Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿಗೆ ಅಷ್ಟು ವಯಸ್ಸಾಗಿಲ್ಲ: ವೈರಲ್ ಫೋಟೋ ಬಗ್ಗೆ ಅಮ್ಮನ ಮಾತು

He’s Not That Old: Ms Dhoni’s Mother Reacts On Viral Photo

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಫೋಟೋವೊಂದು ಇತ್ತೀಚೆಗೆ ಸಾಕಷ್ಟು ವೈರಲ್ ಆಗಿತ್ತು. ಬಿಳಿಯ ಗಡ್ಡವನ್ನು ಬಿಟ್ಟಿದ್ದ ಧೋನಿ ಸಾಕಷ್ಟು ವಯಸ್ಸಾದಂತೆ ಆ ಫೋಟೋದಲ್ಲಿ ಕಾಣಿಸುತ್ತಿದ್ದರು. ಅದೇ ಕಾರಣಕ್ಕೆ ಈ ಪೋಟೋ ತುಂಬಾ ವೈರಲ್ ಆಗಿತ್ತು.

ಈ ವೈರಲ್ ಫೋಟೋ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ಧೋನಿ ಅವರ ತಾಯಿ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗನಿಗೆ ಆ ಫೋಟೋದಲ್ಲಿ ಕಾಣಿಸುವಷ್ಟು ವಯಸ್ಸಾಗಿಲ್ಲ. ತಾಯಿಯ ಪಾಲಿಗೆ ಮಗನಿಗೆ ಯಾವತ್ತೂ ವಯಸ್ಸಾಗಲಾರದು ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ.

ಧೋನಿಯ ತಾಯಿ ವಿಶೇಷ ಸಂದರ್ಶನದಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ

ನಾನೂ ಕೂಡ ಆ ಚಿತ್ರ ನೋಡಿದ್ದೇನೆ

ನಾನೂ ಕೂಡ ಆ ಚಿತ್ರ ನೋಡಿದ್ದೇನೆ

ರಾಂಚಿಯ ತಮ್ಮ ಮನೆಯಿಂದ ಧೋನಿ ತಾಯಿ ದೇವಕಿ ದೇವಿ ಖಾಸಗಿ ಸುದ್ದಿ ಸಂಸ್ಥೆಗೆ ಮದರ್ಸ್ ಡೇ ಅಂಗವಾಗಿ ವಿಶೇಷ ಸಂದೇಶವನ್ನು ನೀಡಿದ್ದರು. ಈ ವೇಳೆ ಅವರು ವೈರಲ್ ಫೋಟೋ ವಿಚಾರವಾಗಿ ಮಾತನಾಡಿದ್ದಾರೆ. ತಾನೂ ಕೂಡ ಆ ಚಿತ್ರವನ್ನು ನೋಡಿದ್ದೇನೆ. ಆದರೆ ಆ ಚಿತ್ರದಲ್ಲಿ ಕಾಣುವಷ್ಟು ವಯಸ್ಸು ಅವನಿಗೆ ಆಗಿಲ್ಲ ಎಂದು ಹೇಳಿದ್ದಾರೆ.

ಆತನೇ ನಿರ್ಧಾರ ತೆಗೆದುಕೊಳ್ಳುತ್ತಾನೆ

ಆತನೇ ನಿರ್ಧಾರ ತೆಗೆದುಕೊಳ್ಳುತ್ತಾನೆ

ಇದೇ ಸಂದರ್ಭದಲ್ಲಿ ಧೋನಿಯ ತಾಯಿಯವರ ಬಳಿ ಧೋನಿ ಟಿ20 ವಿಶ್ವಕಪ್ ಆಡುವ ಸಾಧ್ಯತೆಯ ಬಗ್ಗೆಯೂ ಕೇಳಲಾಯಿತು. ಅದಕ್ಕೆ ಅವರು "ಟಿ20 ವಿಶ್ವಕಪ್‌ನಲ್ಲಿ ಧೋನಿ ಆಡುವ ಬಗ್ಗೆ ನನಗೂ ಮಾಹಿತಿಯಿಲ್ಲ. ಮೊದಲು ಕೊರೊನಾ ವೈರಸ್ ಸಂಪೂರ್ಣವಾಗಿ ಮುಗಿಯಲಿ. ಆ ಬಳಿಕ ಆತನಿಗೆ ಮುಂದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ.

ರಾಂಚಿಯಲ್ಲಿ ಕುಟುಂಬದೊಂದಿಗೆ ಧೋನಿ

ರಾಂಚಿಯಲ್ಲಿ ಕುಟುಂಬದೊಂದಿಗೆ ಧೋನಿ

ಧೋನಿ ಸದ್ಯ ರಾಂಚಿಯ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ದೂರವಿರುವ ಧೋನಿಯ ಬಗ್ಗೆ ಅವರ ಪತ್ನಿ ಸಾಕಷ್ಟು ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪುತ್ರಿ ಜೀವಾ ಹಾಗೂ ಪತ್ನಿ ಸಾಕ್ಷಿ ಜೊತೆಗಿನ ಹಲವು ಫೋಟೋಗಳು ಮತ್ತು ವೀಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಕ್ರಿಕೆಟ್‌ನಿಂದ ಧೋನಿ ದೂರ

ಕ್ರಿಕೆಟ್‌ನಿಂದ ಧೋನಿ ದೂರ

ಕಳೆದ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿ ಹೊರಬಿದ್ದ ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಕ್ರಿಕೆಟ್‌ ಭವಿಷ್ಯದ ಬಗ್ಗೆ ಯಾವ ಸ್ಪಷ್ಟನೆಯನ್ನೂ ಕೂಡ ಧೋನಿ ನೀಡಿರಲಿಲ್ಲ. ಮುಂದಿನ ಜುಲೈನ 7ನೇ ದಿನಾಂಕಕ್ಕೆ ಧೋನಿ 39ನೇ ವಯಸ್ಸಿಗೆ ಕಾಲಿಡಲಿದ್ದಾರೆ.

Story first published: Tuesday, May 12, 2020, 17:14 [IST]
Other articles published on May 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+