ಐಪಿಎಲ್ 2020: ಐಪಿಎಲ್‌ನಲ್ಲಿ ವೇಗದ ಬೌಲಿಂಗ್ ದಾಖಲೆ ಬಳಿಕ ಅನ್ರಿಕ್ ನೊರ್ಕಿಯಾ ಪ್ರತಿಕ್ರಿಯೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 13 ರನ್‌ಗಳ ರೋಚಕ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಈ ಪಂದ್ಯದಲ್ಲಿ ಡೆಲ್ಲಿ ವೇಗಿ ಅನ್ರಿಕ್ ನೊರ್ಕಿಯಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ದಾಖಲೆಯ ಬಗ್ಗೆ ನಾರ್ಟ್ಜೆ ಪ್ರತಿಕ್ರಿಯಿಸಿದ್ದಾರೆ.
ಗಂಟೆಗೆ 156.2 ಕಿ.ಮೀ ವೇಗದಲ್ಲಿ ಎಸೆದ ಎಸೆತ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆಯನ್ನು ಬರೆಯಲು ಕಾರಣವಾಯಿತು. ವಿಶೇಷವೆಂದರೆ ಪಂದ್ಯ ಮುಕ್ತಾಯಗೊಂಡ ಬಳಿಕವೇ ಈ ದಾಖಲೆ ನೊರ್ಕಿಯಾ ಅರಿವಿಗೆ ಬಂದಿತ್ತು. ಈ ಬಗ್ಗೆ ಸ್ವತಃ ಹೇಳಿಕೊಂಡ ನೊರ್ಕಿಯಾ ಪಂದ್ಯದ ಮುಕ್ತಾಯದ ಬಳಿಕ ಈ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯನ್ನು ನಾನು ಪಂದ್ಯ ಮುಗಿದ ಬಳಿಕ ತಿಳಿದುಕೊಂಡೆ. ಆ ಸಂದರ್ಭದಲ್ಲಿ ಇದು ನನಗೆ ತಿಳಿದಿರಲಿಲ್ಲ. ಆದರೆ ಖಂಡಿಯಾ ನಿಜ, ನಾನು ಬೌಲಿಂಗ್‌ನಲ್ಲಿ ವೇಗವನ್ನು ಪಡೆಯುವ ಸಲುವಾಗಿ ಸಾಕಷ್ಟು ಪರಿಶ್ರಮವನ್ನು ವಹಿಸಿದ್ದೇನೆ. ಆ ಪರಿಶ್ರಮಕ್ಕೆ ಈ ವೇಗ ದೊರೆತಿರುವುದಕ್ಕೆ ಸಂತಸಗೊಂಡಿದ್ದೇನೆ ಎಂದು ನೊರ್ಕಿಯಾ ಪ್ರತಿಕ್ರಿಯಿಸಿದ್ದಾರೆ.
"ಬೌಲಿಂಗ್‌ನಲ್ಲಿ ವೇಗವನ್ನು ಪಡೆದುಕೊಂಡರೂ ನಿಮ್ಮ ಚೆಂಡಿನ ಲ್ಯಾಂಡಿಂಗ್ ಉತ್ತಮವಾಗಿರಬೇಕು. ಅದು ಬಹಳ ಮುಖ್ಯವಾಗಿರುವ ಸಂಗತಿ. ಅದರ ಮೇಲೆ ಇನ್ನೂ ಕೆಲಸ ಮಾಡಬೇಕಿದೆ ಎಂದು ನೊರ್ಕಿಯಾ ತಮ್ಮ ವಿಶೇಷ ದಾಖಲೆಯ ಬಳಿಕ ಮಾತನಾಡುತ್ತಾ ಹೇಳಿಕೆಯನ್ನು ನೀಡಿದ್ದಾರೆ.
ಅನ್ರಿಕ್ ನೊರ್ಕಿಯಾ ತನ್ನ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ವೇಗದ ಬೌಲಿಂಗ್ ದಾಖಲೆ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಓಪನರ್ ಜೋಸ್ ಬಟ್ಲರ್‌ನನ್ನು ತನ್ನ ಖಡಕ್ ಯಾರ್ಕರ್ ಮೂಲಕ ಔಟ್ ಮಾಡಿದ್ದಲ್ಲದೆ ನಿರ್ಣಾಯಕ ಹಂತದಲ್ಲಿ ರಾಬಿನ್ ಉತ್ತಪ್ಪ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ತಂಡಕ್ಕೆ ಯಶಸ್ಸು ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications