ಆತ ಎಲ್ಲಾ ಕ್ರಿಕೆಟ್ ಮಾದರಿಗೂ ಪರಿಹಾರವಾಗಬಲ್ಲ ಎಂದು ದಾದ ಹೇಳಿದ್ಯಾರಿಗೆ?

ಕೋಲ್ಕತ್ತಾ, ಸೆಪ್ಟೆಂಬರ್ 28: ಅಕ್ಟೋಬರ್ 2ರಿಂದ ಆರಂಭಗೊಳ್ಳಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗಿಡಲಾಗುತ್ತದೆ, ಪಂತ್ ಬದಲು ವೃದ್ಧಿಮಾನ್ ಸಹಾಗೆ ಅವಕಾಶ ಲಭಿಸಲಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.
ಆದರೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಪಂತ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ರಿಷಬ್ ಪಂತ್ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಭಾರತ ತಂಡದಲ್ಲಿ ಪರಿಹಾರವಾಗಿ ಕಾಣಿಸಲಿದ್ದಾರೆ ಎಂದು ಬಂಗಾಳ ಹುಲಿ ಗಂಗೂಲಿ ಹೇಳಿದ್ದಾರೆ.
ಪ್ರತೀ ಪಂದ್ಯದಲ್ಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿರುವ ಪಂತ್, ಬೇಗನೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಹೀಗಾಗಿಯೇ ಇತ್ತೀಚೆಗೆ ಪಂತ್ ಬಗ್ಗೆ ಟೀಕೆ, ಅಸಮಾಧಾನಗಳು ಕೇಳಿ ಬರುತ್ತಿವೆ. ಆದರೆ ಗಂಗೂಲಿ ಪಂತ್ ಬಗ್ಗೆ ಗಮನಾರ್ಹ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತಪ್ಪುಗಳಿಂದಲೇ ಕಲಿಯಬೇಕು
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸೌರವ್ ಗಂಗೂಲಿ, 'ಪಂತ್ ಅವರ ಶಾಟ್ ಸೆಲೆಕ್ಷನ್ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಅದು ಸರಿಯೆ. ಆದರೆ ಪಂತ್ ಸುಧಾರಿಸಬೇಕಾದರೆ ಅಂಥ ತಪ್ಪುಗಳಿಂದಲೇ ಕಲಿಯಬೇಕಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ,' ಎಂದರು.

ನಿರಾಸೆ ಮೂಡಿಸುತ್ತಿರುವ ಪಂತ್
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಆಡಿದ್ದ ಪಂತ್, ಕ್ರಮವಾಗಿ 19, 4 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು. ಪ್ರತೀಸಾರಿಯೂ ದೊಡ್ಡ ಹೊಡೆತಗಳಿಗೆ ಮುಂದಾಗುವ ಪಂತ್ ಬೇಗನೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದು ಭಾರತದ ಆಯ್ಕೆ ಸಮಿತಿಗೂ ತಲೆ ನೋವು ತರುತ್ತಿದೆ.

ನಾಳೆ ಅಗ್ರಸ್ಥಾನಕ್ಕೇರುತ್ತಾನೆ
ಮಾತು ಮುಂದುವರೆಸಿದ ದಾದಾ, 'ಪಂತ್ ಯುವ ಬ್ಯಾಟಿಂಗ್ ತಂಡದಲ್ಲಿದ್ದಾರೆ. ತಂಡದ ಎಲ್ಲಾ ಆಟಗಾರರ ಬೆಂಬಲದೊಂದಿಗೆ ನಾಯಕನ ಬೆಂಬಲ ಹೆಚ್ಚಿನ ಮಟ್ಟದಲ್ಲಿ ಪಂತ್‌ಗೆ ಸಿಗಬೇಕು. ಹೀಗಾದರೆ ನಾಳೆ ಪಂತ್ ಅಗ್ರ ಸ್ಥಾನಿಗರ ಪಟ್ಟಿ ಸೇರಲಿದ್ದಾನೆ,' ಎಂದು ಭರವಸೆ ವ್ಯಕ್ತಪಡಿಸಿದರು.

ಎಲ್ಲಾ ಮಾದರಿಗೂ ಪರಿಹಾರ
'ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಿಷಬ್ ಪ್ರವೇಶಿಸಿದ ರೀತಿ ನನಗೆ ಅದ್ಭುತವಾಗಿತ್ತು. ನನಗನ್ನಿಸುವಂತೆ ಆತ ಭಾರತೀಯ ಕ್ರಿಕೆಟ್‌ನಲ್ಲಿ ಎಲ್ಲಾ ಮಾದರಿಗೂ ಪರಿಹಾರವಾಗಬಲ್ಲ. ಆತ ಪಂದ್ಯ ಗೆಲ್ಲಿಸುವ ಆಟಗಾರನಾಗಿ ಬಹುಕಾಲ ಟೀಮ್ ಇಂಡಿಯಾದಲ್ಲಿ ಆಡಲಿದ್ದಾನೆ,' ಎಂದು ಸೌರವ್ ಗಂಗೂಲಿ ಪಂತ್ ಅವರನ್ನು ಹರಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications