For Quick Alerts
ALLOW NOTIFICATIONS  
For Daily Alerts
 

ಆತ ಆಧುನಿಕ ಕ್ರಿಕೆಟ್‌ನ ವಿವ್ ರಿಚರ್ಡ್ಸ್ ಎಂದು ಭಾರತೀಯ ತಾರೆಯನ್ನು ಹೊಗಳಿದ ಪಾಕ್ ಮಾಜಿ ನಾಯಕ

Hes a modern-day Viv Richards: Ex-Pak captains praises Virat kohli

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಮೀಜ್ ರಾಜಾ ಭಾರತೀಯ ಸ್ಟಾರ್ ಆಟಗಾರನನ್ನು ಹಾಡಿ ಹೊಗಳಿದ್ದಾರೆ. ಆತ ಆಧುನಿಕ ಕ್ರಿಕೆಟ್‌ನ ವಿವಿಯನ್ ರಿಚರ್ಡ್ಸ್ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ಪ್ರದರ್ಶನದ ಬಳಿಕ ಪಾಕ್ ಮಾಜಿ ನಾಯಕ ಈ ಪಸೆಶಂಸೆಯ ಮಾತುಗಳನ್ನು ಆಡಿದ್ದಾರೆ.

ರಮೀಜ್ ರಾಜಾ ಹೀಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ. ಯುವ ಆಟಗಾರರಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರಂತಾ ಆಟಗಾರರು ಭಾರತೀಯ ತಂಡದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ನಾನ್‌ಸ್ಟ್ರೈಕ್‌ನಲ್ಲಿ ವಿರಾಟ್ ಕೊಹ್ಲಿ ಇದ್ದಾರೆಂದರೆ ಅದೆಂತಾ ಸ್ಮರಣೀಯ ಆರಂಭ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ರಾಜಾ ಕೊಹ್ಲಿಯನ್ನು ವಿವಿಯನ್ ರಿಚರ್ಡ್ಸ್‌ಗೆ ಹೋಲಿಸಿದ್ದಾರೆ.

"ಇಶಾನ್ ಕಿಶನ್ ವಿರಾಟ್ ಕೊಹ್ಲಿಯ ಜೊತೆಗೆ ಜೊತೆಗಾರಿಕೆಯನ್ನು ಮಾಡಲು ಅದೃಷ್ಠ ಮಾಡಿದ್ದರು ಯಾಕೆಂದರೆ ಆತ ಆಧುನಿಕ ಕಾಲದ ಶ್ರೇಷ್ಠ ಆಟಗಾರ. ನನ್ನ ದೃಷ್ಟಿಕೋನದ ಪ್ರಕಾರ ಆತ ಅಧುನಿಕ ಕಾಲದ ವಿವಿಯನ್ ರಿಚರ್ಡ್ಸ್. ಇದರಿಂದಾಗಿ ಇಶಾನ್ ಕಿಶನ್‌ಗೆ ಆತ್ಮವಿಶ್ವಾದ ಹೆಚ್ಚಾರುತ್ತದೆ, ಹೀಗಾಗಿ ಇನ್ನೂ ಹೆಚ್ಚಿದನ್ನು ನಾವು ಆತನಿಂದ ನಿರೀಕ್ಷಿಸಬಹುದು" ಎಂದು ರಮೀಜ್ ರಾಜಾ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ಇಶಾನ್ ಕಿಶನ್ ಪದಾರ್ಪನೆ ಮಾಡಿ ಚೊಚ್ಚಲ ಪಂದ್ಯದಲ್ಲೇ 56 ರನ್‌ಗಳಿಸಿ ಮಿಂಚಿದ್ದರು.

ನಾಯಕ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ ಬಳಿಕ ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು. 73 ರನ್ ಹಾಗೂ 77 ರನ್‌ಗಳನ್ನು ಕ್ರಮಾವಾಗಿ ಅವರು ಬಾರಿಸಿದರು. ಎರಡು ಪಂದ್ಯಗಳಲ್ಲೂ ಅಜೇಯವಾಗುಳಿದರು. ಆದರೆ ನಾಲ್ಕನೇ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಇನ್ನು ಇದೇ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಆಟಗಾರರಿಗೆ ಅವಕಾಶವನ್ನು ನೀಡಿದ ಭಾರತದ ನಿರ್ಧಾರವನ್ನು ರಾಜಾ ಪ್ರಶಂಸಿಸಿದರು. ಇಶಾನ್ ಕಿಶನ್ ದ್ವಿತೀಯ ಟಿ20 ಪಂದ್ಯದಲ್ಲಿ ಕಣಕ್ಕಿಳಿದು ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದರೆ ಸೂರ್ಯಕುಮಾರ್ ಯಾದವ್ ನಾಲ್ಕನೇ ಟಿ20 ಪಂದ್ಯದಲ್ಲಿ ಆಡಿ ಅರ್ಧ ಶತಕ ಬಾರಿಸಿದರು.

Story first published: Friday, March 19, 2021, 15:16 [IST]
Other articles published on Mar 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+