For Quick Alerts
ALLOW NOTIFICATIONS  
For Daily Alerts
 

R Ashwin: ಅಶ್ವಿನ್ ನಿವೃತ್ತಿ ಹಿಂದಿನ ಗುಟ್ಟನ್ನು ಮರೆ ಮಾಚಿದ್ರಾ?

ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಡಿಸೆಂಬರ್ 18 ರಂದು ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲಿ ಅಶ್ವಿನ್ ನಿವೃತ್ತಿ ನಿರ್ಧಾರವನ್ನು ಏಕೆ ತೆಗೆದುಕೊಂಡರು ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ. ಇದರ ನಡುವೆ ನಿವೃತ್ತಿಯ ಬಗ್ಗೆ ಅಶ್ವಿನ್ ಅವರ ತಂದೆಯ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಅಶ್ವಿನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಂದೆಯ ಹೇಳಿಕೆ ಬಗ್ಗೆ ಮೌನ ಮುರಿದಿದ್ದಾರೆ. ಈ ಮೂಲಕ ಅಶ್ವಿನ್ ತಮ್ಮ ನಿವೃತ್ತಿಯ ಹಿಂದಿನ ರಹಸ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರಾ? ಎಂಬ ಚರ್ಚೆ ಶುರುವಾಗಿದೆ.

ಮಾಧ್ಯಮಗಳೊಂದಿಗೆ ಮಗನ ನಿವೃತ್ತಿಯ ಬಗ್ಗೆ ಅಶ್ವಿನ್ ತಂದೆ ಮುಕ್ತವಾಗಿ ಮಾತನಾಡಿದ್ದಾರೆ. 'ನನಗೆ ನಿವೃತ್ತಿ ವಿಚಾರ ಬುಧವಾರವಷ್ಟೇ ತಿಳಿಯಿತು. ನಿವೃತ್ತಿ ಎನ್ನುವುದು ಅವರ ಸ್ವಂತ ನಿರ್ಧಾರ. ನಾನು ಅವನನ್ನು ತಡೆಯಲು ಬಯಸುವುದಿಲ್ಲ. ಆದರೆ ಅವನು ನಿವೃತ್ತನಾದ ರೀತಿಯನ್ನು ನೋಡಿದರೆ ಅದಕ್ಕೆ ಹಲವು ಕಾರಣಗಳಿರಬಹುದು. ಈ ಕಾರಣಗಳು ಅವನಿಗೆ ಮಾತ್ರ ಗೊತ್ತು. ಭಾರತ ತಂಡದಲ್ಲಿ ಅವನು ಅವಮಾನಗಳನ್ನು ಎದುರಿಸಿದ್ದಾನೆ. ತಂಡದಲ್ಲಿ ಆತನಿಗೆ ಆಗುತ್ತಿದ್ದ ಅವಮಾನವೂ ನಿವೃತ್ತಿ ಘೋಷನೆ ಮಾಡಲು ಕಾರಣವಾಗಿರಬಹುದು.

Has Ravichandran Ashwin Concealed the Secret Behind His Retirement

ಅಶ್ವಿನ್ ನಿವೃತ್ತಿ ನಮಗೆ ಭಾವನಾತ್ಮಕ ಕ್ಷಣವಾಗಿದೆ. ಏಕೆಂದರೆ ಅವರು ಸತತ 14 ರಿಂದ 15 ವರ್ಷಗಳ ಕಾಲ ಭಾರತ ತಂಡದಲ್ಲಿ ಆಡಿದರು. ಹೀಗಾಗಿ ಅವರು ದಿಢೀರ್ ನಿವೃತ್ತಿ ನಿರ್ಧಾರ ನಮಗೆ ಅಚ್ಚರಿ ತಂದಿದೆ. ಆತನನ್ನು ತಂಡದಲ್ಲಿ ನಿರಂತರವಾಗಿ ಅವಮಾನಿಸಲಾಗುತ್ತಿತ್ತು ಎಂದು ನಾವು ತಿಳಿದುಕೊಂಡಿದ್ದೇವೆ. ಅದರಿಂದ ಇದನ್ನೆಲ್ಲಾ ಇನ್ನೆಷ್ಟು ದಿನಗಳ ಕಾಲ ಸಹಿಸಿಕೊಳ್ಳಲು ಸಾಧ್ಯ ಹೇಳಿ? ಈ ಕಾರಣದಿಂದಾಗಿ ಅಶ್ವಿನ್ ನಿವೃತ್ತಿ ನಿರ್ಧಾರವನ್ನು ಘೋಷಣೆ ಮಾಡಿರಬಹುದು ಎಂದು ಅಶ್ವಿನ್ ತಂದೆ ಹೇಳಿದ್ದರು. ಈ ಹೇಳಿಕೆ ಸಂಬಂಧ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಪ್ರಕ್ರಿಯೆಸಿದ್ದಾರೆ.

ಅಶ್ವಿನ್ ಪೋಸ್ಟ್

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಶ್ವಿನ್ ತಮ್ಮ ತಂದೆಯ ಹೇಳಿಕೆಯನ್ನು ಹಾಸ್ಯಮಯವಾಗಿ ತಿರಸ್ಕರಿಸಿದ್ದಾರೆ. 'ಅವರು ಮಾಧ್ಯಮ ಸ್ನೇಹಿಯಲ್ಲ, ಅವರನ್ನು ಬಿಟ್ಟುಬಿಡಿ. ಅಪ್ಪನ ಹೇಳಿಕೆಯನ್ನು ಮಾಧ್ಯಮಗಳು ಇಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ. ಎಲ್ಲರೂ ಅವನನ್ನು ಬಿಟ್ಟು ಬಿಡಿ ಮತ್ತು ಕ್ಷಮಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಅಶ್ವಿನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನಂತರ ಅಶ್ವಿನ್ ನಿವೃತ್ತಿ ಬಗ್ಗೆ ಮತ್ತಷ್ಟು ಚರ್ಚೆಗಳು ಜೀವ ಪಡೆದುಕೊಂಡಿವೆ.

ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ಪರ್ತ್ ಟೆಸ್ಟ್ ನಂತರವೇ ತಂಡದ ಆಟಗಾರರು ಮತ್ತು ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಅಶ್ವಿನ್ ಅವರ ತಂದೆಯ ಹೇಳಿಕೆ ಬಳಿಕ ನಿವೃತ್ತಿ ವಿಚಾರ ಎಲ್ಲೆಡೆ ಮಹತ್ವ ಪಡೆದುಕೊಂಡಿದೆ. ಅಶ್ವಿನ್ ಅವರು ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್-1 ಬೌಲರ್‌ ಆಗಿದ್ದರೂ, ಅವರಿಗೆ ಸಿಗಬೇಕಾದ ಗೌರವ ನಿವೃತ್ತಿ ಸಮಯದಲ್ಲಿ ಸಿಗಲಿಲ್ಲ. ಭಾರತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಬೇಕಾದರೆ ಅಶ್ವಿನ್ ಕೊಡುಗೆ ಹೆಚ್ಚಿದೆ. ಆದರೆ ಕೊನೆಯ ಫೈನಲ್ ಪಂದ್ಯದಲ್ಲಿ ಅಶ್ವಿನ್‌ ಅವರಿಗೆ ಆಡುವ ಅವಕಾಶವೇ ಸಿಕ್ಕಿರಲಿಲ್ಲ.

Story first published: Friday, December 20, 2024, 14:09 [IST]
Other articles published on Dec 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+