ಈತ 2ನೇ ಆ್ಯಡಂ ಗಿಲ್‌ಕ್ರಿಸ್ಟ್: ಭಾರತದ ಬ್ಯಾಟ್ಸ್ಮನ್‌ಗೆ ಪಾಂಟಿಂಗ್ ಶ್ಲಾಘನೆ


ಸಿಡ್ನಿ, ಜನವರಿ 4: ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರು ಭಾರತದ ರಿಷಬ್ ಪಂತ್ ಅವರನ್ನು ಶ್ಲಾಘಿಸಿದ್ದಾರೆ. ಪಂತ್ ಎರಡನೇ ಆ್ಯಡಂ ಗಿಲ್ ಕ್ರಿಸ್ಟ್ ಇದ್ದಂತೆ ಎಂದು ಕೊಂಡಾಡಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಂತ್ ಅವರ ಸೊಗಸಾದ ಬ್ಯಾಟಿಂಗ್ ಬಳಿಕ ಪಾಂಟಿಂಗ್, ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶುಕ್ರವಾರ (ಜನವರಿ 4) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ 2ನೇ ದಿನದಾಟದಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಪಂತ್ 189 ಎಸೆತಗಳಲ್ಲಿ 159 ರನ್ ಗಳಿಸಿದ್ದರು. ಇದು ಪಂತ್ ಅವರಿಂದಾದ ಎರಡನೇ ಟೆಸ್ಟ್ ಶತಕ.
ಪಂತ್, ಚೇತೇಶ್ವರ ಪೂಜಾರ ಅವರ ಶತಕ, ಮಯಾಂಕ್ ಅಗರ್ವಾಲ್ ಮತ್ತು ರವೀಂದ್ರ ಜಡೇಜಾ ಅವರ ಅರ್ಧ ಶತಕದ ಸಹಾಯದಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದು 622 ರನ್ ಪೇರಿಸುವುದರೊಂದಿಗೆ ಡಿಕ್ಲೇರ್ ಘೋಷಿಸಿತ್ತು.
'ಇವನು (ಪಂತ್) ಒಬ್ಬ ಅದ್ಭುತ ಪ್ರತಿಭಾವಂತ. ಆಕರ್ಷಕ ಬ್ಯಾಟ್ಸ್ಮನ್. ಐಪಿಎಲ್‌ನಲ್ಲಿ ಡೆಲ್ಲಿ (ಕ್ಯಾಪಿಟಲ್ಸ್) ಪರ ಇವನಿಗೆ ಕೋಚ್ ಆಗಿ ತರಬೇತಿ ನೀಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈತ ಈಗಾಗಲೇ 2 ಟೆಸ್ಟ್ ಶತಕಗಳನ್ನು ಪೂರೈಸಿದ್ದಾನೆ' ಎಂದು ಕ್ರಿಕೆಟ್ ಡಾಟ್ ಕಾಮ್ ಡಾಟ್ ಯು ಜೊತೆ ಮಾತನಾಡುತ್ತ ಪಾಂಟಿಂಗ್ ಹೇಳಿದರು.
'ಭಾರತೀಯ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿಯ ಪ್ರಭಾವ ಹೆಚ್ಚಿನ ಯುವ ಬ್ಯಾಟ್ಸ್ಮನ್‌ಗಳಲ್ಲಿ ಇದ್ದೇ ಇದೆ. ಕೀಪಿಂಗ್ ಮತ್ತು ಬ್ಯಾಟಿಂಗ್ ನೋಡುವಾಗ ಪಂತ್, ಧೋನಿಯಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಕೂಡ. ಕಾಮೆಂಟರಿ ವೇಳೆ ನಾವು ಮಾತನಾಡಿಕೊಳ್ಳುವಂತೆ ಪಂತ್ ಅವರಲ್ಲಿ ಕೊಂಚ ಆ್ಯಡಂ ಗಿಲ್‌ಕ್ರಿಸ್ಟ್ ಹೋಲಿಕೆಯೂ ಇದೆ' ಎಂದು ರಿಕಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications