Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆತ ಬೌಲಿಂಗ್‌ನಲ್ಲಿ ದ್ರಾವಿಡ್‌ನಂತಿದ್ದ: ಭಾರತೀಯನ ನೆನೆದ ಸ್ಟೀವ್ ವಾ

He was the Rahul Dravid of their bowling line-up: Steve Waugh on legendary India bowler

ನವದೆಹಲಿ: ಭಾರತದ ಸಾರ್ವಕಾಲಿಕ ಟೆಸ್ಟ್ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್‌ಗೆ ಆಪಾದ್ಬಾಂಧವ ಎನ್ನುವ ಹೆಸರಿತ್ತು. ಯಾಕೆಂದರೆ ತಂಡ ಸೋಲಿನಂಚಿನಲ್ಲಿದ್ದಾಗ ಗೋಡೆಯಂತೆ ವಿಕೆಟ್ ಕಾವಲು ನಿಂತು ದ್ರಾವಿಡ್ ಒಂದೋ ಪಂದ್ಯ ಗೆಲ್ಲಿಸುತ್ತಿದ್ದರು. ಇಲ್ಲವೆ ಡ್ರಾ ಮಾಡಿಸುತ್ತಿದ್ದರು.

ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವ್ ವಾ ನಾಯಕತ್ವದಡಿಯಲ್ಲಿ ಹೆಚ್ಚು ಗೆಲುವುಗಳನ್ನು ಕಂಡಿತ್ತು ಅನ್ನೋದರಲ್ಲಿ ಎರಡು ಮಾತಿಲ್ಲ. ಆಸ್ಟ್ರೇಲಿಯಾಕ್ಕೆ 57 ಪಂದ್ಯಗಳಲ್ಲಿ ನಾಯಕನಾಗಿ ಆಡಿ 72 ಶೇ. ಗೆಲುವನ್ನು ತಂದುಕೊಟ್ಟಿರುವ ಸ್ಟೀವ್ ಅವರು ಭಾರತದ ಇಬ್ಬರು ಪ್ರಮುಖ ಆಟಗಾರರನ್ನು ಸ್ಮರಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಪರ 168 ಟೆಸ್ಟ್ ಪಂದ್ಯಗಳನ್ನಾಡಿರುವ ವಾ, 'ಗ್ರೇಟ್‌ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್, ಬಂಗಾಳ ಹುಲಿ ಸೌರವ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆ ತಂಡಕ್ಕೆ ನೆರವಾಗುತ್ತಿದ್ದುದನ್ನು ನೆನಪಿಸಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ತನ್ನ ದೇಶಕ್ಕಾಗಿ ಅನಿಲ್ ಕುಂಬ್ಳೆಯಷ್ಟು ಸಂಭ್ರಮಿಸಿ ಆಡುವವರನ್ನು ನಾನು ನೋಡಿಲ್ಲ. ದೇಶಕ್ಕಾಗಿ ಆಡೋದೇ ಆತನಿಗೆ ಎಲ್ಲವೂ ಆಗಿತ್ತು. ರಾಹುಲ್ ದ್ರಾವಿಡ್ ಬ್ಯಾಟಿಂಗ್‌ನಲ್ಲಿ ಹೇಗಿದ್ದರೋ ಹಾಗೆಯೇ ಬೌಲಿಂಗ್‌ನಲ್ಲಿ ಅನಿಲ್ ಕುಂಬ್ಳೆ ಇದ್ದರು ಎಂದು ನನಗನ್ನಿಸುತ್ತದೆ,' ಎಂದು ವಾ ಅಭಿಪ್ರಾಯಿಸಿದ್ದಾರೆ.

Story first published: Wednesday, January 13, 2021, 19:35 [IST]
Other articles published on Jan 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+