ವಿರಾಟ್ ಕೊಹ್ಲಿ ಸ್ಥಾನ ಕಿತ್ತುಕೊಂಡ ಹಶೀಮ್ ಆಮ್ಲಾ
ದುಬೈ, ಫೆ. 2: ಆಟದಲ್ಲಿ ಸ್ಥಿರತೆ ಕಳೆದುಕೊಂಡ ವಿರಾಟ್ ಕೊಹ್ಲಿ ಐಸಿಸಿ ಶ್ರೇಯಾಂಕದ 2 ನೇ ಸ್ಥಾನವನ್ನು ದಕ್ಷಿಣಾ ಆಫ್ರಿಕಾದ ಹಶೀಮ್ ಆಮ್ಲಾ ಅವರಿಗೆ ಬಿಟ್ಟುಕೊಟ್ಟಿದ್ದಾರೆ.
ತ್ರಿಕೋನ ಸರಣಿಯಲ್ಲಿ ಬ್ಯಾಟ್ ನಿಂದ ರನ್ ಹರಿಸಲು ವಿಫಲಾರಾದ ಕೊಹ್ಲಿ 4 ಇನಿಂಗ್ಸ್ ಗಳಿಂದ ಕೇವಲ 24 (9,4,3 ಮತ್ತು 8)ರನ್ ಗಳಿಸಿದ್ದರು. ಅಲ್ಲದೇ ಭಾರತ ಸಹ ಆಸ್ಟ್ರೇಲಿಯಾ ನೆಲದಲ್ಲಿ ಹೀನಾಯ ಸೋಲು ಕಂಡು ಹಿಂದಿರುಗಿತ್ತು.[ವಿಶ್ವಕಪ್: ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ನಂ.1, ಭಾರತ 2]

ಏಕದಿನ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಎಬಿ ಡೆವಿಲಿಯರ್ಸ್ ಮೊದಲ ಸ್ಥಾನ ಅಲಂಕರಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆಮ್ಲಾ ಮತ್ತು ಡೆವಿಲಿಯರ್ಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಶ್ರೇಯಾಂಕ ವೃದ್ಧಿಗೆ ಕಾರಣವಾಯಿತು.
31 ಎಸೆತಗಳಲ್ಲಿ ಏಕದಿನ ಶತಕ ಸಾಧನೆ ಮಾಡಿ ಎಬಿ ಡೆವಿಲಿಯರ್ಸ್ ವಿಶ್ವದಾಖಲೆಯನ್ನು ನಿರ್ಮಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ತಲಾ 2 ಶತಕ ಮತ್ತು ಅರ್ಧಶತಕ ಗಳಿಸಿದ ಆಮ್ಲಾ ಒಟ್ಟು 413 ರನ್ ದಾಖಲಿಸಿ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು.[ಶತಕ ದಾಖಲಿಸಲು ಡೆವಿಲಿಯರ್ಸ್ ಗೆ 31 ಬಾಲ್ ಸಾಕು!]
ಉಳಿದಂತೆ ಭಾರತದ ಶಿಖರ್ ಧವನ್(7), ಎಂಎಸ್ ಧೋನಿ(8) ಅಗ್ರ 10 ರೊಳಗೆ ಸ್ಥಾನ ಕಾಪಾಡಿಕೊಂಡಿದ್ದಾರೆ. ರೋಹಿತ್ ಶರ್ಮಾ 13 ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತದ ಪರ ಭುವನೇಶ್ವರ ಕುಮಾರ್ (13) ಅತ್ಯಧಿಕ ಸ್ಥಾನ ಗಳಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪಾಕಿಸ್ತಾನದ ಸಯೀದ್ ಅಜ್ಮಲ್ ಮೊದಲ ಸ್ಥಾನ ಕಾಪಾಡಿಕೊಂಡಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕ
1. ಎಬಿ ಡೆವಿಲಿಯರ್ಸ್
2. ಹಶಿಮ್ ಆಮ್ಲಾ
3. ವಿರಾಟ್ ಕೊಹ್ಲಿ
4.ಕುಮಾರ್ ಸಂಗಾಕ್ಕಾರ
5.ತಿಲಕರತ್ನೆ ದಿಲ್ಶಾನ್
6. ಕೇನ್ ವಿಲಿಯಮ್ ಸನ್
7. ಶಿಖರ್ ಧವನ್
8. ಎಂಎಸ್ ಧೋನಿ
9. ಕ್ವಿಂಟೋನ್ ಡೀ ಕಾಕ್
10. ಜಾರ್ಜ್ ಬೈಲಿ
ಬೌಲಿಂಗ್ ಶ್ರೇಯಾಂಕ
1. ಸಯೀದ್ ಅಜ್ಮಲ್
2. ಸುನೀಲ್ ನರೇನ್
3. ಡೈಲ್ ಸ್ಟೇನ್
4. ಜೇಮ್ಸ್ ಆಂಡರ್ ಸನ್
5. ಮಿಚೆಲ್ ಜಾನ್ಸನ್
6. ಶಕೀಬ್ ಅಲ್ ಹಸನ್
7. ಮಿಚೆಲ್ ಸ್ಟಾರ್ಕ್
8. ಮೊಹಮದ್ ಹಫೀಜ್
9. ರಂಗಾನಾ ಹೇರಾತ್
10. ಮೊರ್ನೆ ಮೊರ್ಕೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications