Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಟಿಂಗ್ ಆರ್ಡರ್ 6ರ ಬಗ್ಗೆ ತುಟಿ ಬಿಚ್ಚಿದ ಕನ್ನಡಿಗ ಮನೀಶ್ ಪಾಂಡೆ

‘Have no choice’: Manish Pandey on batting at No.6 in New Zealand T20Is

ಬೆಂಗಳೂರು, ಫೆಬ್ರವರಿ 1: ಶುಕ್ರವಾರ (ಜನವರಿ 31) ನಡೆದ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20ಯ ಸೂಪರ್ ಓವರ್‌ ನಲ್ಲಿ ಭಾರತ ಜಯಿಸಿದ್ದರಿಂದ ಶಾರ್ದೂಲ್ ಠಾಕೂರ್, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಕೂಡ ಹೈಲೈಟ್ ಆಗಿದ್ದರು. ವೇಗಿ ಠಾಕೂರ್ ಡೆತ್ ಓವರ್‌ನಲ್ಲಿ ಪಂದ್ಯವನ್ನು ಸಮಬಲ ಗೊಳಿಸಲು ಕಾರಣರಾದರೆ, ಸೂಪರ್ ಓವರ್‌ನ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ 5 ಎಸೆತಗಳಿಗೆ 14 ರನ್ ಚಚ್ಚಿ ತಂಡಕ್ಕೆ ಗೆಲುವು ನೀಡಿದ್ದರು.

ಆದರೆ ಇಡೀ ಪಂದ್ಯ ರೋಚಕ ಹಂತಕ್ಕೆ ತಲುಪುವಲ್ಲಿ ಮನೀಶ್ ಪಾಂಡೆಯ ಕೊಡುಗೆಯೂ ಮಹತ್ವದ್ದಾಗಿತ್ತು. 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದಿದ್ದ ಪಾಂಡೆ 36 ಎಸೆತಗಳಲ್ಲಿ ಅಜೇಯ 50 ರನ್ ಕೊಡುಗೆ ನೀಡಿದ್ದರು. ಹೀಗಾಗಿ ಇನ್ನಿಂಗ್ಸ್‌ ಆರಂಭಿದ್ದ ಭಾರತ 165 ರನ್‌ ಕಲೆ ಹಾಕಿದ್ದರೆ, ನ್ಯೂಜಿಲೆಂಡ್‌ ಕೂಡ 165 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು.

ಪಾಂಡೆಯ 3ನೇ ಟಿ20 ಅರ್ಧ ಶತಕದೊಂದಿಗೆ ಭಾರತ ಪಂದ್ಯವನ್ನು ಮೊದಲು ಟೈ ಮಾಡಿಕೊಂಡರೆ ಆ ಮೇಲೆ ಸೂಪರ್ ಓವರ್‌ ನಡೆದು ಅದರಲ್ಲಿ ಭಾರತ ವಿಜಯಿಯಾಗಿ ಹೊರಹೊಮ್ಮಿತ್ತು.

ಪಾಂಡೆಗೆ 6ನೇ ಬ್ಯಾಟಿಂಗ್ ಕ್ರಮಾಂಕ

ಪಾಂಡೆಗೆ 6ನೇ ಬ್ಯಾಟಿಂಗ್ ಕ್ರಮಾಂಕ

ಭಾರತ 'ಎ' ಪರ ಟಾಪ್ ಬ್ಯಾಟಿಂಗ್ ಆರ್ಡರ್‌ನಲ್ಲಿ ಬರುವ ಮನೀಶ್ ಪಾಂಡೆ, ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಶುಕ್ರವಾರದ ಪಂದ್ಯದಲ್ಲಿ 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದರು. ಪಾಂಡೆಗೂ ಮುನ್ನ ಆಲ್ ರೌಂಡರ್ ಶಿವಂ ದೂಬೆ 5ನೇ ಕ್ರಮಾಂಕದಲ್ಲಿ ಬಂದು 9 ಎಸೆತಗಳಿಗೆ ಕೇವಲ 12 ರನ್ ಬಾರಿಸಿ ಔಟ್ ಆಗಿದ್ದರು.

