'ಆತನಿಗೋಸ್ಕರ ರಾಜಸ್ಥಾನಕ್ಕೆ ಬೆಂಬಲಿಸಲಾರಂಭಿಸಿದೆ': ಸ್ಮೃತಿ ಮಂಧಾನ

ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕೆಲ ಅನುಭವಿ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಪರದಾಡುತ್ತಿದ್ದಾರೆ. ಆದರೆ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ಆಟಗಾರರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿತ್ತು. ಆಡಿದ್ದರಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಸೋತಿತ್ತು. ಆರ್‌ಆರ್‌ನ ಮೊದಲೆರಡೂ ಗೆಲುವುಗಳಲ್ಲಿ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು.
ಸಂಜು ಸ್ಯಾಮ್ಸನ್‌ಗೋಸ್ಕರಾನೇ ತಾನು ಆರ್‌ಆರ್ ತಂಡವನ್ನು ಬೆಂಬಲಿಸಲಾರಂಭಿಸಿರುವುದಾಗಿ ಭಾರತದ ಆಟಗಾರ್ತಿ ಸ್ಮೃತಿ ಮಂಧಾನ ಹೇಳಿದ್ದಾರೆ. ಆರ್‌ಆರ್ ಪರ ಸಂಜು 74, 85, 8 ರನ್ ಗಳಿಸಿದ್ದಾರೆ. ಆರಂಭಿಕ ಎರಡೂ ಪಂದ್ಯಗಳಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಗೆದ್ದಿದ್ದರು.
'ಯುವ ಆಟಗಾರರು ಬ್ಯಾಟಿಂಗ್ ಮಾಡೋದನ್ನು ನೋಡೋಕೆ ಸ್ಫೂರ್ತಿ ಅನ್ನಿಸುತ್ತದೆ. ಸಂಜು ಸ್ಯಾಮ್ಸನ್ ಬ್ಯಾಟಿಂಗ್ ನೋಡಿ ನಾನು ಆತನ ದೊಡ್ಡ ಅಭಿಮಾನಿ ಆಗಿಬಿಟ್ಟಿದ್ದೇನೆ. ಆತನಿಗೋಸ್ಕರಾನೆ ನಾನು ಆರ್‌ಆರ್‌ಗೆ ಬೆಂಬಲಿಸಲು ಶುರು ಮಾಡಿದ್ದೇನೆ. ಆತನ ಬ್ಯಾಟಿಂಗ್ ಮುಂದಿನ ಹಂತದಲ್ಲಿದೆ. ಆತನಿಂದ ಕಲಿಯುತ್ತಿದ್ದೇನೆ,' ಎಂದು ಇಂಡಿಯಾ ಟುಡೇ ಜೊತೆ ಮಾತನಾಡಿದ ಮಂಧಾನ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications