For Quick Alerts
ALLOW NOTIFICATIONS  
For Daily Alerts
 

ದೇಶದ ಪರವಾಗಿ ಆತನಿಂದ ಸಂಪೂರ್ಣ ಆಟ ಹೊರಬಂದಿಲ್ಲ: ರಿಕಿ ಪಾಂಟಿಂಗ್

He’s Good but Never Saw His Best in Internationals: Ricky Ponting

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದ ಅನುಭವಿ ಆಟಗಾರನೋರ್ವನ ಬಗ್ಗೆ ಹೇಳಿಕೆಯನ್ನುನೀಡಿದ್ದಾರೆ. ಆತನೋರ್ವ ಅತ್ಯುತ್ತಮ ಆಟಗಾರ ನಿಜ. ಆದರೆ ರಾಷ್ಟ್ರೀಯ ತಂಡಕ್ಕೆ ಆತನಿಂದ ಸಂಪೂರ್ಣ ಆಟ ಹೊರ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ರಿಕಿ ಪಾಂಟಿಂಗ್ ಹೀಗೆ ಹೇಳಿಕೆಯನ್ನು ನೀಡಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಆಸ್ಟ್ರೇಲಿಯಾದ ಅನುಭವಿ ಆಟಗಾರ ಉಸ್ಮಾನ್ ಖವಾಜ ಕುರಿತಾಗಿ. ಇತ್ತೀಚೆಗಷ್ಟೇ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ವಾರ್ಷಿಕ ಗುತ್ತಿಗೆಯಿಂದ ಖವಾಜ ಹೊರಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ.

ಅವರು ಉತ್ತಮ ಆಟಗಾರ ಎಂದು ನಾನು ಯಾವಾಗಲೂ ಭಾವಿಸಿದ್ದೇನೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ಅವರ ಶ್ರೇಷ್ಠ ಆಟವನ್ನು ನೋಡಿಲ್ಲ. ನಾವು ಅದರ ಸುಳಿವುಗಳನ್ನು ನೋಡಿದ್ದೇವೆ ಎಂದು ಹೇಳಿರುವ ರಿಕಿ ಪಾಂಟಿಂಗ್ ಖವಾಜ ಮತ್ತೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನವನ್ನು ಗಳಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಖವಾಜ ಉತ್ತಮ ಪ್ರದರ್ಶನವನ್ನು ನೀಡಿ ಸಾಕಷ್ಟು ರನ್ ಗಳಿಸಿ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ವಾಪಾಸ್ಸಾಗಲಿದ್ದಾರೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರಿಗೆ ಇದಕ್ಕಾಗಿ ಅವಕಾಶಗಳು ದೊರೆಯಲಿದೆ. ಅದನ್ನು ಸೂಕ್ತ ರೀತಿಯಲ್ಲಿ ಖವಾಜ ಉಪಯೋಗಿಸಿಕೊಳ್ಳಲಿದ್ದಾರೆ ಎಂದಿದ್ದಾರೆ ಪಾಂಟಿಂಗ್.

ಒಂದು ವೇಳೆ ಮತ್ತೆ ಖವಾಜ ಅವರು ಅವಕಾಶವನ್ನು ಗಳಿಸಿಕೊಂಡರೆ ಮತ್ತೆ ಯಾರನ್ನೂ ಅವರು ನಿರಾಸೆಗೊಳಿಸಲಾರರು ಎಂದು ನನಗೆ ಖಾತ್ರಿಯಿದೆ ಎಂದು ರಿಕಿ ಪಾಂಟಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಖವಾಜ 44 ಟೆಸ್ಟ್ ಪಂದ್ಯಗಳು ಮತ್ತು 40 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 2887 ರನ್‌ಗಳಿಸಿದರೆ, ಏಕದಿನದಲ್ಲಿ 1554 ರನ್ ಗಳಿಸಿದ್ದಾರೆ.

Story first published: Monday, May 18, 2020, 12:47 [IST]
Other articles published on May 18, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+