For Quick Alerts
ALLOW NOTIFICATIONS  
For Daily Alerts
 

ಸರಣಿ ಜಯದ ಜೊತೆಗೆ ಕೊಹ್ಲಿ ದಾಖಲೆ ಮುರಿದ ಆಮ್ಲಾ

By Mahesh

ಮುಂಬೈ, ಅ.25: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಐದನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟ್ಸ್ ಮನ್ ಆಮ್ಲಾ ಅವರು ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡರೂ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ ಮನ್ ಹಶೀಂ ಅಮ್ಲಾ ಅವರು ಏಕದಿನ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 6,000ರನ್ ಪೂರೈಸಿದ್ದಾರೆ. ವಿರಾಟ್ ಕೊಹ್ಲಿ ಅವರು ವೈಯಕ್ತಿಕವಾಗಿ 6,000 ರನ್ ಗಡಿ ದಾಟಲು 136 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಆಮ್ಲಾ ಅವರು 123 ಇನ್ನಿಂಗ್ಸ್ ನಲ್ಲೇ ಈ ಮೈಲಿಗಲ್ಲು ದಾಟಿದ್ದಾರೆ. [ಟೀಂ ಇಂಡಿಯಾ ಬಗ್ಗುಬಡಿದು ಸರಣಿ ಬಾಚಿಕೊಂಡ ಎಬಿಡಿ]

Hashim Amla gets 6000 runs in ODIs

ಐದನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಆಟಗಾರರು ಶತಕ ಸಿಡಿಸಿದರೆ, ಆಮ್ಲಾ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿ 13 ಎಸೆತಗಳಲ್ಲಿ 23ರನ್ ಮಾತ್ರ ಗಳಿಸಿದರು. ಆದರೆ, ವಾಂಖೆಡೆ ಸ್ಟೇಡಿಯಂನಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಆಮ್ಲಾ ಹೊಸ ದಾಖಲೆ ಬರೆದರು.

ವಿರಾಟ್ ಕೊಹ್ಲಿ ಹಾಗೂ ವಿವಿಯನ್ ರಿಚರ್ಡ್ಸ್ ಅವರ ಹೆಸರಿನಲ್ಲಿದ್ದ ತ್ವರಿತಗತಿಯಲ್ಲಿ 5,000ರನ್ ಗಳಿಕೆ ದಾಖಲೆಯನ್ನು ಕಳೆದ ಜನವರಿ ತಿಂಗಳಿನಲ್ಲಿ ಹಶೀಂ ಆಮ್ಲಾ ಅವರು ಮುರಿದಿದ್ದರು. 104 ಪಂದ್ಯ 101 ಇನ್ನಿಂಗ್ಸ್ ನಲ್ಲೇ 5,000ರನ್ ಗಳಿಸಿದ್ದರು. ಕೊಹ್ಲಿ ಹಾಗೂ ರಿಚರ್ಡ್ಸ್ ತಲಾ 114 ಇನ್ನಿಂಗ್ಸ್ ನಲ್ಲಿ ಈ ಗಡಿ ದಾಟಿದ್ದರು. [ಸೌರವ್ ಗಂಗೂಲಿ ದಾಖಲೆ ಧ್ವಂಸ ಮಾಡಿದ ಕೊಹ್ಲಿ]

ನಂತರ ಮಾರ್ಚ್ 3ರಂದು 32 ವರ್ಷ ವಯಸ್ಸಿನ ಆಮ್ಲಾ ಅವರು 20ನೇ ಶತಕ ಸಿಡಿಸಿದರು (159 ರನ್ ವೈಯಕ್ತಿಕ ಗರಿಷ್ಠ ಮೊತ್ತ ಕೂಡ) ಈ ಮೂಲಕ ತ್ವರಿತ ಗತಿಯಲ್ಲಿ 20ನೇ ಶತಕ ಸಿಡಿಸಿದ್ದ ಕೊಹ್ಲಿ ಅವರನ್ನು ಸರಿಗಟ್ಟಿದ್ದರು.

ತ್ವರಿತವಾಗಿ 6,000ರನ್ ಗಳಿಸಿದ ಆಟಗಾರರು
* ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ) 123 ಇನ್ನಿಂಗ್ಸ್
* ವಿರಾಟ್ ಕೊಹ್ಲಿ (ಭಾರತ) 136 ಇನ್ನಿಂಗ್ಸ್
* ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) 141 ಇನ್ನಿಂಗ್ಸ್
* ಸೌರವ್ ಗಂಗೂಲಿ (ಭಾರತ) 147 ಇನ್ನಿಂಗ್ಸ್
* ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) 147 ಇನ್ನಿಂಗ್ಸ್
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+