Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸದ್ದಿಲ್ಲದೆ ಕೊಹ್ಲಿ ದಾಖಲೆ ಮುರಿದ ಹಶೀಮ್ ಆಮ್ಲಾ

ಕ್ಯಾನ್ ಬೆರಾ, ನ. 20 : ಇತ್ತ ಭಾರತದ ರನ್ ಮಶಿನ್ ವಿರಾಟ್ ಕೊಹ್ಲಿ ಒಂದೊಂದೆ ದಾಖಲೆಗಳನ್ನು ಮುರಿಯುತ್ತ ಮುಂದೆ ಸಾಗುತ್ತಿದ್ದರೆ ಅತ್ತ ದಕ್ಷಿಣ ಆಫ್ರಿಕಾದ ಆರಂಭಿಕ ಹಶೀಮ್ ಆಮ್ಲಾ ಸದ್ದಿಲ್ಲದೆ ಕೊಹ್ಲಿ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಬುಧವಾರ ಕ್ಯಾನ್ ಬೆರಾದಲ್ಲಿ ನಡೆದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಆಮ್ಲಾ ಏಕದಿನ ಕ್ರಿಕೆಟ್ ನ 17 ನೇ ಶತಕ ದಾಖಲಿಸಿದರು. ತಂಡ ಸೋತರೂ ಅತಿ ಕಡಿಮೆ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ ಶ್ರೇಯಕ್ಕೆ ಪಾತ್ರರಾದರು. ಈ ಮೂಲಕ ಇಲ್ಲಿಯವರೆಗೆ ಕೊಹ್ಲಿ ಹೆಸರಲ್ಲಿದ್ದ ದಾಖಲೆ ಆಮ್ಲಾ ಪಾಲಾಯಿತು.[ಕೊಹ್ಲಿ ಬ್ಯಾಟಿಂದ ಹಾರಿದ 'ಮುತ್ತು' ಎಲ್ಲಿ ಹೋಯಿತು?]

31 ವರ್ಷದ ಆಮ್ಲಾ ತಮ್ಮ 98ನೇ ಏಕದಿನ ಇನಿಂಗ್ಸ್ ನಲ್ಲಿ (101 ಪಂದ್ಯ) 17 ಶತಕ ದಾಖಲಿಸಿದರು. ಕೊಹ್ಲಿ 17 ಶತಕ ದಾಖಲಿಸಲು 112 ಇನಿಂಗ್ಸ್ ತೆಗೆದುಕೊಂಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನದಲ್ಲಿ ಆಮ್ಲಾ 102 ರನ್ ಗಳಿಸಿದರು. ಆಸೀಸ್ ನೀಡಿದ್ದ 330 ರನ್ ಮೊತ್ತ ಬೆನ್ನು ಹತ್ತಿದ ಆಫ್ರಿಕಾ 73 ರನ್ ಸೋಲನುಭವಿಸಿತು. 2014 ರಲ್ಲಿ ಇದು ಆಮ್ಲಾ ಬ್ಯಾಟಿಂದ ಸಿಡಿದ ಐದನೇ ಏಕದಿನ ಶತಕ. ಉಳಿದಂತೆ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಅರೋನ್ ಪಿಂಚ್ ತಲಾ 4 ಶತಕ ದಾಖಲಿಸಿದ್ದಾರೆ.[ಐಸಿಸಿ ವಿಶ್ವಕಪ್ ಗೆ ವಿರಾಟ್ ಕೊಹ್ಲಿ ಅಂಬಾಸಿಡರ್]

ಅಲ್ಲದೇ ಕೊಹ್ಲಿ ಮತ್ತು ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಆಮ್ಲಾ ಬೆನ್ನು ಹತ್ತಿದ್ದಾರೆ. ಅತಿ ವೇಗವಾಗಿ 5 ಸಾವಿರ ರನ್ ಗಳಿಸಿದ (114 ಇನಿಂಗ್ಸ್, ವಿರಾಟ್ ಕೊಹ್ಲಿ) ದಾಖಲೆಯನ್ನು ಮುರಿಯಲು ಆಮ್ಲಾ ಕೇವಲ 90 ರನ್ ಹಿಂದಿದ್ದಾರೆ. 90 ರನ್ ಗಳಿಸಲು ಆಮ್ಲಾ ಬಳಿ ಇನ್ನು 15 ಇನಿಂಗ್ಸ್ ಗಳಿವೆ!

kohli

ಅತಿ ವೇಗವಾಗಿ 17 ಶತಕ ದಾಖಲಿಸಿದವರು(ಟಾಪ್ 5)
* 98 ಇನಿಂಗ್ಸ್-ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ)
* 112 ಇನಿಂಗ್ಸ್-ವಿರಾಟ್ ಕೊಹ್ಲಿ (ಭಾರತ)
* 156 ಇನಿಂಗ್ಸ್-ಎಬಿ ಡೆವಿಲಿಯರ್ಸ್ (ದಕ್ಷಿಣ ಆಫ್ರಿಕಾ)
* 170 ಇನಿಂಗ್ಸ್-ಸೌರವ್ ಗಂಗೂಲಿ (ಭಾರತ)
* 177 ಇನಿಂಗ್ಸ್-ಸಯೀದ್ ಅನ್ವರ್ (ಪಾಕಿಸ್ತಾನ)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+