Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಮತೋಲಿತ ಪಂಜಾಬ್ ತಂಡದ ಬಗ್ಗೆ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಸಂತಸ

Head coach Anil Kumble happy with balanced Punjab Kings squad after auction

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನವೇ ಹೆಸರು ಬದಲಾವಣೆ ಮಾಡಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಈ ಬಾರಿಯ ಐಪಿಎಲ್‌ನಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ತನ್ನ ಯೋಜನೆಯಲ್ಲಿ ಯಶಸ್ಸು ಸಾಧಿಸಿದೆ. ಹರಾಜಿನ ಬಳಿಕ ತಂಡದ ಸಾಮರ್ಥ್ಯವ ಬಗ್ಗೆ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಮ್ಮ ತಂಡ ಈಗ ಯುವ ಹಾಗೂ ಅನುಭವಿಗಳ ಸರಿಯಾದ ಸಮತೋಲನದಿಂದ ಕೂಡಿದ ತಂಡವಾಗಿದೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. "ತಂಡವನ್ನು ತಳದಿಂದ ಬಲ ಪಡಿಸಲು ಕೆಲ ಉತ್ತಮ ಬೈ ಗಳತ್ತ ದೃಷ್ಟಿ ನೆಟ್ಟಿದ್ದೆವು. ಈಗ ನಾವು ಸಮತೋಲಿನ ತಂಡವನ್ನು ಹೊಂದಿದ್ದೇವೆ. ಉತ್ತಮ ರೀತಿಯಲ್ಲಿ ಹೊರ ಬರಲು ನಾವು ಸರಿಯಾದ ಬಳಗವನ್ನು ಹೊಂದಿದ್ದೇವೆ " ಎಂದಿದ್ದಾರೆ ಅನಿಲ್ ಕುಂಬ್ಳೆ.

ಈ ಬಾರಿಯ ಹರಾಜಿನ್ಲಲಿ ಪಂಜಾಬ್ ಕಿಂಗ್ಸ್ ತಂಡ 9 ಹೊಸ ಆಟಗಾರರನ್ನು ಸೇರಿಸಿಕೊಂಡಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್ಸನ್, ಆಲ್‌ರೌಂಡರ್ ರಿಲೇ ಮೆರೆಡಿತ್ ಸೇರಿದಂತೆ ಶಾರೂಖ್ ಖಾನ್, ಮೋಯ್ಸಿಸ್ ಹೆನ್ರಿಕ್ಯೂಸ್ ಮತ್ತು ಡೇವಿಡ್ ಮಲನ್ ಅವರಂತಾ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ರಿಚರ್ಡ್ಸನ್ 14 ಕೋಟಿಗೆ ಪಂಜಾಬ್ ಪಾಲಾದರೆ ಮೆರೆಡಿತ್ ಅವರನ್ನು 8 ಕೋಟಿಗೆ ಪಂಜಾಬ್ ಸೇರಿಸಿಕೊಂಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ನಂಬರ್ 1 ಆಟಗಾರ ಡೇವಿಡ್ ಮಲನ್ ಅವರನ್ನು ಮೂಲ ಬೆಲೆ 1.5 ಕೋಟಿಗೆ ಸೇರ್ಪಡೆಗೊಳಿಸುವಲ್ಲಿ ಪಂಜಾಬ್ ಯಶಸ್ವಿಯಾಗಿದ್ದಾರೆ.

ಈ ಆಟಗಾರರ ಜೊತೆಗೆ ಫ್ಯಾಬಿಯನ್ ಅಲೆನ್, ಜಲಜ್ ಸಕ್ಸೇನಾ, ಸೌರಭ್ ಕುಮಾರ್, ಮತ್ತು ಉತ್ಕರ್ಶ್ ಸಿಂಗ್ ಕೂಡ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಹೊರ ಹುಮ್ಮಸ್ಸಿನಿಂದ ಕಣಕ್ಕಿಳಿಯಲು ಪಂಜಾಬ್ ತಂಡ ಯಶಸ್ವಿಯಾಗಿದೆ.

Story first published: Friday, February 19, 2021, 19:19 [IST]
Other articles published on Feb 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+