ಮೊದಲೇ ಬಂದಿದ್ದರೆ ರನ್‌ ಹೆಚ್ಚುತ್ತಿತ್ತಾ?

ಮೊದಲೇ ಬಂದಿದ್ದರೆ ರನ್‌ ಹೆಚ್ಚುತ್ತಿತ್ತಾ?

ವೆಲ್ಲಿಂಗ್ಟನ್‌ನ ವೆಸ್ಟ್‌ಪ್ಯಾಕ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಒಂದು ವೇಳೆ ಪಾಂಡೆ ಇನ್ನೂ ಮೊದಲ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಬಂದಿದ್ದರೆ ತಂಡದ ಮೊತ್ತ ಹೆಚ್ಚುವ ಸಾಧ್ಯತೆಯಿತ್ತು. ಮನೀಶ್‌ ಪಾಂಡೆಗೆ 6ರ ಬದಲು ಇನ್ನೂ ಕೊಂಚ ಉತ್ತಮ ಬ್ಯಾಟಿಂಗ್‌ ಆರ್ಡರ್‌ ನೀಡಬೇಕು ಅನ್ನೋದು ಕೆಲ ಕ್ರಿಕೆಟ್‌ ಪ್ರೇಮಿಗಳ ವಾದ. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪಾಂಡೆ ಉತ್ತರಿಸಿದ್ದಾರೆ.

ನನಗೆ ಬೇರೆ ಆಯ್ಕೆಗಳಿಲ್ಲ

ನನಗೆ ಬೇರೆ ಆಯ್ಕೆಗಳಿಲ್ಲ

ತಾನು 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವ ಬಗ್ಗೆ ಪ್ರತಿಕ್ರಿಯಿಸಿರುವ ಪಾಂಡೆ, 'ನನಗೆ ಬೇರೆ ಆಯ್ಕೆಗಳಿಲ್ಲ. ಆದರೆ ಆ ಕ್ರಮಾಂಕವೂ ನನಗೆ ಖುಷಿಯೆ. ಸಾಮಾನ್ಯವಾಗಿ ನಾನು ಟಾಪ್‌ ಆರ್ಡರ್‌ನಲ್ಲಿ ಅಂದರೆ 3 ಅಥವಾ 4ರಲ್ಲಿ ಆಡುವುದರಿಂದ ಇಲ್ಲಿ 6ನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಮನಸ್ಸನ್ನು ತಯಾರುಗೊಳಿಸಿಕೊಳ್ಳಬೇಕಿದೆ,' ಎಂದರು.

ಟಾಪ್‌ ಆರ್ಡರ್‌ಗೆ ಭಾರೀ ಪೈಪೋಟಿ

ಟಾಪ್‌ ಆರ್ಡರ್‌ಗೆ ಭಾರೀ ಪೈಪೋಟಿ

ಮಾತು ಮುಂದುವರೆಸಿದ ಪಾಂಡೆ, 'ಟೀಮ್ ಇಂಡಿಯಾದಲ್ಲಿ ಟಾಪ್ ಬ್ಯಾಟಿಂಗ್‌ ಆರ್ಡರ್‌ಗೆ ತುಂಬಾ ಪೈಪೋಟಿಯಿದೆ. ಆದರೆ ನಿಮ್ಮ ಅವಕಾಶಕ್ಕೆ ನೀವು ಕಾಯಬೇಕಾಗುತ್ತದೆ,' ಎಂದು ಪ್ರತಿಕ್ರಿಯಿಸಿದರು. ಒಟ್ಟಿನಲ್ಲಿ 4ನೇ ಪಂದ್ಯದಲ್ಲಿ ಪಾಂಡೆ, ತಂಡ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾರ್ದೂಲ್ ಠಾಕೂರ್‌ರೊಂದಿಗೆ 47 ರನ್ ಜೊತೆಯಾಟವೂ ನೀಡಿದ್ದ ಪಾಂಡೆ ಸುಲಭವಾಗಿ ಸೋಲಬೇಕಿದ್ದ ಪಂದ್ಯದಲ್ಲಿ ತಂಡವನ್ನು ಕಾಪಾಡಿದ್ದರು.

Story first published: Saturday, February 1, 2020, 17:27 [IST]
Other articles published on Feb 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+