ಬೆಸ್ಟ್ ಐಪಿಎಲ್ ಕ್ಯಾಪ್ಟನ್ ಹೆಸರಿಸಿದ ಟೀಮ್ ಇಂಡಿಯಾ ಮಾಜಿ ವೇಗಿ ಆಶಿಷ್ ನೆಹ್ರಾ

ಐಪಿಎಲ್ ಬೆಸ್ಟ್ ಕ್ಯಾಪ್ಟನ್ ಯಾರು ಎಂಬ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಆಟಗಾರರು ಮತ್ತು ಮಾಜಿ ಆಟಗಾರರು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಷ್ ನೆಹ್ರಾ ಕೂಡ ತಮ್ಮ ಆಯ್ಕೆಯ ಬೆಸ್ಟ್ ಕ್ಯಾಪ್ಟನ್ ಯಾರೆಂದು ಹೆಸರಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಆಶಿಷ್ ನೆಹ್ರಾ ತನಗೆ ಮಹೇಂದ್ರ ಸಿಂಗ್ ಧೋನಿಯೇ ಬೆಸ್ಟ್ ನಾಯಕ ಎಂದು ಹೇಳಿದ್ದಾರೆ. ನಾನು ಅತಿ ಹೆಚ್ಚು ಪಂದ್ಯಗಳನ್ನಾಡಿದ ನಾಯಕ ಅಂದರೆ ಅದು ಎಂಎಸ್ ಧೋನಿ. ರಾಷ್ಟ್ರೀಯ ತಂಡ ಮತ್ತು ಐಪಿಎಲ್ ಎರಡಲ್ಲೂ ಧೋನಿಯೇ ನನ್ನ ಆಯ್ಕೆ ಎಂದು ಆಶಿಷ್ ನೆಹ್ರಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಆಶಿಷ್ ನೆಹ್ರಾ ರೋಹಿತ್ ಶರ್ಮಾ ಅವರನ್ನೂ ಉಲ್ಲೇಖಿಸಿದ್ದಾರೆ. ರೋಹಿತ್ ಶರ್ಮಾ ಅವರ ಹೆಸರನ್ನು ತೆಗೆದುಕೊಳ್ಳದಿರಲು ಕಾರಣವನ್ನು ನೆಹ್ರಾ ನೀಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾನು ಒಂದೂ ಪಂದ್ಯವನ್ನು ಆಡಿಲ್ಲ ಹೀಗಾಗಿ ರೋಹಿತ್ ಶರ್ಮಾ ಹೆಸರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಟೀಮ್ ಇಂಡಿಯಾದ ಮಾಜಿ ವೇಗಿ.
ನಾಯಕನಾಗಿ ರೋಹಿತ್ ಶರ್ಮಾ ಮತ್ತು ಧೋನಿ ಮಧ್ಯೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಎಂಎಸ್ ಧೋನಿ ನಾಯಕನಾಗಿ ಅತ್ಯುತ್ತಮ ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ. 60.11ರ ಪ್ರತಿಶತದಷ್ಟು ಗೆಲುವಿನ ರೇಟಿಂಗ್ ಪಡೆದುಕೊಂಡಿದ್ದರೆ, ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಪಟ್ಟದಲ್ಲಿ ಕೂರಿಸಿದ್ದಾರೆ. ಹೀಗಾಗಿ ಆಲ್‌ಟೈಮ್ ಗ್ರೇಟೆಸ್ಟ್ ಕ್ಯಾಪ್ಟನ್ ಯಾರು ಎಂಬುದು ಸದ್ಯ ಚರ್ಚೆಯ ವಸ್ತುವಾಗಿದೆ.
ಈ ವಿಚಾರವಾಗಿ ಸ್ಟಾರ್ ಸ್ಪೋರ್ಟ್ಸ್ ಅನೇಕ ಕ್ರಿಕೆಟಿಗರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ತಜ್ಞರು ಇದಕ್ಕೆ ಫಲಿತಾಂಶವನ್ನು ಕೂಡ ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜ್ಯೂರಿಗಳು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಗ್ರೇಟೆಸ್ಟ್ ಆಫ್ ಆಲ್ ಟೈಮ್ ಐಪಿಎಲ್ ಕ್ಯಾಪ್ಟನ್ ಎಂದು ಹೆಸರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications