PKL Final: ಫೈನಲ್‌ನಲ್ಲಿ ಪಾಟ್ನಾ ಪೈರೇಟ್ಸ್ ಮಣಿಸಿದ ಹರಿಯಾಣ ಸ್ಟೀಲರ್ಸ್ ಚಾಂಪಿಯನ್
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ರೋಚಕ ಅಂತ್ಯವನ್ನು ಕಂಡಿದೆ. ಪ್ರಸಕ್ತ ಆವೃತ್ತಿ ಫೈನಲ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್ ತಂಡಗಳು ನಡುವೆ ಭರ್ಜರಿ ಫೈಟ್ ನಡೆಸಿತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹರಿಯಾಣ 32-22 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಈ ಪಟ್ಟವನ್ನು ಅಲಂಕರಿಸಿದ ಎಂಟನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಹರಿಯಾಣ ತಂಡ ಆರಂಭದಿಂದಲೂ ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸಿತು. ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಪಾಟ್ನಾ ಪೈರೇಟ್ಸ್ ಆಸೆಗೆ ಹರಿಯಾಣ ಪೆಟ್ಟು ನೀಡಿತು. ಮೊದಲಾವಧಿಯ ಪಂದ್ಯದಿಂದಲೂ ಪಾಟ್ನಾ ಪೈರೇಟ್ಸ್ ಸ್ಥಿರ ಪ್ರದರ್ಶನ ನೀಡಿ ಅಂಕಗಳನ್ನು ಬೇಟೆ ನಡೆಸುವ ಯೋಜನೆಯನ್ನು ಹಾಕಿಕೊಂಡಿತು. ಆದರೆ ಹರಿಯಾಣ ಈ ಅವಧಿಯಲ್ಲಿ ಅಲ್ಪ ಮುನ್ನಡೆ ಸಾಧಿಸಿತು.

ಮೊದಲಾವಧಿಯ ಆಟದಲ್ಲಿ ಹರಿಯಾಣ ಸ್ಟೀಲರ್ಸ್ ದಾಳಿಯಲ್ಲಿ 7 ಅಂಕವನ್ನು ಕಲೆ ಹಾಕಿತು. ಇನ್ನು ಟ್ಯಾಕಲ್‌ನಲ್ಲಿ ಹರಿಯಾಣ 8 ಅಂಕವನ್ನು ಕಲೆ ಹಾಕಿ ಮಿಂಚಿತು. ಈ ಅವಧಿಯಲ್ಲಿ ಯಾವುದೇ ತಂಡ ಒಮ್ಮೆಯೂ ಆಲೌಟ್ ಆಗಲಿಲ್ಲ. ಈ ಅವಧಿಯಲ್ಲಿ ಹರಿಯಾಣ 15-12 ಅಂಕಗಳಿಂದ ಪಾಟ್ನಾ ಪೈರೇಟ್ಸ್ ತಂಡಕ್ಕಿಂತ ಮುನ್ನಡೆ ಸಾಧಿಸಿತು.
ಹರಿಯಾಣಾ ಚಾಂಪಿಯನ್
ಎರಡನೇ ಅವಧಿಯಲ್ಲಿ ಪುಟಿದೇಳುವ ಆಸೆಯನ್ನು ಹೊಂದಿದ್ದ ಪಾಟ್ನಾ ಪೈರೇಟ್ಸ್ ಆಸೆ ಮಣ್ಣು ಪಾಲಾಯಿತು. ಈ ವೇಳೆ ಹರಿಯಾಣ 17-11 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿಯಲ್ಲಿ ಹರಿಯಾಣ 6, ಟ್ಯಾಕಲ್‌ನಲ್ಲಿ 8 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಪಾಟ್ನಾ ಪೈರೇಟ್ಸ್ ತಂಡ ಒಮ್ಮೆ ಆಲೌಟ್ ಆಯಿತು. ಒಟ್ಟಾರೆ ಪಂದ್ಯದಲ್ಲಿ ಹರಿಯಾಣ 41 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಅಂಕಗಳನ್ನು ಕಲೆ ಹಾಕಿತು. ಇನ್ನು ಪಾಟ್ನಾ ಪೈರೇಟ್ಸ್ 42 ಬಾರಿ ದಾಳಿ ನಡೆಸಿ 9 ಅಂಕಗಳನ್ನು ಸೇರಿಸಿತು. ಇನ್ನು ಟ್ಯಾಕಲ್‌ನಲ್ಲಿ 15 ಅಂಕಗಳನ್ನು ಹರಿಯಾಣ ಸ್ಟೀಲರ್ಸ್, 10 ಅಂಕಗಳನ್ನು ಪಾಟ್ನಾ ಕಲೆ ಹಾಕಿತು.
ಹರಿಯಾಣ ಪರ ಶಿವಂ ಪತಾರೆ 9 ಅಂಕಗಳನ್ನು ಕಲೆ ಹಾಕಿದರೆ, ವಿನಯ್ 6 ಅಂಕಗಳನ್ನು ಸೇರಿಸಿ ಜಯದಲ್ಲಿ ಮಿಂಚಿದರು. ಗುರುದೀಪ್ ಆರು ಅಂಕವನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಪಟ್ಟಿ
1. ಜೈಪುರ್ ಪಿಂಕ್ ಪ್ಯಾಂಥರ್ಸ್
2. ಯು ಮುಂಬಾ
3. ಪಾಟ್ನಾ ಪೈರೇಟ್ಸ್
4. ಪಾಟ್ನಾ ಪೈರೇಟ್ಸ್
5. ಪಾಟ್ನಾ ಪೈರೇಟ್ಸ್
6. ಬೆಂಗಳೂರು ಬುಲ್ಸ್
7. ಬಂಗಾಳ ವಾರಿಯರ್ಸ್
8. ದಬಾಂಗ್ ದೆಹಲಿ ಕೆ.ಸಿ
9. ಜೈಪುರ್ ಪಿಂಕ್ ಪ್ಯಾಂಥರ್ಸ್
10. ಪುಣೇರಿ ಪಲ್ಟನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications