ಕೋಚ್‌ಗಳು ನನ್ನ ಮೇಲೆ ವರ್ಣಭೇದದ ಕಾಮೆಂಟ್ಸ್ ಮಾಡಿದ್ದರು: ಕಾರ್ಬೆರಿ

ಲಂಡನ್, ಜೂನ್ 11: ಇಂಗ್ಲೆಂಡ್‌ನ ಕೌಂಟಿ ಟೀಮ್‌ಗಳಲ್ಲಿ ಆಡುತ್ತಿದ್ದಾಗ ತನ್ನ ಮೇಲೆ ಅಲ್ಲಿನ ಕೋಚ್‌ಗಳು ವರ್ಣಭೇದ ನೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದರು ಎಂದು ಇಂಗ್ಲೆಂಡ್ ಕ್ರಿಕೆಟರ್ ಮೈಕೆಲ್ ಕಾರ್ಬೆರಿ ಆರೋಪಿಸಿದ್ದಾರೆ. ತನ್ನನ್ನು ತಂಡದಲ್ಲಿ ಕಡೆಗಣಿಸಲಾಗುತ್ತಿತ್ತು ಎಂದೂ ಕಾರ್ಬೆರಿ ಹೇಳಿದ್ದಾರೆ.
2010ರಿಂದ 2014ರ ವರೆಗೆ ಇಂಗ್ಲೆಂಡ್ ತಂಡದ ಪರ 6 ಟೆಸ್ಟ್, 6 ಏಕದಿನ ಪಂದ್ಯಗಳನ್ನಾಡಿರುವ ಮೈಕೆಲ್ ಕಾರ್ಬೆರಿ, ತಾನು ಕಪ್ಪು ಬಣ್ಣದವನಾಗಿದ್ದರಿಂದ ಕೋಚ್‌ಗಳು ತನ್ನ ಮೇಲೆ ವರ್ಣಭೇದ ನೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದರು ಎಂದಿದ್ದಾರೆ.
'ನನ್ನ ಚರ್ಮದ ಬಣ್ಣ ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದೆ ಎಂದು ನಾನು ಭಾವಿಸುವುದಿಲ್ಲ. ತರಬೇತುದಾರರಿಂದ ನಾನು ಜನಾಂಗೀಯ ಕಾಮೆಂಟ್‌ಗಳನ್ನು ಅನುಭವಿಸಿದ್ದೇನೆ. ರಾಷ್ಟ್ರೀಯ ಸರಾಸರಿಯಲ್ಲಿ ನಾನು ದೇಶದ ಬೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದರೂ ನನ್ನನ್ನು ತಂಡದಲ್ಲಿ ಕಡೆಗಣಿಸಲಾಗುತ್ತಿತ್ತು,' ಎಂದು ಕಾರ್ಬೆರಿ ಹೇಳಿದ್ದಾರೆ.
ಡೈಲಿ ಮೇಲ್ ಜೊತೆ ಮಾತನಾಡಿದ ಕಾರ್ಬೆರಿ, 'ವರ್ಣಭೇದ ನೀತಿ ಭಯಾನಕವಾದುದು. ಅದು ಈಗಲೂ ಚಾಲ್ತಿಯಲ್ಲಿದೆ. ಏಕೆಂದರೆ ನೀವು ಅಲ್ಲಿ ಕಪ್ಪು ಮನುಷ್ಯನಾಗಿ ಕಾಲಿಟ್ಟಾಗ, ಒಬ್ಬಂಟಿಗನಾಗಿ ಇದ್ದಾಗ ನಿಮ್ಮ ವಿರುದ್ಧ ವರ್ಣಭೇದ ಕಾಮೆಂಟ್‌ಗಳನ್ನು ಮಾಡಲಾಗುತ್ತದೆ. ಜೋಕ್ ಮಾಡಲಾಗುತ್ತದೆ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications