Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೆಲುವಿನ ಬಳಿಕ ಇಂಗ್ಲೆಂಡ್ ನಾಯಕ ಆತನೋರ್ವ 'ಮಿಸ್ಟರ್ ಇನ್‌ಕ್ರೆಡಿಬಲ್' ಎಂದಿದ್ದು ಯಾರಿಗೆ?

‘He’s Mr Incredible’: England Captain Joe Root On Ben Stokes

ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲ ಮಾಡಿಕೊಂಡಿದೆ. ಈ ಪಂದ್ಯದ ನಂತರ ಮಾತನಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ಓರ್ವ ಆಟಗಾರನ ಬಗ್ಗೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಬೆನ್ ಸ್ಟೋಕ್ಸ್ ಓರ್ವ ಊಹೆಗೂ ಮೀರಿದ ಆಟಗಾರ ಎಂದು ಹೇಳಿದ್ದಾರೆ. ಮುಕ್ತಕಂಠದಿಂದ ಬೆನ್ ಸ್ಟೊಕ್ಸ್ ಅವರನ್ನು "ಮಿಸ್ಟರ್ ಇನ್‌ಕ್ರೆಡಿಬಲ್" ಎಂದು ಹೇಳಿದ್ದಾರೆ ಜೋ ರೂಟ್.

ಎರಡನೇ ಟೆಸ್ಟ್ ಪಂದ್ಯದ ಗೆಲುವಿಲ್ಲಿ ಜೋ ರೂಟ್ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಕುಸಿತದ ಸಂದರ್ಭದಲ್ಲಿ ತಾಳ್ಮೆಯ 176 ರನ್ ಸಿಡಿಸಿದ್ದ ಸ್ಟೋಕ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ 57 ಎಸೆತಗಳಲ್ಲಿ 78 ರನ್ ಸಿಡಿಸಿ ವೆಸ್ಟ್ ಇಂಡೀಸ್‌ಗೆ ಉತ್ತಮ ಗುಡಿ ನೀಡಲು ಕಾರಣರಾದರು.

"ಬೆನ್ ಸ್ಟೋಕ್ಸ್ ಓರ್ವ ಮಿಸ್ಟರ್ ಇನ್‌ಕ್ರೆಡಿಬಲ್ ಎಂದು ನಾನು ಬಾವಿಸುತ್ತೇನೆ. ಈ ಪ್ರಮಾಣದ ಪ್ರದರ್ಶನವನ್ನು ಅವರು ಮುಂದೆಯೂ ಕಾಪಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆತನ ಸಾಮರ್ಥ್ಯಕ್ಕೆ ಆಕಾಶವೇ ಮಿತಿ" ಎಂದು ಜೋ ರೂಟ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಸ್ಟೋಕ್ಸ್ ಆಡುವ ರೀತಿಗೂ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ನಾವು ಈ ಆಟವನ್ನು ಆಸ್ವಾದಿಸಬೇಕು, ಆಟದ ಈ ಉನ್ನತ ಸಂದರ್ಭದಲ್ಲಿ ಒತ್ತಡವನ್ನು ನೀಡದೆ ಅದನ್ನು ಪ್ರಶಂಸಿಸಬೇಕು ಎಂದು ಇಂಗ್ಲೆಂಡ್ ನಾಯಕ ಹೇಳಿಕೆಯನ್ನು ನೀಡಿದ್ದಾರೆ.

Story first published: Tuesday, July 21, 2020, 15:45 [IST]
Other articles published on Jul 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+