Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲಾ ಮಾದರಿಗಳಲ್ಲೂ ಟಾಪ್ ಎನಿಸಬಲ್ಲ ಆಲ್ ರೌಂಡರ್ ಹೆಸರಿಸಿದ ಗಂಭೀರ್

He is become one of the top-most all-rounders across formats: Gautam Gambhir names a player

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ನಿರಾಶೆ ತಂದಿದೆ. ಟೂರ್ನಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಸ್‌ಕೆ ಪ್ಲೇ ಆಫ್‌ಗೆ ಪ್ರವೇಶಿಸುವಲ್ಲಿ ಸೋತಿದೆ. ಸದ್ಯದ ಪಾಯಿಂಟ್ಸ್‌ ಟೇಬಲ್‌ನಲ್ಲಿ ಸಿಎಸ್‌ಕೆ ಕೊನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ನಾಯಕ ಎಂಎಸ್ ಧೋನಿಯನ್ನೂ ಸೇರಿಸಿ ಬಹುತೇಕ ಎಲ್ಲಾ ಆಟಗಾರರು ಫಾರ್ಮ್‌ ಕಳೆದುಕೊಂಡಿದ್ದಾರೆ. ಆದರೂ ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಜಯ ದಾಖಲಿಸಿತ್ತು. ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸ್ಯಾಮ್ ಕರನ್ ಮತ್ತು ರವೀಂದ್ರ ಜಡೇಜಾ ತಂಡದ ಗೆಲುವಿಗೆ ಕಾರಣರಾಗಿದ್ದರು.

ಕೆಕೆಆರ್ ನೀಡಿದ್ದ 172 ರನ್ ಗುರಿ ಬೆನ್ನಟ್ಟಿದ ಸಿಎಸ್‌ಕೆ, ಶೇನ್ ವಾಟ್ಸನ್ 14, ಋತುರಾಜ್ ಗಾಯಕ್ವಾಡ್ 72 (53 ಎಸೆತ), ಅಂಬಾಟಿ ರಾಯುಡು 38 (20 ಎಸೆತ), ರವೀಂದ್ರ ಜಡೇಜಾ ಅಜೇಯ 31, ಸ್ಯಾಮ್ ಕರನ್ ಅಜೇಯ 13 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಬಾರಿಸಿತು.

ಇನ್‌ಪಿಎನ್‌ ಕ್ರಿಕ್‌ ಇನ್ಫೋ ಜೊತೆ ಮಾತನಾಡಿದ ಕೆಕೆಆರ್ ಮಾಜಿ ನಾಯಕ ಗೌತಮ್ ಗಂಭೀರ್, 'ಸಿಎಸ್‌ಕೆ ತಂಡದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ತಂಡದಲ್ಲಿ ಬೆಳ್ಳಿ ಗೆರೆಯಾಗಿ ಕಾಣಿಸೋದು ಸ್ಯಾಮ್ ಕರನ್ ಮಾತ್ರ. ಆತ ಮುಂದೊಮ್ಮೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಟಾಪ್ ಆಲ್‌ರೌಂಡರ್ ಎನಿಸಿಕೊಳ್ಳುತ್ತಾರೆ,' ಎಂದಿದ್ದಾರೆ.

Story first published: Friday, October 30, 2020, 14:47 [IST]
Other articles published on Oct 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+