
ಸೌಂಥಾಪ್ಟನ್, ಜೂ.19: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶೀಂ ಆಮ್ಲಾ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಒಡಿಐನಲ್ಲಿ ಅತ್ಯಂತ ವೇಗವಾಗಿ 8,000 ರನ್ ಪೂರೈಸಿದ ಸಾಧನೆ ಮಾಡಿದ ಎರಡನೇ ಆಟಗಾರನಾಗಿ ಕೊಹ್ಲಿ ನಂತರದ ಸ್ಥಾನದಲ್ಲಿ ನಿಂತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಬುಧವಾರ(ಜೂನ್ 19)ದಂದು ನಡೆದಿರುವ ಕ್ರಿಕೆಟ್ ವಿಶ್ವಕಪ್ 2019 ಲೀಗ್ ಪಂದ್ಯದ ವೇಳೆ ಆಮ್ಲಾ ಸಾಧನೆ ಮಾಡಿದ್ದಾರೆ. ತಮ್ಮ ಒಡಿಐ ವೃತ್ತಿ ಬದುಕಿನ 176ನೇ ಇನ್ನಿಂಗ್ಸ್ ನಲ್ಲಿ 38ನೇ ಅರ್ಧಶತಕ ಪೂರೈಸಿದ ಆಮ್ಲಾ 8,000 ರನ್ ಗಡಿ ದಾಟಿದರು.
ಈ ಪಂದ್ಯಕ್ಕೂ ಮುನ್ನ 7,976 ರನ್ ಗಳಿಸಿದ್ದರು. 83 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 55 ರನ್ ಗಳಿಸಿದ್ದ ಆಮ್ಲಾ, ಸ್ಪಿನ್ನರ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.
ತ್ವರಿತಗತಿಯಲ್ಲಿ 8 ಸಾವಿರ ರನ್ ಗಳಿಸಿದ ದಾಖಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 175 ಇನಿಂಗ್ಸ್‌ಗಳಲ್ಲಿ 8 ಸಾವಿರ ರನ್ ಪೂರೈಸಿ, ಅಗ್ರಸ್ಥಾನದಲ್ಲಿದ್ದಾರೆ.
ಕಡಿಮೆ ಇನಿಂಗ್ಸ್‌ಗಳಲ್ಲಿ 8,000 ರನ್ ಪೂರೈಸಿದ ಆಟಗಾರರು
183 ಪಂದ್ಯ- 175 ಇನ್ನಿಂಗ್ಸ್- ವಿರಾಟ್ ಕೊಹ್ಲಿ (ಭಾರತ)
179 ಪಂದ್ಯ-176ಇನ್ನಿಂಗ್ಸ್-ಹಾಶಿಮ್ ಅಮ್ಲ (ದಕ್ಷಿಣ ಆಫ್ರಿಕಾ)
190 ಪಂದ್ಯ-182 ಇನ್ನಿಂಗ್ಸ್-ಎಬಿ ಡಿವಿಲಿಯರ್ಸ್(ದಕ್ಷಿಣ ಆಫ್ರಿಕಾ)
208 ಪಂದ್ಯ -200 ಇನ್ನಿಂಗ್ಸ್-ಸೌರವ್ ಗಂಗೂಲಿ (ಭಾರತ)
206 ಪಂದ್ಯ-200 ಇನ್ನಿಂಗ್ಸ್-ರೋಹಿತ್ ಶರ್ಮಾ (ಭಾರತ)
ರನ್ ಮಷಿನ್ ಗಳಂತೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತ್ವರಿತ ಗತಿಯಲ್ಲಿ ರನ್ ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಹಾಗೂ ನಂತರ ದಕ್ಷಿಣ ಆಫ್ರಿಕಾದ ಹಶೀಂ ಅಮ್ಲಾ ಕಂಡು ಬರುತ್ತಾರೆ. ಕೊಹ್ಲಿ ದಾಖಲೆಗಳನ್ನು ಆಮ್ಲಾ ಮುರಿಯುತ್ತಾ ಬಂದಿದ್ದಾರೆ. ಆದರೆ, ಕೊಹ್ಲಿ ಮುನ್ನಡೆ ಪಡೆಯುತ್ತಲೆ ಇದ್ದಾರೆ.
* 5000ರನ್ - ಹಶೀಂ ಆಮ್ಲಾ(101)
* 6000ರನ್ -ಹಶೀಮ್ ಆಮ್ಲಾ(123)
* 7000ರನ್ - ಹಶೀಂ ಆಮ್ಲಾ (150ಇನ್ನಿಂಗ್ಸ್)
* 8000ರನ್ - ವಿರಾಟ್ ಕೊಹ್ಲಿ(175)
* 9000ರನ್ -ವಿರಾಟ್ ಕೊಹ್ಲಿ(194)
* 10000ರನ್ - ವಿರಾಟ್ ಕೊಹ್ಲಿ( 205)
* 11000 ರನ್- ವಿರಾಟ್ ಕೊಹ್ಲಿ (222)