Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಮುಂದೆ ದೊಡ್ಡ ಬೇಡಿಕೆ ಇಟ್ಟ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌

ಜುಲೈ 11 ಗುರುವಾರ, ಕೆಲ ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ಆಗಿ ಗೌತಮ್‌ ಗಂಭೀರ್‌ ಅವರು ನೇಮಕವಾಗಿದ್ದಾರೆ. 2024ರ ಟಿ20 ವಿಶ್ವಕಪ್‌ ಬಳಿಕ ಚಾಂಪಿಯನ್‌ ಕೋಚ್‌ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು.

ಇದೀಗ ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಹೆಡ್‌ ಕೋಚ್ ಆಗಿ ಮಾಡಲಾಗಿದೆ. ಶ್ರೀಲಂಕಾ ಪ್ರವಾಸದಿಂದ ಟೀಮ್‌ ಇಂಡಿಯಾ ಜವಾಬ್ದಾರಿಯನ್ನು ಗಂಭೀರ್ ವಹಿಸಿಕೊಳ್ಳಲಿದ್ದಾರೆ. ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಗಂಭೀರ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೆ ದೊಡ್ಡ ಬೇಡಿಕೆ ಇಟ್ಟಿದ್ದಾರೆ.

Head coach Gautam Gambhir has made big demand in front of BCCI

ಗೌತಮ್‌ ಗಂಭೀರ್‌ ಬೇಡಿಕೆ ಏನು?

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಭಾರತಕ್ಕೆ ಹೊಸದಾಗಿ ನೇಮಕಗೊಂಡ ಹೆಡ್‌ ಕೋಚ್ ಗೌತಮ್ ಗಂಭೀರ್ ಅವರು ತಂಡದ ಕೋಚಿಂಗ್ ಸ್ಟಾಫ್‌ನಲ್ಲಿ ಮಾಜಿ ಡಚ್ ಕ್ರಿಕೆಟಿಗ ರಿಯಾನ್ ಟೆನ್ ಡೋಸ್ಚೇಟ್ ಅವರನ್ನು ಸೇರಿಸಿಕೊಳ್ಳಲು ಬಿಸಿಸಿಐಗೆ ಸೂಚಿಸಿದ್ದಾರೆ.

ನೆದರ್ಲ್ಯಾಂಡ್ಸ್ ಕ್ರಿಕೆಟಿಗ ರಿಯಾನ್ ಟೆನ್ ಡೋಸ್ಕೇಟ್ ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಕೆಕೆಆರ್‌ಗೆ ಫೀಲ್ಡಿಂಗ್ ಕೋಚ್ ಆಗಿ ರಿಯಾನ್ ಟೆನ್ ಡೋಸ್ಕೇಟ್ ಉತ್ತಮ ಕೊಡುಗೆ ನೀಡಿದ್ದಾರೆ.

ಗಂಭೀರ್ ಅವರ ಈ ಬೇಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಂತಿಮ ಅಧಿಕಾರ ಬಿಸಿಸಿಐಗಿದೆ. ಟೆನ್ ಡೋಸ್ಕೇಟ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್, ಮೇಜರ್ ಲೀಗ್ ಕ್ರಿಕೆಟ್ ಮತ್ತು ಐಎಲ್‌ಟಿ -20 ಟೂರ್ನಿಗಳಲ್ಲಿ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿದ್ದಾರೆ.

ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಟೀಮ್‌ ಇಂಡಿಯಾದ ಕೋಚಿಂಗ್ ಸ್ಟಾಫ್‌ಗೆ ಸೇರಿಕೊಳ್ಳಬಹುದು ಎಂದು ಕ್ರಿಕ್‌ಬಜ್ ವರದಿಯಲ್ಲಿ ಹೇಳಿತ್ತು.

ಆದರೆ, ಟೆನ್ ಡೋಸ್ಚೇಟ್ ಭಾರತ ತಂಡವನ್ನು ಸೇರಿಕೊಂಡರೆ, ಅವರ ಪಾತ್ರವೇನು ಎಂಬುದನ್ನು ಮುಖ್ಯವಾಗಿದೆ. ಏಕೆಂದರೆ, ಹಾಲಿ ಕೋಚ್ ಟಿ ದಿಲೀಪ್ ಅವರ ಅವಧಿಯನ್ನು ವಿಸ್ತರಿಸಲು ಬಿಸಿಸಿಐ ಚಿಂತನೆ ನಡೆಸಿದೆ. ನೆದರ್ಲೆಂಡ್ಸ್‌ನ ರಿಯಾನ್ ಡೋಸ್ಕೇಟ್ ಪ್ರಸ್ತುತ ಫೀಲ್ಡಿಂಗ್ ಕೋಚ್ ಪಾತ್ರದಲ್ಲಿದ್ದಾರೆ.

ಟೀಮ್‌ ಇಂಡಿಯಾ ಕೋಚಿಂಗ್ ಸ್ಟಾಫ್‌

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಬ್ಯಾಟಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಇತರ ಸದಸ್ಯರ ಅಧಿಕಾರಾವಧಿಯು ಟಿ 20 ವಿಶ್ವಕಪ್‌ನೊಂದಿಗೆ ಕೊನೆಗೊಂಡಿತು. ಪ್ರಸ್ತುತ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಲಾಗಿದ್ದು, ಇತರ ಸಹಾಯಕ ಸಿಬ್ಬಂದಿ ನೇಮಕವು ಪರಿಗಣನೆಯಲ್ಲಿದೆ.

Story first published: Thursday, July 11, 2024, 14:09 [IST]
Other articles published on Jul 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+