ವೈಯಕ್ತಿಕ ಗುರಿ ಇಟ್ಟುಕೊಂಡಿಲ್ಲ, ಆದರೆ ನಿಜಕ್ಕೂ ಉತ್ಸುಕನಾಗಿದ್ದೇನೆ: ಗಿಲ್

ಸಿಡ್ನಿ: ತಾನು ವೈಯಕ್ತಿಕವಾಗಿ ಯಾವುದೇ ಗುರಿಯನ್ನಿಟ್ಟುಕೊಂಡಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವುದಕ್ಕೆ ಉತ್ಸುಕನಾಗಿದ್ದೇನೆ ಎಂದು ಭಾರತದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಹೇಳಿದ್ದಾರೆ. ಮುಂಬರಲಿರುವ ಆಸ್ಟ್ರೇಲಿಯಾ vs ಭಾರತ ಸರಣಿಯ ಕುರಿತು ಗಿಲ್ ಈ ಹೇಳಿಕೆ ನೀಡಿದ್ದಾರೆ.
ಭಾರತ-ಆಸ್ಟ್ರೇಲಿಯಾ ಸರಣಿಗಾಗಿ ಶುಬ್ಮನ್ ಗಿಲ್ ಅವರನ್ನು ಭಾರತ ಏಕದಿನ ಮತ್ತು ಟಿ20ಐ ತಂಡದಲ್ಲಿ ಹೆಸರಿಸಲಾಗಿದೆ. ಇನ್ನು ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವತ್ತ ಗಿಲ್ ಎದುರು ನೋಡುತ್ತಿದ್ದಾರೆ. ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭಗೊಳ್ಳಲಿದೆ.
'ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ನಾನು ಎದುರು ನೋಡುತ್ತಿದ್ದೇನೆ. ಯಾಕೆಂದರೆ ಇದು ನನ್ನ ಚೊಚ್ಚಲ ಪ್ರವಾಸ. ನಾನು ಬಾಲಕನಾಗಿದ್ದಾಗಿನಿಂದಲೂ ಭಾರತ-ಆಸ್ಟ್ರೇಲಿಯಾ ಸರಣಿಗಳನ್ನು ನೋಡುತ್ತಾ ಬೆಳೆದಿದ್ದೇನೆ. ಹೀಗಾಗಿ ಸರಣಿ ಬಗ್ಗೆ ಬಹಳ ಉತ್ಸುಕನಾಗಿದ್ದೇನೆ,' ಎಂದು ಗಿಲ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಗಿಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಗಿಲ್ ಕೆಕೆಆರ್ ಪರ ಆಡುತ್ತಾರೆ. ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯು 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications