For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಬ್ಯಾಟರ್‌ಗಳಿಗೆ ಕಾಟ ನೀಡಿದ ಹಸನ್‌ ಮಹಮೂದ್ ಯಾರು?

ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್‌ ಚೆನ್ನೈನಲ್ಲಿ ನಡೆಯುತ್ತಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ತಂಡದ ಪರ 24 ವರ್ಷದ ಯುವ ವೇಗದ ಬೌಲರ್‌ ಕಾರುವಕ್‌ ದಾಳಿ ನಡೆಸಿ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಹಾಗಿದ್ದರೆ, ಎಂಎ ಚಿದಂಬರಂ ಪಿಚ್‌ನಲ್ಲಿ ಅಬ್ಬರಿಸಿದ ಬಾಂಗ್ಲಾದೇಶದ ಆ ಬೌಲರ್‌ ಯಾರು ಎಂಬ ಹುಡುಕಾಟ ಜೋರಾಗಿದೆ.

ಸಖತ್ ಬೌಲಿಂಗ್ ಲೈನ್‌ ಅಪ್‌, ಉತ್ತಮ ಪೇಸ್‌, ಬೌಲಿಂಗ್‌ನಲ್ಲಿ ವೇರಿಯೆಷನ್ಸ್‌ ಮೂಲಕ ಈಗಾಗಲೇ ಪಾಕ್‌ ಪ್ರವಾಸದಲ್ಲಿ ಹೆಸರು ಮಾಡಿದ್ದ ಯುವ ವೇಗಿ ಹಸನ ಮಹಮೂದ್‌. ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಳಸಿಕೊಂಡು ಬಾಂಗ್ಲಾ ತಂಡಕ್ಕೆ ಆಧಾರವಾಗಿರುವ ಬೌಲರ್‌. ಬಾಂಗ್ಲಾದೇಶ ಉತ್ತಮ ಸ್ಪಿನ್ ಬೌಲರ್‌ಗಳನ್ನು ಹೊಂದಿದೆ ಎಂಬ ಮಾತಿತ್ತು. ಆದರೆ ಈಗ ವೇಗದ ಬೌಲರ್‌ಗಳನ್ನು ಹೊಂದಿದೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಹಸನ್‌ ಮಹಮೂದ್‌.

Hasan Mahmud Stuns Indian Batting Line-Up with 5-Wicket Haul in Chennai Test

ಹಸನ್‌ ಮಹಮೂದ್‌ ಯಾರು?

ಹಸನ್ ಮಹಮೂದ್ ಬಾಂಗ್ಲಾದೇಶದ ತಂಡದ ಪರ ಮೂರು ಸ್ವರೂಪಗಳನ್ನು ಆಡುವ ಬೌಲರ್. ಅವರು 2020 ರಲ್ಲಿ T20 ಪಂದ್ಯದ ಮೂಲಕ ಬಾಂಗ್ಲಾದೇಶ ತಂಡ ಸೇರಿದರು. ಒಂದೇ ವರ್ಷದಲ್ಲಿ ಇವರ ಕ್ಷಮತೆಯನ್ನು ಮನಗೊಂಡು ಬಾಂಗ್ಲಾ ಏಕದಿನ ಕ್ರಿಕೆಟ್‌ಗೆ ಅವಕಾಶ ನೀಡಿತು. ಸೀಮಿತ ಓವರ್‌ಗಳಲ್ಲಿ ಇವರು ಸಾಧಿಸಿರುವ ಸ್ಥಿರತೆಯನ್ನು ಕಂಡು ಬಾಂಗ್ಲಾದೇಶ ಕ್ರಿಕೆಟ್‌ ತಂಡ ಟೆಸ್ಟ್‌ ಆಡಲು ಅವಕಾಶ ನೀಡಿತು.

ಮಹಮೂದ್ ಏಪ್ರಿಲ್ 2024 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಆಡಿದರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ಇವರಿಗೆ ಪಾಕ್‌ ಪ್ರವಾಸಿದಲ್ಲಿ ಆಡುವ ಅವಕಾಶ ಸಿಕ್ಕಿತು. ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌, ಹಸನ್‌ ಮಹಮೂದ್‌ ಅವರ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದ ನಾಲ್ಕನೇ ಪಂದ್ಯ.

ಚೆನ್ನೈನಲ್ಲಿ ಐದು ವಿಕೆಟ್ ಸಂಭ್ರಮ

ಚೆನ್ನೈ ಟೆಸ್ಟ್‌ನಲ್ಲಿ ಮೊದಲ ದಿನ ಭಾರತದ ಅಗ್ರ ಕ್ರಮಾಂಕವನ್ನು ಏಕಾಂಗಿಯಾಗಿ ಕಾಡಿದ ಬೌಲರ್‌ ಹಸನ್ ಮಹಮೂದ್. ಎರಡನೇ ದಿನ ಬುಮ್ರಾ ರೂಪದಲ್ಲಿ 5ನೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಯುವ ವೇಗದ ಬೌಲರ್ ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದರು.

Hasan Mahmud Stuns Indian Batting Line-Up with 5-Wicket Haul in Chennai Test

ಮೊದಲ ದಿನ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರನ್ನು ಪೆವಿಲಿಯನ್‌ಗೆ ಹಸನ್‌ ಮಹಮೂದ್ ಅಟ್ಟಿದ್ದರು. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಬಾರಿ ಐದಕ್ಕೂ ಹೆಚ್ಚು ವಿಕೆಟ್‌ ಪಡೆದರು. ಭಾರತದಲ್ಲಿ ಐದು ವಿಕೆಟ್‌ ಪಡೆದ ಬಾಂಗ್ಲಾದ ಮೊದಲ ವೇಗದ ಬೌಲರ್‌ ಎಂಬ ಹೆಗ್ಗಳಿಕೆಗೆ ಹಸನ್ ಪಾತ್ರರಾಗಿದ್ದಾರೆ.

ಇನ್ನು ಭಾರತದ ವಿರುದ್ಧ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದ ಬಾಂಗ್ಲಾದ ಐದನೇ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ನೈಮುರ್ ರೆಹಮಾನ್, ಶಾಕಿಬ್ ಅಲ್ ಹಸನ್, ಮೆಹದಿ ಹಸನ್ ಮಿರಾಜ್, ಶಹದತ್ ಹುಸೇನ್ ಈ ಸಾಧನೆ ಮಾಡಿದ್ದರು.

Story first published: Friday, September 20, 2024, 13:09 [IST]
Other articles published on Sep 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+