For Quick Alerts
ALLOW NOTIFICATIONS  
For Daily Alerts
 

ಯಾರಿಗೂ ಏನನ್ನೂ ಸಾಬೀತುಪಡಿಸಲಿಕ್ಕಿಲ್ಲ, ಈಗ ಆಟವನ್ನು ಆನಂದಿಸುವ ಸಮಯ: ಹರ್ಭಜನ್ ಸಿಂಗ್

Have nothing to prove to anyone, its time to enjoy out there: Harbhajan singh

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಹರ್ಭಜನ್ ಸಿಂಗ್ ಈ ಬಾರಿಯ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿಯ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿದ್ದರೂ ಅಂತಿಮ ಕ್ಷಣದಲ್ಲಿ ಆಡುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಆದರೆ ಈ ಬಾರಿ ಮತ್ತೆ ಅಂಗಳಕ್ಕೆ ಇಳಿಯಲು ಸಜ್ಜಾಗಿರುವ 40ರ ಹರೆಯದ ಭಜ್ಜಿ ಕ್ರಿಕೆಟ್‌ನ ಪ್ರತಿ ಕ್ಷಣವನ್ನು ಆನಂದಿಸಲು ಬಯಸುವುದಾಗಿ ಹೇಳಿದ್ದಾರೆ.

"ಬಹಳಷ್ಟು ಜನರು ಈತ ಯಾಕೆ ಇನ್ನೂ ಆಡುತ್ತಿದ್ದಾರೆ ಎಂದು ಕೇಳುತ್ತಾರೆ. ಅದು ಅವರ ಅಭಿಪ್ರಾಯ. ಆದರೆ ನಾನು ನನ್ನನ್ನು ಎಲ್ಲಿ ನೋಡಲು ಬಯಸುತ್ತೇನೆ, ನಾನು ಮೈದಾನಕ್ಕೆ ಇಳಿದು ಆಡುವುದನ್ನು ಬಯಸುತ್ತೇನೆ ಹಾಗೂ ನಾನು ಆಡುತ್ತೇನೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

"ನಾನು ಈಗ ಯಾರಿಗೂ ಏನನ್ನೂ ಸಾಬೀತುಪಡಿಸುವ ಅವಶ್ಯಕತೆಯಿಲ್ಲ. ನನ್ನ ಉದ್ದೇಶ ಅತ್ಯುತ್ತವಾಗಿ ಕ್ರಿಕೆಟ್ ಆಡುವುದು. ನನ್ನ ಕರ್ತವ್ಯವನ್ನು ಪೂರೈಸುತ್ತಾ ಆನಂದಿಸುತ್ತಾ ಕ್ರಿಕೆಟ್ ಆಡುವುದು ನನಗೆ ತೃಪ್ತಿಯನ್ನು ನೀಡುತ್ತದೆ" ಎಂದು ಹರ್ಭಜನ್ ಸಿಂಗ್ ತಮ್ಮ ಆಟದ ಬಗ್ಗೆ ಮಾತನಾಡಿದರು.

"ಹೌದು ನಾನೀಗ 20ರ ಹರೆಯದ ಯುವಕನಲ್ಲ. ಈ ಹಿಂದೆ ಅಭ್ಯಾಸವನ್ನು ನಡೆಸಿದಂತೆ ಈಗ ನಡೆಸಲು ಸಾಧ್ಯವಿಲ್ಲ. ಆದರೆ 40ರ ಹರೆಯದವನಾಗಿ ನಾನು ಫಿಟ್ ಇದ್ದೇನೆ. ಊ ಹಂತದಲ್ಲಿ ನಾನು ಯಶಸ್ಸು ಕಾಣಲು ಏನು ಸಾಧ್ಯವಿದೆ ಆ ಪ್ರಯತ್ನವನ್ನು ಮಾಡುತ್ತೇನೆ" ಎಂದಿದ್ದಾರೆ ಹರ್ಭಜನ್ ಸಿಂಗ್.

ಹರ್ಭಜನ್ ಆರಂಭಿಕ ಆವೃತ್ತಿಯ ಐಪಿಎಲ್‌ನಿಂದಲೂ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಆದರೆ 2018 ಆವೃತ್ತಿಗೂ ಮುನ್ನ ನಡೆಸ ಹರಾಜಿನಲ್ಲಿ ಭಜ್ಜಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು. ಆದರೆ ಈ ಹಿಂದಿನ ಆವೃತ್ತಿಯಿಂದ ಭಜ್ಜಿ ಕೌಟುಂಬಿಕ ಕಾರಣಗಳನ್ನು ನೀಡಿ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಈಗ ಮತ್ತೊಂದು ಐಪಿಎಲ್‌ಗೆ ಹರ್ಭಭಜನ್ ಸಜ್ಜಾಗಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

Story first published: Wednesday, March 31, 2021, 21:32 [IST]
Other articles published on Mar 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+