ಭಾರತದ ಆ ಬೌಲರ್ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ನಿರ್ಧರಿಸಲಿದ್ದಾನೆ: ಮಾಂಟಿ ಪನೆಸರ್

ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡ ಈಗಾಗಲೇ ಭಾರತಕ್ಕೆ ಬಂದಿದ್ದು ಕ್ವಾರಂಟೈನ್ ಪೂರೈಸುತ್ತಿದ್ದಾರೆ. ಟೆಸ್ಟ್ ಸರಣಿಯ ಆರಂಭಕ್ಕೆ ಬೆರಳೆಣಿಕೆಯಷ್ಟು ಮಾತ್ರವೇ ದಿನಗಳಿದ್ದು ದೊಡ್ಡ ಪೈಪೋಟಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಸಾಕಷ್ಟು ಹೈವೋಲ್ಟೇಜ್ ಪಡೆದುಕೊಂಡಿರುವ ಈ ಸರಣಿಯ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೆಸರ್ ಈ ಬಾರಿಯ ಸರಣಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಬಲ್ಲ ಟೀಮ್ ಇಂಡಿಯಾದ ಬೌಲರ್‌ನನ್ನು ಹೆಸರಿಸಿದ್ದಾರೆ. ಆ ಬೌಲರ್ ಇಂಗ್ಲೆಂಡ್ ವಿರುದ್ಧದ ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದ್ದಾನೆ ಎಂದು ಪನೆಸರ್ ಅಭಿಪ್ರಾಯ ಪಟ್ಟಿದ್ದಾರೆ

ಯಾರು ಆ ಬೌಲರ್?
ಮಾಂಟಿ ಪನೆಸರ್ ಹೆಸರಿಸಿದ ಆ ಬೌಲರ್ ಬೇರೆ ಯಾರೂ ಅಲ್ಲ ಆರ್ ಅಶ್ವಿನ್. ಟೀಮ್ ಇಂಡಿಯಾ ಪರವಾಗಿ ಅದ್ಭುತ ಬೌಲಿಂಗ್ ದಾಳಿ ನಡೆಸುವ ಆರ್ ಅಶ್ವಿನ್ ಓರ್ವ ಚಾಣಾಕ್ಷ ಬೌಲರ್, ಹೀಗಾಗಿ ಆತನ ವಿರುದ್ಧ ಉತ್ತಮ ಯೋಜನೆಯನ್ನು ರೂಪಿಸಬೇಕು. ಹಾಗಾದಲ್ಲಿ ಮಾತ್ರವೇ ಭಾರತದಲ್ಲಿ ಇಂಗ್ಲೆಂಡ್ ತಂಡ ಯಶಸ್ಸು ಗಳಿಸಲು ಸಾಧ್ಯವಿದೆ ಎಂದಿದ್ದಾರೆ.

ಆತ್ಮವಿಶ್ವಾಸದ ಮೂಟೆ ಹೊತ್ತು ಬಂದಿದ್ದಾರೆ
"ಆರ್ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸವನ್ನು ಅತ್ಯುತ್ತಮವಾಗಿ ಮುಗಿಸಿದ್ದಾರೆ. ಹೀಗಾಗಿ ಅವರು ಆತ್ಮವಿಶ್ವಾಸದ ಮೂಟೆಹೊತ್ತು ಬಂದಿದ್ದಾರೆ. ಆರ್ ಅಶ್ವಿನ್ ವಿರುದ್ಧ ಇಂಗ್ಲೆಂಡ್ ಆಟಗಾರರು ಯಾವ ರೀತಿಯಲ್ಲಿ ಆಡುತ್ತಾರೆ ಎಂಬುದು ಸರಣಿಯ ಫಲಿತಾಂಶವನ್ನು ನಿರ್ಧರಿಸುತ್ತದೆ. ಬೌಲಿಂಗ್ ಮಾಡುವ ವಿಧಾನದಲ್ಲಿ ಚಾಣಾಕ್ಷರಾಗಿರುವ ಅಶ್ವಿನ್ ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ" ಎಂದಿದ್ದಾರೆ ಮಾಂಟಿ ಪೆನೆಸರ್.

ಇಂಗ್ಲೆಂಡ್‌ಗೆ ಕಂಟಕವಾಗಬಲ್ಲ ಬೌಲರ್
ಇನ್ನು ಇದೇ ಸಂದರ್ಭದಲ್ಲಿ ಮಾಂಟಿ ಪೆನೆಸರ್ "ಭಾರತದ ನೆಲದಲ್ಲಿ ಇಂಗ್ಲೆಂಡ್ ತಂಡ ಸರಣಿಯನ್ನು ಜಯಿಸಬೇಕಾದರೆ ನಾಯಕ ಜೋ ರೂಟ್ ಉತ್ತಮ ಪ್ರದರ್ಶನವನ್ನು ನೀಡಲೇಬೇಕಿದೆ. 2012-13ರ ಸರಣಿಯಲ್ಲಿ ಅಲೆಸ್ಟರ್ ಕುಕ್ ಸುದೀರ್ಘ ಕಾಲ ಆಡಿದಂತೆ ಜೋ ರೂಟ್ ಪ್ರದರ್ಶನ ನೀಡಿದರೆ ಮಾತ್ರ ಸರಣಿ ಗೆಲ್ಲಲು ಸಾಧ್ಯವಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೂಟ್ ಅದ್ಭುತ ಪ್ರದರ್ಶನ ನೀಡಿದ್ದು ಭಾರತದಲ್ಲೂ ಅದೇ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಿದೆ" ಎಂದು ಪೆನೆಸರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications