Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸಿದ್ದು ನೆರವಾಯಿತು: ಇಶಾನ್ ಕಿಶನ್

Having faced good pacers in IPL helped me on India debut, says Ishan Kishan

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶವನ್ನು ನೀಡಿ ಗೆಲುವು ಸಾಧಿಸಿದೆ. ಚೊಚ್ಚಲ ಪಂದ್ಯವನ್ನಾಡಿದ ಇಶಾನ್ ಕಿಶನ್ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಇಶಾನ್ ಕಿಶನ್ ಈ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆಯನ್ನು ನೀಡುತ್ತಾ ಐಪಿಎಲ್‌ನಿಂದಾದ ನೆರವನ್ನು ಹೇಳಿಕೊಂಡಿದ್ದಾರೆ.

ಇಶಾನ್ ಕಿಶನ್ ಸಾಮರ್ಥ್ಯ ಕ್ರಿಕೆಟ್ ಅಭಿಮಾನಿಗಳ ಅರಿವಿಗೆ ಬಂದಿದ್ದು ಐಪಿಎಲ್‌ನಲ್ಲಿ ಮುಂಬೈ ಪರವಾಗಿ ನೀಡಿದ ಪ್ರದರ್ಶನದಿಂದಾಗಿಯೇ. ಕಳೆದ ಎರಡ್ಮೂರು ಆವೃತ್ತಿಗಳಲ್ಲಿ ಇಶಾನ್ ಸ್ಥಿತ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ದೇಶೀಯ ಕ್ರಿಕೆಟ್ ಟೂರ್ನಿಯಲ್ಲೂ ಇದೇ ಪ್ರದರ್ಶನವನ್ನು ಮುಂದುವರಿಸಿದ್ದರು ಇಶಾನ್ ಕಿಶನ್.

"ಖಂಡಿತವಾಗಿಯೂ ನನಗೆ ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೋಲ್ಟ್ ಅವರಂತಾ ಆಟಗಾರರನ್ನು ನೆಟ್‌ನಲ್ಲಿ ಎದುರಿಸಿದ್ದು ನೆರವಿಗೆ ಬಂತು. ಅವರು ವೇಗದ ಬೌಲರ್‌ಗಳು, ಅವರ ಎಸೆತಗಳನ್ನು ಎದುರಿಸಿದ್ದು ನನಗೆ ಆತ್ಮವಿಶ್ವಾಸವನ್ನು ತುಂಬಿಸಿದೆ" ಎಂದು ಇಶಾನ್ ಕಿಶನ್ ಹೇಳಿದ್ದಾರೆ.

"ಐಪಿಎಲ್‌ನಲ್ಲಿ ವಿಶ್ವಾದ್ಯಂತ ಆಡುವ ವೇಗದ ಬೌಲರ್‌ಗಳನ್ನು ಎದುರಿಸುತ್ತೇವೆ. ಹಾಗಾಗಿ ಎಲ್ಲಾ ರೀತಿಯ ಬೌಲರ್‌ಗಳನ್ನು ನೀವು ಎದುರಿಸಿರುತ್ತೀರಿ. ಹಾಗಾಗಿ ಬಹುಶಃ ಖಂಡಿತವಾಗಿಯೂ ಇದು ಸಹಾಯವನ್ನು ಮಾಡುತ್ತದೆ" ಎಂದು ಇಶಾನ್ ಕಿಶನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ತನ್ನ ಸ್ವಾಭಾವಿಕ ಆಟವನ್ನು ಪ್ರದರ್ಶಿಸಲು ತಂಡದ ಮ್ಯಾನೇಜ್‌ಮೆಂಟ್ ಬೆಂಬಲವಾಗಿ ನಿಂತಿತು ಎಂದಿದ್ದಾರೆ. ಹೀಗಾಗಿ ಒತ್ತಡವಿಲ್ಲದೆ ಆಡಲು ಸಹಕಾರಿಯಾಯಿತು ಎಂದು ವಿವರಿಸಿದ್ದಾರೆ ಇಶಾನ್ ಕಿಶನ್.

Story first published: Monday, March 15, 2021, 17:46 [IST]
Other articles published on Mar 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+