಧನ್ ಪ್ರತಾಪ್‌ ದೊಡ್ಡ ಇನಿಂಗ್ಸ್‌ ಕಟಲಿಲ್ಲ. ಕೆಳ ಕ್ರಮಾಂಕದ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.

ಮೊದಲ ಇನಿಂಗ್ಸ್ ಆರಂಭಿಸಿದ ಹರಿಯಾಣ ಆರಂಭ ಉತ್ತಮಾಗಿತ್ತು. ಆರಂಭಿಕರಾದ ಲಕ್ಷ್ಯ ದಲಾಲ್ ಹಾಗೂ ಅಂಕಿತ್ ಕುಮಾರ್‌ ತಂಡಕ್ಕೆ 74 ರನ್‌ಗಳ ಕಾಣಿಕೆ ನೀಡಿದರು. ಲಕ್ಷ್ಯ ದಲಾಲ್‌ 22 ರನ್ ಬಾರಿಸಿದ್ದಾಗ ಯಶೋವರ್ಧನ್‌ ಪ್ರತಾಪ್‌ ತೋಡಿದ ಖೆಡ್ಡಾಗೆ ಬಲಿಯಾದರು. ಎರಡನೇ ವಿಕೆಟ್‌ಗೂ ಅಂಕಿತ್ ಕುಮಾರ್ ಹಾಗೂ ಯುವರಾಜ್‌ ಸಿಂಗ್ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 78 ರನ್‌ ಸೇರಿಸಿತು. ಯುವರಾಜ್‌ ಸಿಂಘ್ 33 ರನ್‌ಗಳಿಸಿ ಯಶೋವರ್ಧನ್‌ಗೆ ವಿಕೆಟ್‌ ಒಪ್ಪಿಸಿದರು.

ಭರವಸೆಯ ಆಟಗಾರ ಹಿಮಾಂಶು ರಾಣ್‌ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ನಾಯಕ ಅಂಕಿತ್‌ ಕುಮಾರ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಇವರು 154 ಎಸೆತಗಳಲ್ಲಿ 19 ಬೌಂಡರಿ ಸೇರಿದಂತೆ 118 ರನ್‌ ಬಾರಿಸಿ ಔಟ್ ಆದರು.

ಕರ್ನಟಕದ ಪರ ಯಶೋವರ್ಧನ ಎರಡು ವಿಕೆಟ್‌ ಪಡೆದರು.

ಕೇರಳ ನಾಕೌಟ್‌ಗೆ

ಇನ್ನೊಂದು ಸಿ ಗುಂಪಿನ ಪಂದ್ಯದಲ್ಲಿ ಕೇರಳ ಇನಿಂಗ್ಸ್ ಹಾಗೂ 169 ರನ್‌ಗಳಿಂದ ಬಿಹಾರ ತಂಡವನ್ನು ಮಣಿಸಿ ನಾಕೌಟ್‌ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಪೂರ್ಣ ಏಳು ಅಂಕವನ್ನು ಕಲೆ ಹಾಕಿರುವ ಕೇರಳ ಸುಲಭವಾಗಿ ನಾಕೌಟ್ ಹಂತ ತಲುಪಿದೆ. ಮೊದಲು ಬ್ಯಾಟ್ ಮಾಡಿದ ಕೇರಳ 351 ರನ್ ಬಾರಿಸಿ ಅಬ್ಬರಿಸಿತು. ಈ ವೇಳೆ ಸಲ್ಮಾನ್‌ ನಿಜಾರ್‌ 150 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿದರು. ಬಿಹಾರ ತಂಡವನ್ನು ಎರಡೂ ಇನಿಂಗ್ಸ್‌ಗಳಲ್ಲಿ ಬಹುವಾಗಿ ಕಾಡಿದ ಜಲಜ್ ಸಕ್ಸೇನಾ ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್‌ ಪಡೆದು ಜಯದಲ್ಲಿ ಮಿಂಚಿದರು.

Story first published: Friday, January 31, 2025, 18:19 [IST]
Other articles published on Jan 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+